ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರ ಕಟೀಲು : ದೇವರ ದರ್ಶನ ಸೇರಿದಂತೆ ಭಕ್ತಾದಿಗಳ ಪಾಲ್ಗೊಳ್ಳುವಿಕೆ ಪೂರ್ಣವಾಗಿ ನಿರ್ಬಂಧ -Vishwanews24

ಕಟೀಲು : ಕೊರೊನ ವೈರಸ್ ಅನ್ನು ಹತ್ತಿಕ್ಕುವ ಕ್ರಮವಾಗಿ ದೇವಾಲಯಗಳಲ್ಲಿ ಎಲ್ಲ ಸೇವೆಗಳನ್ನು ರದ್ದುಪಡಿಸಿ ಈಗಾಗಲೇ ಜಿಲ್ಲಾಧಿಕಾರಿಗಳ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿದೆ. ಭಕ್ತರಿಗೆ ದೇವರ ದರ್ಶನದ ಅವಕಾಶ ಮಾತ್ರ ಕಲ್ಪಿಸಲಾಗಿತ್ತು.‌

ಇದೀಗ ಮಾನ್ಯ ಆಯುಕ್ತರ ಸುತ್ತೋಲೆ ದೇವಳಕ್ಕೆ ತಲುಪಿದ್ದು ಅದರಂತೆ ದೇವರ ಪೂಜಾವಿಧಿಗಳನ್ನು ಸಿಬ್ಬಂದಿಗಳ ಜೊತೆಗೂಡಿ ಮಾಡುವುದನ್ನು ಹೊರತುಪಡಿಸಿ ದರ್ಶನವೂ ಸೇರಿದಂತೆ ಭಕ್ತಾದಿಗಳ ಪಾಲ್ಗೊಳ್ಳುವಿಕೆಯನ್ನು ಪೂರ್ಣವಾಗಿ ನಿರ್ಬಂಧಿಸಲಾಗಿದೆ.

ಕೊರೊನವನ್ನು ಹತ್ತಿಕ್ಕುವ ದೃಷ್ಟಿಯಿಂದ ಸರಕಾರಕ್ಕೆ ಈ ಸುತ್ತೋಲೆ ಅನಿವಾರ್ಯವಾಗಿದೆ ಎನ್ನುವುದನ್ನು ನಾವು ಮನಗಾಣಬೇಕು. ಲೋಕಹಿತಕ್ಕೆ ಸದ್ಭಕ್ತರು ಶ್ರಮಿಸಬೇಕು. ಆದ್ದರಿಂದ ಎಲ್ಲ ಭಕ್ತಾದಿಗಳು ಈ ವಿಚಾರದಲ್ಲಿ ಸಹಕರಿಸಬೇಕಾಗಿ ಕಳಕಳಿಯಿಂದ ವಿನಂತಿಸುತ್ತೇವೆ.

ಕಟೀಲಮ್ಮನಿಮ್ಮ ನಿಮ್ಮ ಮನೆಯ ದೇವರಕೋಣೆಯಲ್ಲಿಯೇ ಸನ್ನಿಹಿತರಾಗಿದ್ದಾರೆ. ಅಲ್ಲಿ ಕಟೀಲಮ್ಮನಿಗೆ ಕೈ ಮುಗಿದು ಅಲ್ಲೇ ನಿತ್ಯ ದೇವಿಯನ್ನು ಆರಾಧಿಸಬೇಕು.

ಮನೆಯಲ್ಲಿ ಸುಮ್ಮನಿರುವ ಬದಲು ಪ್ರತಿಯೊಬ್ಬರೂ ಕೋಟಿಜಪ ಯಜ್ಞದಲ್ಲಿ ನಾವೆಲ್ಲ ಸೇರಿ ಜಪಿಸಿದ

*ಸರ್ವಮಂಗಲಮಾಂಗಲ್ಯೇ ಶಿವೇ ಸರ್ವಾರ್ಥಸಾಧಿಕೇ |
ಶರಣ್ಯೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತು ತೇ ||*
ಮಂತ್ರದ ಜೊತೆಗೆ
*ದೇಹಿ ಸೌಭಾಗ್ಯಮಾರೋಗ್ಯಮ್ ದೇಹಿ ದೇವಿ ಪರಮ್ ಸುಖಮ್ |
ರೂಪಂ ದೇಹಿ ಜಯಂ ದೇಹಿ ಯಶೋ ದೇಹಿ ದ್ವಿಷೋ ಜಹಿ||*

ಮಂತ್ರವನ್ನು ಪಠಿಸುತ್ತಾ ಕೊರೊನಾ ಎಂಬ ಮಹಾಮಾರಿ ತೊಲಗುವಂತೆ, ಎಲ್ಲರಿಗೂ ಆರೋಗ್ಯನೀಡುವಂತೆ ಪ್ರಾರ್ಥಿಸೋಣ.
ಈ ಮಹಾಮಾರಿ ನಿವಾರಣೆಯಾದ ನಂತರ ಎಲ್ಲರಿಗೂ ದೇವರ ದರ್ಶನದ ಅವಕಾಶ ದೊರಕಿದ ಮೇಲೆ ಪ್ರತಿಯೊಬ್ಬರೂ ಬರಬೇಕಾಗಿ ಈ ಮೂಲಕ ವಿನಂತಿಸುತ್ತೇವೆ.

ಆಡಳಿತಮಂಡಳಿ
ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಕಟೀಲು

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

14 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

14 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

15 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

15 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

15 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

15 hours ago