ಕುಂದಾಪುರ: ಇದೇ ಬರುವ ಎಪ್ರಿಲ್ ತಿಂಗಳಲ್ಲಿ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಪ್ಲೈ ಓವರ್ ಸಂಚಾರ ಮುಕ್ತವಾಗಲಿದೆ. ಹಲವಾರು ಸಭೆ, ಚರ್ಚೆ, ಟೋಲ್ ಬಂದ್ ಎಚ್ಚರಿಕೆ ನಂತರ ಕಾಮಗಾರಿಗೆ ವೇಗ ಸಿಕ್ಕಿದ್ದು, ಕಾಮಗಾರಿ ಪೂರ್ಣಗೊಳ್ಳವ ಹಂತಕ್ಕೆ ಬಂದಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.
ಪ್ಲೇ ಓವರ್ ಕಾಮಗಾರಿ ಮುಗಿಸಿ ಆದಷ್ಟು ಶೀಘ್ರ ಸಂಚಾರಕ್ಕೆ ಬಿಟ್ಟುಕೊಡುವಂತೆ ಒತ್ತಾಯ, ಮಾಡಿದ್ದಲ್ಲದೆ, ಕುಂದಾಪುರದಲ್ಲಿ ಡಿಸಿ ಜೊತೆ ನಡೆಸಿದ ಸಭೆಯಲ್ಲಿ ಏಪ್ರಿಲ್ ತಿಂಗಳೊಳಗೆ ಸಂಚಾರಕ್ಕೆ ಬಿಟ್ಟುಕೊಡಬೇಕು ಇಲ್ಲದಿದ್ದರೆ ಟೋಲ್ ನಿರಾಕರಣೆ ಮೂಲಕ ಪ್ರತಿಭಟನೆ ಎಚ್ಚರಿಕೆ ನೀಡಲಾಗಿತ್ತು. ಪ್ರಸಕ್ತ ಕಾಮಗಾರಿ ವೇಗ ಪಡೆದುಕೊಂಡಿದ್ದು, ಎಪ್ರಿಲ್ ತಿಂಗಳಲ್ಲಿ ಸಂಚಾರಕ್ಕೆ ಬಿಟ್ಟುಕೊಡುವುದಾಗಿ ಕಂಪನಿ ಇಂಜಿನಿಯರ್ ಭರವಸೆ ನೀಡಿದ್ದಾರೆ ಎಂದು ಶುಕ್ರವಾರ ಪ್ಲೇ ಓವರ್ ಕಾಮಗಾರಿ ವೀಕ್ಷಣೆ ನಡೆಸಿ ಸುದ್ದಿಗಾರರಿಗೆ ತಿಳಿಸಿದರು.
ಬೆಂಗಳೂರಿಂದ ಕಾರವಾರಕ್ಕೆ ಮಂಜೂರಾದ ಹೊಸ ರೈಲ್ ಹಾಗೂ ಹಿಂದಿನ ಓಡುತ್ತಿದ್ದ ರೈಲು ಪಡೀಲ್ ಮೂಲಕ ಕುಂದಾಪುರ ಕಾರವಾರಕ್ಕೆ ಹೋಗುವಂತೆ ಮಾಡಲು ರೈಲ್ವೆ ಸಚಿವರ ಜೊತೆ ಮಾತನಾಡಿದ್ದು, ಎರಡೂ ರೈಲು ವಾರದಲ್ಲಿ ಏಳುದಿನವೂ ಓಡುವಂತೆ ಕೇಳಿಕೊಳ್ಳಲಾಗಿದೆ. ರೈಲು ಮಂಗಳೂರು ಸ್ಟೇಶನ್ನಿಗೆ ಹೋಗಿ ಬರುವುದರಿಂದ ಸಮಯ ವ್ಯಯವಾಗುವುದರಿಂದ ಪ್ರಯಾಣಿಕರಿಗೂ ಸಮಸ್ಯೆ ಆಗುತ್ತದೆ. ರೈಲು ಪೇಟೆ ಒಳಗಡೆ ಹೋಗುವುದರಿಂದ ಮಂಗಳೂರು ನಗರಕ್ಕೆ ಏನೂ ಪ್ರಯೋಜನವಿಲ್ಲ. ರೈಲ್ ಮಂಗಳೂರು ಸ್ಟೇಶನ್‌ಗೆ ಬರಬೇಕೆಂದು ಒತ್ತಾಯಿಸದಂತೆ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕೇಳಿಕೊಂಡಿದ್ದು, ಅವರು ಅದಕ್ಕೆ ಸಮ್ಮತಿ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕಿರಣ್ ಕೊಡ್ಗಿ, ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು, ಪ್ರಧಾನ ಕಾರ್ಯದರ್ಶಿಗಳಾದ ಸುರೇಶ್ ಶೆಟ್ಟಿ ಬೀಜಾಡಿ, ಸತೀಶ್ ಪೂಜಾರಿ, ಮಾಜಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಬಿಲ್ಲವ, ಪುರಸಭೆ ಸದಸ್ಯರಾದ ಮೋಹನದಾಸ ಶೆಣೈ, ರಾಘವೇಂದ್ರ ಖಾರ್ವಿ, ಸಂದೀಪ ಖಾರ್ವಿ, ಶ್ವೇತಾ ಸಂತೋಷ್, ವೀಣಾ ಭಾಸ್ಕರ ಮೆಂಡನ್, ವನಿತಾ ಎಸ್. ಬಿಲ್ಲವ, ಸಂತೋಷ್ ಕುಮಾರ್ ಶೆಟ್ಟಿ, ಪ್ರೇಮಲತಾ, ಅಶ್ವಿನಿ ಪ್ರದೀಪ್, ಮಾಜಿ ಸದಸ್ಯರಾದ ವಿಜಯ್ ಎಸ್. ಪೂಜಾರಿ, ಸತೀಶ್ ಶೆಟ್ಟಿ, ವಸಂತಿ ಸಾರಂಗ, ಗುಣರತ್ನಾ, ಪುಷ್ಪಾ ಶೇಟ್, ಮುಖಂಡರಾದ ಕುತ್ಯಾರು ನವೀನ್ ಶೆಟ್ಟಿ, ಉದಯ ಕುಮಾರ್ ಶೆಟ್ಟಿ ಉಡುಪಿ, ಗೋಪಾಲ ಕಳಂಜಿ, ಸಂಗೀತಾ, ದಿವಾಕರ ಕಡ್ಗಿ, ಸದಾನಂದ ಬಳ್ಕೂರು, ವಿನೋದ್‌ರಾಜ್ ಪೂಜಾರಿ, ರೈಲ್ವೇ ಪ್ರಯಾಣಿಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಗಣೇಶ್ ಪುತ್ರನ್, ವಿವೇಕ್ ನಾಯಕ್, ಪ್ರವೀಣ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಉಚ್ಚಿಲ ದಸರಾದಲ್ಲಿ ಮಹಿಳಾ ದಸರಾ ಉದ್ಘಾಟಿಸಿದ ಸಿಎಂ ಕರಾವಳಿ ಕರ್ನಾಟಕ ‘ಜಾಗತಿಕ ಟೂರಿಸಂ ಹಬ್’ ಆಗಿ ಅಭಿವೃದ್ಧಿ :…
ಮಂಗಳೂರು: ಅಪ್ರಾಪ್ತ ಬಾಲಕನಿಗೆ ಲೈಂಗಿಕ ಕಿರುಕುಳ ಆರೋಪ : ಚರ್ಚ್ ಫಾದರ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲು ಮಂಗಳೂರು: ಮಂಗಳೂರು…
ಉಡುಪಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸಲು ಅ. 20 ರ ವರೆಗೆ ಅವಕಾಶ ಉಡುಪಿ: ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ…
ಈ ಬಾರಿ ದಸರಾ ಮಹೋತ್ಸವದಲ್ಲಿ ಅಂಬಾರಿ ಹೊತ್ತು ಸಾಗಲಿರುವ ದುಬಾರೆ ವೀರ ಪ್ರಶಾಂತ ಆನೆ ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು…
ಬೆಳ್ತಂಗಡಿ: ನಾವೂರಿನ ಆರೋಗ್ಯ ಕ್ಲಿನಿಕ್ಗೆ ಬೆಂಕಿ ಹಚ್ಚಿದ ಪ್ರಕರಣ; ಓರ್ವನ ಬಂಧನ, ಇಬ್ಬರು ವಶಕ್ಕೆ ಬೆಳ್ತಂಗಡಿ: ನಾವೂರು ಗ್ರಾಮದ ಸ್ವಾತಿ…
ಮಂಗಳೂರು: ನಿಯಮಬಾಹಿರವಾಗಿ ಶಾಲಾ ಮಕ್ಕಳ ಸಾಗಾಟ ; 30 ವಾಹನಗಳ ಮೇಲೆ ಕೇಸು ದಾಖಲು ಮಂಗಳೂರು: ಮಂಗಳೂರು ಪ್ರಾದೇಶಿಕ ಸಾರಿಗೆ…