ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಮಂಗಳೂರಿನ ಯಕ್ಷ ತುಳು ಪರ್ಬ ಎನ್ನುವ ಸಂಘಟನೆಯಿಂದ ವಿನೂತನ ಕಾರ್ಯಕ್ರಮ -Vishwanews24

ಸಂಕಷ್ಟದಲ್ಲಿರುವ ಯಕ್ಷಗಾನ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಮಂಗಳೂರಿನ ಯಕ್ಷ ತುಳು ಪರ್ಬ ಎನ್ನುವ ಸಂಘಟನೆಯಿಂದ ವಿನೂತನ ಕಾರ್ಯಕ್ರಮ -Vishwanews24

ಮಂಗಳೂರು: ಜಗತ್ತಿಗೆ ಬಂದೆರಗಿದ ಮಹಾಮಾರಿ ಕೊರೋನಾದಿಂದಾಗಿ ಕಂಡು ಕೇಳರಿಯದ ಸಂಕಷ್ಟಗಳು ಎದುರಾಗಿವೆ.

ಕರಾವಳಿ ಜಿಲ್ಲೆಗಳ ಕಲಾಪ್ರಕಾರಗಳ ವಿಚಾರಕ್ಕೆ ಬಂದರೆ ಯಕ್ಷಗಾನಕ್ಕೆ ವಿಶೇಷ ಪ್ರಾಧಾನ್ಯತೆಯಿದೆ. ವರ್ಷದ ಆರು ತಿಂಗಳ ಕಾಲ ನಿರಂತರವಾಗಿ ನಡೆಯುವ ಯಕ್ಷಗಾನ ಪ್ರದರ್ಶನಗಳಿಗೆ ಈ ಬಾರಿ ಕೊರೋನಾ ಆರಂಭದಲ್ಲೇ ವಿಘ್ನವನ್ನು ತಂದೊಡ್ಡಿಟ್ಟು ಇದರಿಂದಾಗಿ ಯಕ್ಷಗಾನವನ್ನೇ ವೃತ್ತಿಯನ್ನಾಗಿ ಮಾಡಿಕೊಂಡಿದ್ದ ಲಕ್ಷಾಂತರ ಕಲಾವಿದರು ಸಾಕಷ್ಟು ನಷ್ಟವನ್ನು ಅನುಭವಿಸಿದ್ದರು.

ಇದೀಗ ಯಕ್ಷಗಾನ ಕಲಾವಿದರಿಗೆ ನೆರವಾಗುವ ಉದ್ದೇಶದಿಂದ ಮಂಗಳೂರಿನ ಯಕ್ಷ ತುಳು ಪರ್ಬ ಎನ್ನುವ ಸಂಘಟನೆ ವಿನೂತನ ಕಾರ್ಯಕ್ರಮವನ್ನು ರೂಪಿಸಿದೆ. ಈಗಾಗಲೇ ನೂರಾರು ಕಲಾವಿದರನ್ನು ಒಗ್ಗೂಡಿಸಿ ತುಳು ಯಕ್ಷಗಾನ ಚಿತ್ರೀಕರಣ ಮಾಡಲಾಗಿದೆ. ಆಗಸ್ಟ್ 29ರಿಂದ ಸೆಪ್ಟೆಂಬರ್ 2ರವರೆಗೆ ನಡೆದ ಕಾರ್ಯಕ್ರಮಗಳಲ್ಲಿ ಎ,ಬಿ,ಸಿ ಎನ್ನುವ ವಿಭಾಗಗಳಲ್ಲಿ ಒಟ್ಟು 1,50,000 ರೂ.ಗಳನ್ನು ಕಲಾವಿದರಿಗೆ ನೀಡಲಾಗಿದೆ.

ಇದೀಗ ಮತ್ತೆ ಸೆಪ್ಟೆಂಬರ್ 12ರಿಂದ ದಕ್ಷಿಣ ಕನ್ನಡ ಮತ್ತು ಕೇರಳದ ವಿವಿಧ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತೀ 15 ಕಲಾವಿದರಿಗೆ 10 ಕಾರ್ಯಕ್ರಮಗಳು ಸಿಗುವ ಹಾಗೆ 1 ತಂಡ, ಹೀಗೆ ಒಟ್ಟು 100 ಕಲಾವಿದರಿಗೆ ಅವಕಾಶ ಸಿಗುವ ರೀತಿ ವ್ಯವಸ್ಥೆಯ ಕಾರ್ಯಕ್ರಮ ಇದಾಗಿದೆ. ಒಟ್ಟು 10 ದಿನಗಳ ಯಕ್ಷಗಾನ ಪ್ರದರ್ಶನದಲ್ಲಿ ಸಂಗ್ರಹಿಸಲ್ಪಡುವ 3,00,000 ರೂ.ಗಳನ್ನು ಕಲಾವಿದರಿಗೆ ನೀಡುವ ಉದ್ದೇಶ ಯಕ್ಷ ತುಳು ಪರ್ಬದ್ದು. ಈ ನಿಟ್ಟಿನಲ್ಲಿ ಕಲಾವಿದರಿಗಾಗಿ ಕಲಾವಿದರ ಶ್ರಮವನ್ನು ಸಾಕಾರಗೊಳಿಸುವ ಹೊಣೆ ಕಲಾಭಿಮಾನಿಗಳದ್ದು ಎಂದು ಸಂಘಟನೆಯು ಕಲಾಪ್ರೇಮಿಗಳ ಸಹಕಾರವನ್ನು ಬಯಸುತ್ತಿದೆ.

ಹೆಚ್ಚಿನ ಮಾಹಿತಿಗಾಗಿ ಯಕ್ಷತುಳು ಪರ್ಬದ ಅಧ್ಯಕ್ಷರಾದ ಡಿ. ಮನೋಹರ್ ಕುಮಾರ್ ಮೊ.ಸಂ: 99727 24359,

ಕಾರ್ಯದರ್ಶಿ ಸುರೇಂದ್ರ ಮಲ್ಲಿ -98457 33485,

ಜೊತೆ ಕಾರ್ಯದರ್ಶಿ ಕರುಣಾಕರ ಶೆಟ್ಟಿ – 9008946706

ಇವರನ್ನು ಸಂಪರ್ಕಿಸಬಹುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

Vishwa News 24

Recent Posts

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು – vishwanews24

ಮೈಸೂರು: ಕಾಲೇಜು ಕ್ಯಾಂಪಸ್‌ನಲ್ಲೇ ಹೃದಯಾಘಾತ ; ಕುಸಿದುಬಿದ್ದು ವಿದ್ಯಾರ್ಥಿ ಸಾವು ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಖ್ಯಾತ ಮರಿಮಲ್ಲಪ್ಪ ಕಾಲೇಜು…

2 days ago

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ – vishwanews24

ಅಡ್ಡ ಮತದಾನ ಮೂಲಕ ಪಕ್ಷಕ್ಕೆ ಹಾಗೂ ಮೈತ್ರಿಗೆ ದ್ರೋಹ ಬಗೆದವರನ್ನು ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ : ವಿಜಯೇಂದ್ರ ಆಕ್ರೋಶ ಬೆಂಗಳೂರು:…

2 days ago

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ – vishwanews24

ಭಟ್ಕಳ ಲವ್ ಜಿಹಾದ್ ಆರೋಪ : ಯುವಕ ಅರೆಸ್ಟ್‌ ಕಾರವಾರ: ಉತ್ತರ ಕನ್ನಡ  ಜಿಲ್ಲೆಯ ಭಟ್ಕಳದಲ್ಲಿ ಕಿಚ್ಚು ಹಚ್ಚಿದ ಹಿಂದೂ,…

2 days ago

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ – vishwanews24

ಪರಿಷತ್ ಚುನಾವಣೆಯಲ್ಲಿ ನಮಗೆ ಮತ ನೀಡಿದ ಬೇರೆ ಪಕ್ಷದ ವಿಶ್ವಾಸವನ್ನುನಾವು ಉಳಿಸಿಕೊಳ್ಳುತ್ತೇವೆ: ಡಿ.ಕೆ.ಶಿವಕುಮಾರ್‌ ಬೆಂಗಳೂರು: ವಿಧಾನ ಪರಿಷತ್‌ ಚುನಾವಣೆಯಲ್ಲಿ ನಮ್ಮ…

2 days ago

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ – vishwanews24

ವಚನಾನಂದ ಸ್ವಾಮೀಜಿ ವಿರುದ್ಧ ಪೋಕ್ಸೋ ಪ್ರಕರಣ: ಜೂ. 30ಕ್ಕೆ ಮುಂದೂಡಿಕೆ ದಾವಣಗೆರೆ: ಹರಿಹರದ  ವಚನಾನಂದ ಸ್ವಾಮೀಜಿ ಪೋಕ್ಸೋ ಪ್ರಕರಣ ಆದೇಶವನ್ನು…

3 days ago

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ – ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು – vishwanews24

ವಿಟ್ಲ : ಲಾರಿಯಲ್ಲಿ ತಾಂತ್ರಿಕ ವೈಫಲ್ಯ - ಸರಿಪಡಿಸುವ ವೇಳೆ ಚಕ್ರಗಳ ಅಡಿಗೆ ಸಿಲುಕಿ ಚಾಲಕ ಸ್ಥಳದಲ್ಲೇ ಮೃತ್ಯು ವಿಟ್ಲ:…

3 days ago