Featured

ಸಚಿನ್ ಪಾಂಚಾಳ್​​ ಸಾವಿಗೂ ನನಗೂ ಯಾವುದೇ ಸಂಬಂಧ ಇಲ್ಲ, ಬಿಜೆಪಿಯವರು ಸುಳ್ಳಿನ ಮಹಾಶೂರರು : ಪ್ರಿಯಾಂಕ್ ಖರ್ಗೆ ವಾಗ್ದಾಳಿ – vishwanews24

ನನ್ನ ರಾಜೀನಾಮೆ ಕೊಡಿಸಿ ಕಪ್ಪು ಚುಕ್ಕೆ ತರಲು ಯತ್ನಿಸುತ್ತಿದ್ದಾರೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬೀದರ್​ನಲ್ಲಿ ಗುತ್ತಿಗೆದಾರ ಸಚಿನ್ ಪಾಂಚಾಲ್ ಆತ್ಮಹತ್ಯೆ ಪ್ರಕರಣದಲ್ಲಿ ರಾಜಕೀಯ ಜಟಾಪಟಿ ದಿನದಿಂದ ದಿನಕ್ಕೆ ಮತ್ತಷ್ಟು ಜೋರಾಗುತ್ತಿದೆ. ಸಚಿನ್ ಪಾಂಚಾಳ್​​ ಸಾವಿಗೂ ನನಗೂ ಯಾವುದೇ ಸಂಬಂಧ ಇಲ್ಲವೆಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಇದೀಗ ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಅವರದ್ದು ಎನ್ನಲಾದ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಿನ್ನೆ ನನ್ನ ಹಳೆಯ ಸ್ಪೀಚ್ ಅಪ್ಲೋಡ್ ಮಾಡಿದ್ದಾರೆ‌. ಕಲಬುರಗಿ ರಿಪಬ್ಲಿಕ್ ಮಾಡಿದವರು ಯಾರು? ನಿಮ್ಮ ಅಭ್ಯರ್ಥಿ ನಮ್ಮ ಕುಟುಂಬದ ವಿರುದ್ಧ ಸಂಚು ಮಾಡುತ್ತಾನೆ. ನಮ್ಮ ತಂದೆ, ತಾಯಿ, ಕುಟುಂಬ ಕೊಲ್ತೀನಿ ಅಂತಾ ಆತ ಹೇಳುತ್ತಾನೆ. ಅದರ ಬಗ್ಗೆ ನಾವು ದೂರು ಕೊಟ್ಟಾಗ ನಿಮ್ಮದೇ ಸರ್ಕಾರ ಇತ್ತು. ಅಂಥವನಿಗೆ ನೀವು ಅಧಿಕೃತ ಅಭ್ಯರ್ಥಿ ಮಾಡಿ ಟಿಕೆಟ್​​ ಕೊಟ್ಟಿದ್ದೀರಿ ಎಂದು ವಾಗ್ದಾಳಿ ಮಾಡಿದ್ದಾರೆ.

ನನ್ನ ರಾಜೀನಾಮೆ ಕೊಡಿಸಲು ಖರ್ಗೆಗೆ ಕಪ್ಪು ಚುಕ್ಕೆ ತರಲು ಯತ್ನಿಸುತ್ತಿದ್ದಾರೆ. ಬಿಜೆಪಿಗರು ಬಹಳ ಬಾಲಿಶವಾಗಿ ಮಕ್ಕಳ ರೀತಿ ಹೇಳಿಕೆ ನೀಡುತ್ತಿದ್ದಾರೆ. ಕಳೆದ 4-5 ದಿನಗಳಿಂದ ಬಿಜೆಪಿ ಬಹಳಷ್ಟು ಪ್ರಯತ್ನ ಮಾಡಿದ್ದಾರೆ. ವಿಜಯೇಂದ್ರ, ನಾರಾಯಣಸ್ವಾಮಿ ಯಾಕೋ ಹೋಂ ವರ್ಕ್ ಸರಿಯಾಗಿ ಮಾಡುತ್ತಿಲ್ಲ. ನಾರಾಯಣಸ್ವಾಮಿಗೆ ವೈಯಕ್ತಿಕ ಟೀಕೆ ಮಾಡಲು ಸ್ಥಾನ ಕೊಟ್ಟಂತಿದೆ. ಕಲಬುರಗಿ ರಿಪಬ್ಲಿಕ್ ಅಂತಾ ನಾರಾಯಣಸ್ವಾಮಿ ಆರೋಪ ಮಾಡಿದ್ದಾರೆ ಎಂದರು.

ಸಂತೋಷ್ ಬರೆದ ಡೆತ್​​ನೋಟ್​ನಲ್ಲಿ ಈಶ್ವರಪ್ಪ ಹೆಸರು ಸ್ಪಷ್ಟವಾಗಿತ್ತು. ನನ್ನ ಸಾವಿಗೆ ನೇರ ಕಾರಣ ಈಶ್ವರಪ್ಪ ಅಂತಾ ಡೆತ್​ನೋಟ್​ ಬರೆದಿದ್ದರು. ಆದರೆ ಸಚಿನ್ ಪ್ರಕರಣದಲ್ಲಿ ನನ್ನ ಹೆಸರೇ ಬರೆದಿಲ್ಲ. ಸಂತೋಷ್ ಮನೆಗೆ ಒಮ್ಮೆಯಾದರೂ ವಿಜಯೇಂದ್ರ ಹೋಗಿದ್ದಾರಾ? ಸಚಿನ್ ಮನೆಗೆ ವಿಜಯೇಂದ್ರ 5 ಲಕ್ಷ ರೂ. ತೆಗೆದುಕೊಂಡು ಹೋಗಿದ್ದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಮನೆಗೆ ಯಾಕೆ ಹೋಗಲಿಲ್ಲ? ಯಾರೋ ಬರೆದಿದ್ದನ್ನು ತಿರುಚಿ ಮಗುಚಿ ಹಾಕಿದ್ರಲ್ಲ ನಾಚಿಕೆ ಆಗಲ್ವಾ ಎಂದು ಪ್ರಶ್ನಿಸಿದ್ದಾರೆ. ರಾಜೀವ್ ವಿರುದ್ಧ ಮಾನನಷ್ಟ ಕೇಸ್​ ಹಾಕಿದ್ದೆ, ಈವರೆಗೂ ಉತ್ತರ ಬಂದಿಲ್ಲ. ಬಿಜೆಪಿಯವರು ಸುಳ್ಳಿನ ಮಹಾಶೂರರು ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ಮಾಡಿದ್ದಾರೆ.

Vishwa News 24

Recent Posts

ಉಡುಪಿ : ಹೊಟೇಲ್ ಮುಚ್ಚುವ ಭೀತಿ ; ಜಿಲ್ಲೆಯ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ : ತಲ್ಲೂರು ಶಿವರಾಮ ಶೆಟ್ಟಿ – vishwanews24

ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…

2 days ago

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ – vishwanews24

ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…

2 days ago

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ – vishwanews24

ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್‌ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…

2 days ago

ಉಡುಪಿ : ಗ್ಯಾಸ್ ಹೆಸರಿನಲ್ಲಿ ಸೈಬರ್ ವಂಚನೆ: ಅಪರಿಚಿತರಿಂದ ಬರುವ ಲಿಂಕ್‌, ಎಪಿಕೆ ಫೈಲ್‌ ಓಪನ್ ಮಾಡುವ ಮುನ್ನ ಎಚ್ಚರ : ಎಸ್ಪಿ ಮನವಿ – vishwanews24

ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…

2 days ago

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ ‘ಗೀತಾ’ – vishwanews24

ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…

2 days ago

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿಯ ಬಂಧನ – vishwanews24

ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…

2 days ago