Featured

ಸದಸ್ಯತ್ವ ನೋಂದಾವಣಿ ಮೂಲಕ ಯುವಕರನ್ನು ಮುನ್ನಲೆಗೆ ತರುವಂತಾಗಬೇಕು : ಅಶೋಕ್ ಕುಮಾರ್ ಕೊಡವೂರು – Vishwanews24

ಸದಸ್ಯತ್ವ ನೋಂದಾವಣಿ ಮೂಲಕ ಯುವಕರನ್ನು ಮುನ್ನಲೆಗೆ ತರುವಂತಾಗಬೇಕು : ಅಶೋಕ್ ಕುಮಾರ್ ಕೊಡವೂರು – Vishwanews24

ಸದಸ್ಯತ್ವ ನೋಂದಾವಣೆ ಬಗ್ಗೆ ಜವಾಬ್ದಾರಿಯನ್ನು ಪಡೆದವರು ತ್ವರಿತವಾಗಿ ನೋಂದಣಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಡಿಜಿಟಲ್ ನೋಂದಣಿ ಪಕ್ಷಕ್ಕೆ ಹೊಸ ಆಯಾಮವನ್ನು ನೀಡಲಿದ್ದು ಪ್ರಾರಂಭಿಕ ಹಂತದಲ್ಲಿ ಸಮಸ್ಯೆಗಳು ಕಂಡು ಬಂದರೂ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಎಲ್ಲಾ ಬ್ಲಾಕ್‌ಗಳಲ್ಲಿಯೂ ಪ್ರಗತಿ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು. ೨೦೨೩ರಲ್ಲಿ ವಿಧಾನಸಭಾ ಚುನಾವಣೆ ಬರುವ ಹಿನ್ನಲೆಯಲ್ಲಿ ಸದಸ್ಯತ್ವ ನೋಂದಣಿ ಮೂಲಕ ಯುವ ಪ್ರತಿಭೆಗಳನ್ನು ರಾಜಕೀಯ ಮುನ್ನಡೆಗೆ ತರುವಂತಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಕೊಡವೂರು ಹೇಳಿದರು.

ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.
ಭೂ ಮಸೂದೆ ಕಾಯ್ದೆ ಜಾರಿಯಾಗಿ ೫೦ ವರ್ಷಗಳು ಕಳೆದಿವೆ. ಈ ಮಸೂದೆಯ ಫಲಾನುಭವಿಗಳು ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಅವರನ್ನು ಗುರುತಿಸುವ ಕಾರ್ಯ ನಡೆಯಬೇಕಾಗಿದೆ. ಹಾಗೆಯೇ ಭೂಮಿಯನ್ನು ಕಳೆದುಕೊಂಡವರನ್ನು ಗುರುತಿಸಿ ಅವರ ಕೊಡುಗೆಯನ್ನು ಸ್ಮರಿಸಿಕೊಳ್ಳುವಂತಹ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಮಾಜಿ ಸಚಿವರಾದ ಅಭಯಚಂದ್ರ ಜೈನ್ ಅವರು ಮಾತನಾಡಿ ಪಕ್ಷದಲ್ಲಿ ಕೆಲಸ ಮಾಡುವ ಪ್ರತಿಯೋರ್ವನಿಗೂ ಅವಕಾಶಗಳು ಬರುತ್ತದೆ. ಆದರೆ ನಾವು ಕಾಯಬೇಕಾಗಿದೆ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಸಮಾನ ಮನಸ್ಸಿನೊಂದಿಗೆ ಪಕ್ಷದ ಕೆಲಸ ಮಾಡಬೇಕಾಗಿದೆ. ಕಾಂಗ್ರೆಸ್ ಪಕ್ಷ ತನ್ನ ಅಧಿಕಾರದ ಅವಧಿಯಲ್ಲಿ ಕಾರ್ಯಗತಗೊಳಿಸಿದ ಯೋಜನೆಗಳಿಂದಾಗಿ ಇಂದು ಸಾವಿರಾರು ಮನೆಗಳು ಬೆಳಗುವಂತಾಗಿದೆ. ಕ್ರಾಂತಿಕಾರಿ ಹೆಜ್ಜೆಗಳಾದ ಭೂಮಸೂದೆ ಹಾಗೂ ಸಿ.ಇ.ಟಿ. ಯಿಂದಾಗಿ ಎಲ್ಲಾ ವರ್ಗಗಳ ಯುವ ಪೀಳಿಗೆ ಇಂದು ಶಿಕ್ಷಣವನ್ನು ಪಡೆದು ಆರ್ಥಿಕವಾಗಿ ಸದೃಡರಾಗಿದ್ದಾರೆ. ಇದನ್ನು ಪ್ರತಿ ಮನೆ ಮನೆಗೂ ತಲುಪಿಸುವ ಕಾರ್ಯಕ್ರಮ ರೂಪಿಸಿ ಎಂದರು.

ಇತ್ತೀಚಿಗೆ ನಿಧನರಾದ ಪಕ್ಷದ ಮುಖಂಡರಾದ ವಿಠಲ್ ಜಿ. ಕೋಟ್ಯಾನ್, ಗಡಾಹದ್ ರಾಮಕೃಷ್ಣ ರಾವ್ ಕುಂದಾಪುರ, ಸುಭಾಶ್ಚಂದ್ರ ಶೆಟ್ಟಿ ಕುಂದಾಪುರ, ಕಾರ್ಕಳದ ನಿರ್ಮಲ ನಾಯರ್‌ರವರರಿಗೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ. ಅಣ್ಣಯ್ಯ ಸೇರಿಗಾರ್‌ವರು ನುಡಿನಮನ ಸಲ್ಲಿಸಿದರು. ಸದಸ್ಯತ್ವ ನೋಂದಾವಣೆ ಜಿಲ್ಲಾ ಉಸ್ತುವಾರಿ ಮಮತಾ ಗಟ್ಟಿ ಹಾಗೂ ಡಿಜಿಟಲ್ ಮುಖ್ಯಸ್ಥೆ ಶರ್ಲಿ ಬರ್ನಾಡ್ ಡಿಜಿಟಲ್ ನೊಂದಾವಣೆ ಬಗ್ಗೆ ಮಾಹಿತಿ ನೀಡಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನೀರೆಕೃಷ್ಣ ಶೆಟ್ಟಿಯವರು ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವೈ. ಸುಕುಮಾರ್ ಧನ್ಯವಾದ ಸಲ್ಲಿಸಿದರು, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

ಸಭೆಯಲ್ಲಿ ಬ್ಲಾಕ್ ಅಧ್ಯಕ್ಷರುಗಳಾದ ಮಂಜುನಾಥ ಪೂಜಾರಿ, ಸದಾಶಿವ ದೇವಾಡಿಗ, ಪ್ರದೀಪ್ ಕುಮಾರ್ ಶೆಟ್ಟಿ, ಎಸ್. ಮದನ್ ಕುಮಾರ್, ಹೆಚ್. ಹರಿಪ್ರಸಾದ್ ಶೆಟ್ಟಿ, ನವೀನ್‌ಚಂದ್ರ ಸುವರ್ಣ, ಸಂತೋಷ್ ಕುಲಾಲ್, ರಮೇಶ್ ಕಾಂಚನ್, ಮುಖಂಡರಾದ ವೆರೋನಿಕಾ ಕರ್ನೇಲಿಯೋ, ರಾಜು ಪೂಜಾರಿ, ದಿನೇಶ್ ಪುತ್ರನ್, ಬಿ. ಹಿರಿಯಣ್ಣ, ಮಲ್ಯಾಡಿ ಶಿವರಾಮ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಬಿಪಿನ್‌ಚಂದ್ರ ಪಾಲ್ ನಕ್ರೆ, ಎಂ.ಎಸ್. ಮಹಮ್ಮದ್, ನವೀನ್ ಡಿಸೋಜಾ, ಅನಿಲ್ ಕುಮಾರ್, ತೇಜಸ್ವಿರಾಜ್, ಅಶ್ವಿನ್ ಕುಮಾರ್ ರೈ, ಸುರೇಂದ್ರ ಶೆಟ್ಟಿ, ಅಲೆವೂರು ಹರೀಶ್ ಕಿಣಿ, ಹಬೀಬ್ ಆಲಿ ಖಾದರ್, ವಿಕಾಸ್ ಹೆಗ್ಡೆ, ಶಬ್ಬೀರ್ ಅಹ್ಮದ್, ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಸರಸು ಡಿ. ಬಂಗೇರ, ದೇವಾನಂದ ಶೆಟ್ಟಿ, ಕಿಶೋರ್ ಕುಮಾರ್ ಎರ್ಮಾಳ್, ಗೀತಾ ವಾಗ್ಳೆ, ಕೀರ್ತಿ ಶೆಟ್ಟಿ, ಬಾಲಕೃಷ್ಣ ಪೂಜಾರಿ, ಕೃಷ್ಣಮೂರ್ತಿ ಕಾರ್ಕಳ, ಕೆ. ಕೃಷ್ಣಮೂರ್ತಿ ಆಚಾರ್ಯ, ಉದ್ಯಾವರ ನಾಗೇಶ್ ಕುಮಾರ್, ಯತೀಶ್ ಕರ್ಕೇರಾ, ವಸಂತ್ ಬರ್ನಾಡ್, ಜ್ಯೋತಿ ಹೆಬ್ಬಾರ್, ರಾಘವ ದೇವಾಡಿಗ ರೋಶನಿ ಒಲಿವರ್, ಸೌರಭ್ ಬಲ್ಲಾಳ್, ಶಶಿಧರ ಶೆಟ್ಟಿ ಎಲ್ಲೂರು, ಇಸ್ಮಾಯಿಲ್ ಆತ್ರಾಡಿ, ಜಯರಾಮ್ ನಾಯ್ಕ್, ಗಣೇಶ್ ಪೂಜಾರಿ ಕೆರ್ವಾಶೆ, ಫರ್ಜಾನಾ ಸಂಜಯ್, ವೈ. ಗಂಗಾಧರ ಸುವರ್ಣ, ಭಾಸ್ಕರ್ ಪೂಜಾರಿ ಹಿರಿಯಡ್ಕ, ಹರಿಶ್ಚಂದ್ರ ಕೊಡವೂರು, ವಿಜಯ ಶಂಕರ್‌ಪುರ, ಉಪೇಂದ್ರ ಗಾಣಿಗ ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago