Featured

ಶ್ರೀ ರಾಮಸೇನೆಯೊಳಗೆ ಬುಗಿಲೆದ್ದ ಭಿನ್ನಮತ : ಚುನಾವಣೆ ಸ್ಪರ್ಧಿಸಿ ಮುತಾಲಿಕ್ ಬೀದಿ ಪಾಲಾಗುವುದು ಬೇಡ : ಮೋಹನ್ ಭಟ್ – Vishwanews24

ಶ್ರೀ ರಾಮಸೇನೆಯೊಳಗೆ ಬುಗಿಲೆದ್ದ ಭಿನ್ನಮತ ..

ಮುತಾಲಿಕ್ ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಆಗ್ರಹ..

ಚುನಾವಣೆ ಸ್ಪರ್ಧಿಸಿ ಮುತಾಲಿಕ್ ಬೀದಿ ಪಾಲಾಗುವುದು ಬೇಡ

ಮೋಹನ್ ಭಟ್ ಶ್ರೀ ರಾಮಸೇನೆಯ ಮಂಗಳೂರು ವಿಭಾಗಧ್ಯಕ್ಷ

ಉಡುಪಿ :ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಾರ್ಕಳದಿಂದ ಸ್ಪರ್ಧೆ ವಿಚಾರ

ಶ್ರೀರಾಮ ಸೇನೆ ಸಂಘಟನೆಯೊಳಗೆ ಬುಗಿಲೆದ್ದ ಭಿನ್ನಮತ

ಶ್ರೀರಾಮಸೇನೆ ಮಂಗಳೂರು ವಿಭಾಗದಿಂದ ಮುತಾಲಿಕ್ ಸ್ಪರ್ಧೆಗೆ ವಿರೋಧ

ಚುನಾವಣಾ ಕಣದಿಂದ ಹಿಂದಕ್ಕೆ ಸರಿಯುವಂತೆ ಆಗ್ರಹ

ಮಂಗಳೂರು ವಿಭಾಗೀಯ ಅಧ್ಯಕ್ಷ ಮೋಹನ್ ಭಟ್ ರಿಂದ ಒತ್ತಾಯ

ಮುತಾಲಿಕ್ ಸ್ಪರ್ಧೆಯಿಂದ ಶ್ರೀರಾಮ ಸೇನೆ ಸಂಘಟನೆ ಒಡೆದು ಹೋಳಾಗುತ್ತಿದೆ

ಸೋಲುವ ಕಣದಲ್ಲಿ ಮುತಾಲಿಕ್ ಸ್ಪರ್ಧೆ ಯಾಕೆ?

ಚುನಾವಣಾ ಕಣಕ್ಕೆ ಇಳಿಯುವ ಮುನ್ನ ಮುತಾಲಿಕ್ ಕಾರ್ಯಕರ್ತರನ್ನು ವಿಶ್ವಾಸಕ್ಕೆ ಪಡೆದಿಲ್ಲ

ಕಾರ್ಕಳದ ಓರ್ವ ಉದ್ಯಮಿ ಹಾಗೂ ವಕೀಲರ ಪ್ರಭಾವದಿಂದ ಮುತಾಲಿಕ್ ಸ್ಪರ್ಧಿಸುತ್ತಿದ್ದಾರೆ

ಸಚಿವ ಸುನಿಲ್ ಕುಮಾರ್ ವಿರೋಧಿಗಳು ಮುತಾಲಿಕ್ ರನ್ನು ಬಲಿಕೊಡುತ್ತಿದ್ದಾರೆ

ಬಿಜೆಪಿ ಸಂಘ ಪರಿವಾರದ ಜೊತೆ ಮಾತನಾಡಿ ಗೆಲ್ಲುವ ಕ್ಷೇತ್ರದಿಂದ ಸ್ಪರ್ಧಿಸಬೇಕು

ಪ್ರಮೋದ್ ಮುತಾಲಿಕ್ ರಿಗೆ ನಮ್ಮ ಬೆಂಬಲ ಇಲ್ಲ

ಶ್ರೀರಾಮ ಸೇನ ಸಂಘಟನೆಯಿಂದ ಪ್ರತ್ಯೇಕಗೊಂಡು ಬೇಕಾದರೆ ಸ್ಪರ್ದಿಸಲಿ

ಪ್ರಮೋದ್ ಮುತಾಲಿಕ್ ನಮ್ಮ ಗುರುಗಳು ಅವರು ಸೋಲುವುದನ್ನು ನಾವು ಬಯಸುವುದಿಲ್ಲ

ಫೆಬ್ರವರಿ 20ರಂದು ಈ ಕುರಿತು ಚರ್ಚಿಸಲು ಕಾರ್ಯಕರ್ತರ ಬೈಠಕ್

ಇನ್ನೂ ಕಾಲ ಮಿಂಚಿಲ್ಲ ಸ್ಪರ್ಧೆಯಿಂದ ಹಿಂದಕ್ಕೆ ಸರಿಯುವಂತೆ ಮೋಹನ್ ಭಟ್ ಒತ್ತಾಯ

ಮುತಾಲಿಕರಿಗೆ ಗೌರವ ಪೂರಕ ಸ್ಥಾನ ಮಾನ ಸಿಕ್ಕಿದರೆ ಓಕೆ

ಮುತಾಲಿಕ್ ನನಗೆ ಇನ್ನು ಮುಂದೆ ರಾಜಕೀಯ ಬೇಡ ಎನ್ನುತ್ತಿದ್ದರು

ಕೇವಲ ಸಂಘಟನೆ ಮಾಡಿಕೊಂಡು ಇರುತ್ತೇನೆ ಎನ್ನುತ್ತಿದ್ದರು

ಈ ಬಾರಿ ವಿಧಾನಸೌಧ ಮೆಟ್ಟಿಲು ಏರಬೇಕು ಅನ್ನೋದು ನಮಗೂ ಆಸೆ ಇದೆ

ಆದರೆ ಕಾರ್ಕಳದಿಂದ ಸ್ಪರ್ಧಿಸಿ ಸಂಘಟನೆಯಲ್ಲಿ ಗೊಂದಲ ಉಂಟು ಮಾಡಿದ್ದಾರೆ

20 ವರ್ಷ ಕಷ್ಟಪಟ್ಟು ಸಂಘಟನೆ ಕಟ್ಟಿದ್ದೇವೆ

ಸಂಘಟನೆ ಕಟ್ಟುತ್ತಾ ಬಂದಂತೆ ಕೆಲವರು ಹೊಡೆಯುತ್ತಾ ಹೋಗುತ್ತಾರೆ

ಮುತಾಲಿಕ್ ಸ್ಪರ್ಧೆಯಿಂದ ಕಾರ್ಯಕರ್ತರ ಒಳಗೆ ಗೊಂದಲ ಉಂಟಾಗಿದೆ

ಬಿಜೆಪಿಯನ್ನು ನಾವು ಹಿಂದುತ್ವದ ಪಕ್ಷ ಎಂದು ನಂಬಿದ್ದೇವೆ

ಕಾರ್ಕಳದಲ್ಲಿ ಮುತಾಲಿಕ್ ನಿಂತು ಕಾಂಗ್ರೆಸ್ಸಿಗೆ ಲಾಭ ಆಗೋದು ಬೇಡ

ಬಿಜೆಪಿ ಸಂಘ ಪರಿವಾರ ಇವರಿಗೆ ಸ್ಥಾನಮಾನ ಕೊಡಲು ಸಿದ್ಧವಿದೆ

ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಳ್ಳಬೇಕಿತ್ತು

ಕಾರ್ಯಕರ್ತರ ಜೊತೆ ಬೈಟಕ್ ಮಾಡದೆ ನಿರ್ಧಾರ ಕೈಗೊಂಡಿದ್ದಾರೆ

ಇವರು ಕಾರ್ಕಳದಲ್ಲಿ ಏನು ಸರ್ವೇ ಮಾಡಿದ್ದಾರೆ ?ಕಾರ್ಕಳದ ಬಗ್ಗೆ ಏನು ಗೊತ್ತು?

ಸುನಿಲ್ ಗೆ ಆಗದ ವ್ಯಕ್ತಿಗಳು ಮುತಾಲಿಕರನ್ನು ಎತ್ತಿ ಕಟ್ಟಿದ್ದಾರೆ

ಕಾರ್ಯಕರ್ತರನ್ನು ಬಿಟ್ಟರೆ ಮುತಾಲಿಕ್ ಜೊತೆ ಯಾರಿದ್ದಾರೆ

ನಾಳಿನ ದಿನ ಇವರ ಹಿಂದೆ ಹೋದವರ ಗತಿ ಏನು?

ಸಂಘಟನೆ ಮಾಡಿದಷ್ಟು ರಾಜಕೀಯ ಸುಲಭ ಅಲ್ಲ

ದುಡ್ಡು ಹಣ ವ್ಯವಸ್ಥೆ ಇದ್ದರೆ ಮಾತ್ರ ರಾಜಕೀಯ

ಸುನಿಲ್ ಕುಮಾರ್ ಅವರ ಪ್ರಭಾವದಿಂದ ನಾವು ಈ ರೀತಿ ಹೇಳುತ್ತಿಲ್ಲ

ಮಂಗಳೂರು ವಿಭಾಗ ನನ್ನ ಜವಾಬ್ದಾರಿ

ಉಡುಪಿ, ಮಂಗಳೂರು ಉತ್ತರ ಕನ್ನಡ ಸಹಿತ ನಾಲ್ಕು ಜಿಲ್ಲೆ ನನ್ನ ಜವಾಬ್ದಾರಿ

ನನಗೆ ಬಿಜೆಪಿಯ ಚಿಂತೆ ಇಲ್ಲ ನನ್ನ ಕಾರ್ಯಕರ್ತರ ಚಿಂತೆ ಇದೆ

ನಮ್ಮ ಕಾರ್ಯಕರ್ತರು ಬೀದಿಗೆ ಬೀಳದಂತೆ ನಾನು ಎಚ್ಚರಿಕೆವಹಿಸಬೇಕಾಗಿದೆ

ಸಂಘ ಪರಿವಾರಕ್ಕೆ ಮನವಿ ಕೊಟ್ಟು ಮಾತನಾಡೋಣ

ಮುತಾಲಿಕರಿಗೆ ಈಗ 68 ವರ್ಷ ವಯಸ್ಸು

ಈಗ ಸೋತರೆ ಅದಕ್ಕಿಂತ ದೊಡ್ಡ ಅವಮಾನ ಉಂಟಾ

ಇಷ್ಟರವರೆಗೆ ಸಂಪಾದಿಸಿದ ಹೆಸರು ಸಂಘಟನೆ ಎಲ್ಲಾ ಮುರಿದು ಬೀಳುತ್ತೆ

ಕಾರ್ಯಕರ್ತರು ಕೈ ಬಿಟ್ಟು ಹೋಗುತ್ತಾರೆ ಯಾವ ಪುರುಷಾರ್ಥಕ್ಕೆ ಈ ಸ್ಪರ್ಧೆ?

ಒಬ್ಬ ಉದ್ಯಮಿ ಮತ್ತು ವಕೀಲಗೆ ಸುನಿಲ್ ಕುಮಾರ್ ವಿರುದ್ಧ ವೈಯಕ್ತಿಕ ದ್ವೇಷ ಇದೆ

ಅವರ ದ್ವೇಶ ಸಾಧನೆ ಗೋಸ್ಕರ ಮುತಾಲಿಕಂತ ವ್ಯಕ್ತಿಯನ್ನು ಬಲಿಕೊಡುತ್ತಿದ್ದಾರೆ

ಯಾರು, ದ್ವೇಷ ಸಾಧನೆ ಮಾಡುತ್ತಿದ್ದಾರೋ ಅವರೇ ಚುನಾವಣೆಗೆ ನಿಲ್ಲಬಹುದಿತ್ತಲ್ಲ?

ಕಾರ್ಕಳದ ಇಬ್ಬರು ವ್ಯಕ್ತಿಗಳಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು

ಅದಕ್ಕಾಗಿ ಮುತಾಲಿಕರನ್ನು ಎತ್ತಿ ಕಟ್ಟಿದ್ದಾರೆ

ಈ ಬಗ್ಗೆ ಎರಡು ತಿಂಗಳ ಹಿಂದೆ ನನ್ನ ಮನೆಯಲ್ಲಿ ಚರ್ಚೆಯಾಗಿತ್ತು

ಹಲವು ಹಿಂದೂ ಸಂಘಟನೆಗಳ ಪ್ರಮುಖರು ಕೂಡ ಬಂದಿದ್ದರು

ಆ ವ್ಯಕ್ತಿಗಳ ಜೊತೆ ಸೇರಬೇಡಿ ಎಂದು ಎಲ್ಲರೂ ಬುದ್ಧಿವಾದ ಹೇಳಿದ್ದರು

ಈಗ ಪ್ರಮೋದ್ ಮುತಾಲಿಕ್ ಅಭಿಮಾನಿ ಬಳಗ ಕಟ್ಟಿಕೊಂಡಿದ್ದಾರೆ

ಹಾಗಾದರೆ ಶ್ರೀರಾಮ ಸೇನೆ ಸಂಘಟನೆ ಕಾರ್ಯಕರ್ತರು ಬೇಡವಾ?

ಶ್ರೀರಾಮ ಸೇನೆಗೆ ಒಳ್ಳೆ ಹೆಸರಿದೆ ಕಾರ್ಯಕರ್ತರು ಇದ್ದಾರೆ

ಕಾರ್ಕಳದಲ್ಲಿ ಪ್ರಮೋದ್ ಮುತಾಲಿಕ್ ಸ್ಪರ್ಧೆ ಮಾಡುವುದಕ್ಕೆ ನಮ್ಮ ವಿರೋಧ

ಕಾರ್ಕಳ ಸ್ಥಾನವನ್ನು ಬಿಜೆಪಿಯವರು ಮುತಾಲಿಕರಿಗೆ ಬಿಟ್ಟುಕೊಟ್ಟರೆ ಸಹಮತ ಇದೆ

ಮುತಾಲಕರಿಗೆ ಆಗುವ ಅವಮಾನ ನೋಡುವ ಶಕ್ತಿ ನಮಗಿಲ್ಲ

ನಮ್ಮ ಊರಿನಲ್ಲಿ ಮುತಾಲಿಕ್ ಬೀದಿಪಾಲಾಗುವುದು ಬೇಡ

Vishwa News 24

Recent Posts

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

2 hours ago

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ -vishwanews24

ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…

4 hours ago

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ -vishwanews24

ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…

4 hours ago

ಸೌಜನ್ಯಾ ಪ್ರಕರಣ: ಎಸ್‌ಐಟಿಯಲ್ಲಿರುವ ಎಲ್ಲ ಅಧಿಕಾರಿಗಳು ಪರಿಪೂರ್ಣರಾಗಿಲ್ಲ ಎಂಬ ಸಂಶಯವಿದೆ : ಕಲ್ಲಡ್ಕ ಪ್ರಭಾಕರ ಭಟ್‌ -vishwanews24

ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್‌ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…

4 hours ago

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ

ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…

4 hours ago

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು -vishwanews24

ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…

5 hours ago