ನವದೆಹಲಿ :ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಇಂದು ಲೋಕಸಭೆಯಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡನೆ ಮಾಡಿದ್ದು, ಈ ಸಂದರ್ಭದಲ್ಲಿ ಸಣ್ಣ ವ್ಯಾಪಾರಿಗಳಿಗೆ ಬಂಪರ್ ನ್ಯೂಸ್ ನೀಡಿದ್ದಾರೆ.
‘ಪ್ರಧಾನಮಂತ್ರಿ ಕರ್ಮಯೋಗಿ ಮಾನ್ ಸಮ್ಮಾನ್’ ಯೋಜನೆಗೆ ಚಾಲನೆ ನೀಡಲಾಗಿದ್ದು, ಇದರ ಮೂಲಕ 3 ಕೋಟಿ ಮಂದಿ ಚಿಲ್ಲರೆ ವ್ಯಾಪಾರಸ್ಥರಿಗೆ ಪಿಂಚಣಿ ಘೋಷಣೆ ಮಾಡಿದ ಅವರು ಕರ್ಮಯೋಗಿ ಸಮ್ಮಾನ್ ಯೋಜನೆ ಜಾರಿಗೆ ಬರಲಿದೆ ಅಂತ ಹೇಳಿದರು.
ಇದೇ ವೇಳೆ ಸದೃಡ ದೇಶಕ್ಕಾಗಿ, ಸದೃಢ ನಾಗರೀಕರು ನಮ್ಮ ಧ್ಯೇಯ ಅಂತ ಹೇಳಿದರು. ಭರವೆಸೆ ಇದ್ದರೆ ಇದ್ದೆ ಅಂತ ಹೇಳಿದರು. ಇನ್ನು ಸರಕಾರಿ ಪ್ರಕ್ರಿಯೆಗಳನ್ನು ಸರಳೀಕರಣ ಮಾಡುತ್ತೇವೆ ಅಂತ ಹೇಳಿದರು. ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ, ಇಂಡಸ್ಟ್ರಿಯಲ್ ಕಾರಿಡಾರ್, ಉಡಾನ್ ಸೇರಿದಂತೆ ರೈಲ್ವೆ ಸಂಪರ್ಕ ಕ್ರಾಂತಿ ಆರ್ಥಿಕತೆಗೆ ಉತ್ತೇಜ ನೀಡಿದೆ ಅಂತ ಹೇಳಿದರು.
ಇದೇ ವೇಳೆ ಒನ್ ನೇಷನ್ ಗ್ರೀಡ್ ಮೂಲಕ ನೀರು ವಿದ್ಯುತ್ ವಿತರಣೆ ಮಾಡಲಾಗುವುದು ಅಂತ ಹೇಳಿದರು. 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ ಘೋಷಣೆ ಮಾಡಿದ ಅವರು ಕರ್ಮಯೋಗಿ ಸಮ್ಮಾನ್ ಯೋಜನೆ ಜಾರಿಗೆ ಬರಲಿದೆ ಅಂತ ಹೇಳಿದರು.
ಈ ಬಜೆಟ್‌ನಲ್ಲಿ ಮಾಡಲಾದ ಘೋಷಣೆಗಳು:
– ಭಾರತದ ಆರ್ಥಿಕತೆ ವೇಗವಾಗಿ ಬೆಳೆಯುತ್ತಿದ್ದು, ಜನ ಸಾಮಾನ್ಯರಿಗೆ ಸರ್ಕಾರ ಹತ್ತಿರವಾಗಲು ಸರ್ಕಾರಿ ಪ್ರಕ್ರಿಯೆಗಳನ್ನು ಸರಳ ಮಾಡಲಾಗುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
– ಭಾರತವು ಪ್ರಸ್ತುತ ವಿಶ್ವದ ಆರನೇ ಅತಿದೊಡ್ಡ ಆರ್ಥಿಕತೆಯಾಗಿದೆ, ಇದು ಐದು ವರ್ಷಗಳ ಹಿಂದೆ 11 ನೇ ಸ್ಥಾನದಲ್ಲಿತ್ತು: ಹಣಕಾಸು ಸಚಿವೆ
– ಬಜೆಟ್‌ನಲ್ಲಿ ಹೊಸ ಭಾರತ(ನ್ಯೂ ಇಂಡಿಯಾ)ದತ್ತ ಗಮನ ಹರಿಸಲಾಗಿದೆ.
– ಭಾರತ 2019-20ರಲ್ಲಿ 3 ಟ್ರಿಲಿಯನ್ ದೇಶವಾಗಲಿದೆ. 5 ಟ್ರಿಲಿಯನ್ ಆರ್ಥಿಕತೆ ಯೋಜನೆ ನಮ್ಮ ಗುರಿ.
– ಗ್ರಾಮೀಣ, ನಗರ ಪ್ರದೇಶಗಳ ಬೆಳವಣಿಗೆಗಾಗಿ ಸಾರಿಗೆ ಕ್ರಾನ್ತಿಎ ಸರ್ಕಾರ ಕಟಿಬದ್ದ. ಈ ಹಿನ್ನೆಲೆಯಲ್ಲಿ ನೂತನ ಸಾರಿಗೆ ಯೋಜನೆ ಜಾರಿಗೆ ತರಲು ಸರ್ಕಾರ ಮುಂದಾಗಿದೆ.
– 300 ಕಿ.ಮೀ. ಮೆಟ್ರೋ ರೈಲು ಮಾರ್ಗಕ್ಕೆ ಅನುಮೋದನೆ.
– ಎಲೆಕ್ಟ್ರಿಕ್ ವಾಹನ ತಯಾರಿಕೆ-ಬಳಕೆಗೆ ಸರ್ಕಾರದಿಂದ ಅಗತ್ಯ ಸಹಕಾರ.
– ಒಂದು ದೇಶ, ಒಂದು ಗ್ರೀಡ್ ಯ್ಹೊಜನೆ ಮೂಲಕ ಎಲ್ಲಾ ರಾಜ್ಯಗಳಿಗೂ ಸಮಾನ ವಿದ್ಯುತ್ ಹಂಚಿಕೆ.
– ಗೃಹ ನಿರ್ಮಾಣಕ್ಕೆ ಹೆಚ್ಚಿನ ಆದ್ಯತೆ.
– ಕರ್ಮಯೋಗಿ ಸಮ್ಮಾನ್ ಯೋಜನೆ ಅಡಿಯಲ್ಲಿ 3 ಕೋಟಿ ಚಿಲ್ಲರೆ ವ್ಯಾಪಾರಿಗಳಿಗೆ ಪಿಂಚಣಿ.
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್‌ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…