ಶ್ರೀ ಕ್ಷೇತ್ರ ಮೂಡುಸಗ್ರಿಯಲ್ಲಿ ಹನುಮ ಜಯಂತಿ ಉತ್ಸವ ಪೇಜಾವರ ಶ್ರೀಗಳ ತುಲಾಭಾರ ಸೇವೆ.
ಉಡುಪಿ: ಅತ್ಯಂತ ಕಾರಣಿಕ ಕ್ಷೇತ್ರಗಳಲ್ಲಿ ಒಂದಾದ ಉಡುಪಿ ಜಿಲ್ಲೆಯ ಗುಂಡಿಬೈಲಿನ ಮೂಡುಸಗ್ರಿ ಪಂಚಶಕ್ತಿಗಳ ಸನ್ನಿಧಾನದಲ್ಲಿ ಹನುಮ ಜಯಂತಿ ಉತ್ಸವದ ಪ್ರಯುಕ್ತ ಶ್ರೀ ಮುಖ್ಯಪ್ರಾಣ ದೇವರಿಗೆ ಸೀಯಾಳಭಿಷೇಕ ಮತ್ತು ಪವಮಾನ ಯಾಗ ಹಾಗೂ ಪೇಜಾವರ ಶ್ರೀಗಳ ತುಲಭಾರ ಸೇವೆ ಆದಿತ್ಯವಾರ ನಡೆಯಿತು.
ಸೇವೇಯಲ್ಲಿ ಪಾಲ್ಗೋಂಡು ಮಾತನಾಡಿದ ಶ್ರೀಗಳು ಗುಂಡಿಬೈಲ್ ಭಾಸ್ಕರ್ ಪೂಜಾರಿಯಂತಹ ಸಜ್ಜನ ವ್ಯಕಿಗಳು ಇರುವುದರಿಂದ ಕಲಿಯುಗದಲ್ಲಿಯೂ ಕೂಡ ದೇವರು ಜನಸಾಮನ್ಯರಿಗೆ ಪ್ರತ್ಯಕ್ಷನಾಗಿ ಮಾತಾಡಿಸುವುದಿದೆ ಅಲ್ಲದೆ ದೇವರ ಸೇವೆಯಲ್ಲಿ ಸದಾ ತಲ್ಲಿಣರಾದವರಿಗೆ ದೇವರು ಒಳಿಯುವುದರಲ್ಲಿ ಯಾವುದೇ ಅನುಮಾನವಿಲ್ಲ ಹಾಗೂ ಇಲ್ಲಿಗೆ ಬರುವಂತಹ ಭಕ್ತರ ಕಷ್ಟವನ್ನ ಆಳಿಸಿ ಅದಕ್ಕೆ ಬೇಕಾದ ಸೂಕ್ತ ಸಲಹೆಗಳನ್ನ ನೀಡಿ ಅವರನ್ನ ರಕ್ಷಿಸುತ್ತಿರುವುದು ಈ ಜಾಗದ ಕಾರ್ಣಿಕ ಮತ್ತು ಪೂಜಾರಿಯವರ ಶ್ರದ್ಧೆ ಮತ್ತು ಭಕ್ತಿ ಎಂದರು.
ಈ ಕಾರ್ಯಕ್ರಮದ ಪ್ರಯುಕ್ತ ಮಧ್ಯಾಹ್ನ ಅನ್ನಸಂತರ್ಪಣೆ ಕಾರ್ಯಕ್ರಮ ನಡೆದವು. ಊರು ಪರವೂರಿನ ಭಕ್ತರು ಪುಣ್ಯಕಾರ್ಯದಲ್ಲಿ ಸಾಕ್ಷಿಯಾದರು.
ಇಂದು ಸಂಜೆ ತಿಂಗಳ ಹೂವಿನ ಪೂಜೆ ಮತ್ತು ಕೊರಗಜ್ಜ ದೈವದ ನೇಮೊತ್ಸವ ಮತ್ತು ವಿವಿಧ ಧಾರ್ಮಿಕ , ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿರುವುದು.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…