ಅಹಮದಾಬಾದ್: ಕೇವಲ ವಿವಾಹ ನೋಂದಣಿ ಮಾಡಿಸಿಕೊಂಡರೆ ಮಾತ್ರ ಹಿಂದೂ ವಿವಾಹ ಕಾನೂನುಬದ್ಧವಾಗುವುದಿಲ್ಲ. ಸಪ್ತಪದಿ ಸೇರಿದಂತೆ ಹಿಂದೂ ಸಂಪ್ರದಾಯದ ಅಗತ್ಯ ವಿಧಿ-ವಿಧಾನಗಳು ನೆರವೇರಿದಾಗ ಮಾತ್ರ ವಿವಾಹ ಮಾನ್ಯವಾಗುತ್ತದೆ ಎಂದು ಗುಜರಾತ್ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಜೂನ್ 23ರಂದು ನೀಡಿದ ತೀರ್ಪಿನಲ್ಲಿ ನ್ಯಾಯಮೂರ್ತಿಗಳಾದ ಇಲೇಶ್ ವೋರಾ ಮತ್ತು ಆರ್.ಟಿ. ವಚ್ಛಾನಿ ಅವರ ವಿಭಾಗೀಯ ಪೀಠ, ಹಿಂದೂ ವಿವಾಹವು ಕೇವಲ ಔಪಚಾರಿಕ ಕಾರ್ಯಕ್ರಮವಲ್ಲ, ಅದು ಧಾರ್ಮಿಕ ಸಂಸ್ಕಾರ ಮತ್ತು ಪವಿತ್ರ ಬಂಧವಾಗಿದೆ ಎಂದು ಅಭಿಪ್ರಾಯಪಟ್ಟಿತ್ತು.
ಬ್ರಿಟನ್‌ನಲ್ಲಿ ನೆಲೆಸಿರುವ ಕೌಶಲ್ ಸೋನಾರ್ ಅವರು, ಅಹಮದಾಬಾದ್‌ನ ಮಹಿಳೆಯೊಬ್ಬರೊಂದಿಗೆ ತನ್ನ ವಿವಾಹ ನಡೆದಿದೆ ಎಂಬುದನ್ನು ಅಮಾನ್ಯ ಎಂದು ಘೋಷಿಸುವಂತೆ ನ್ಯಾಯಾಲಯದ ಮೆಟ್ಟಿಲೇರಿದ್ದರು. ತನ್ನ ಪೋಷಕರಿಗೆ ವಿವಾಹ ಪ್ರಮಾಣಪತ್ರ ತೋರಿಸಿ ಮಹಿಳೆ ತಾನು ಕಾನೂನುಬದ್ಧ ಪತ್ನಿ ಎಂದು ಹೇಳಿದಾಗ ಮಾತ್ರ ಈ ವಿಷಯ ತಿಳಿದಿದೆ. ಅಲ್ಲದೆ, ತಮ್ಮ ಒಪ್ಪಿಗೆಯಿಲ್ಲದೆ ವಿವಾಹ ದಾಖಲೆಗಳಲ್ಲಿ ಸಹಿ ಪಡೆಯಲಾಗಿದೆ. ಯಾವುದೇ ಹಿಂದೂ ಸಂಪ್ರದಾಯದ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಪತಿ-ಪತ್ನಿಯಾಗಿ ಎಂದಿಗೂ ಒಟ್ಟಿಗೆ ವಾಸಿಸಿಲ್ಲ ಎಂದು ಅವರು ಕೋರ್ಟ್ ಗೆ ತಿಳಿಸಿದ್ದರು.
ಯಾವುದೇ ವಿವಾಹ ವಿಧಿ-ವಿಧಾನಗಳು ನಡೆದಿಲ್ಲ ಹಾಗೂ ಇಬ್ಬರೂ ಪತಿ-ಪತ್ನಿಯಾಗಿ ಬದುಕಿಲ್ಲ ಎಂದು ಮಹಿಳೆಯೇ ಕುಟುಂಬ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದ್ದರೂ, ಅರ್ಜಿಯನ್ನು ತಿರಸ್ಕರಿಸಿದ್ದ ಕುಟುಂಬ ನ್ಯಾಯಾಲಯದ ಆದೇಶ ತಪ್ಪಾಗಿದೆ ಎಂದು ಹೈಕೋರ್ಟ್ ಹೇಳಿದೆ. ಹಿಂದೂ ವಿವಾಹ ಕಾಯ್ದೆ, 1955ರ ಸೆಕ್ಷನ್ 7 ಅನ್ನು ನ್ಯಾಯಾಲಯವು ಉಲ್ಲೇಖಿಸಿದ್ದು, ಹಿಂದೂ ವಿವಾಹವು ಸಂಪ್ರದಾಯಬದ್ಧ ವಿಧಿ-ವಿಧಾನಗಳ ಪ್ರಕಾರ ನೆರವೇರಬೇಕು. ವಿಶೇಷವಾಗಿ ಸಪ್ತಪದಿ ಹಿಂದೂ ವಿವಾಹದ ಪ್ರಮುಖ ಮತ್ತು ಅವಿಭಾಜ್ಯ ಅಂಗವಾಗಿದೆ. ಈ ವಿಧಿ ನೆರವೇರಿದಾಗ ಮಾತ್ರ ವಿವಾಹವು ಧಾರ್ಮಿಕ, ಸಾಮಾಜಿಕ ಮತ್ತು ಕಾನೂನುಬದ್ಧ ಮಾನ್ಯತೆ ಪಡೆಯುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಹಿಂದೂ ವಿವಾಹವು ಕೇವಲ ಹಾಡು, ನೃತ್ಯ, ಔತಣಕೂಟ ಅಥವಾ ವಾಣಿಜ್ಯ ವ್ಯವಹಾರವಲ್ಲ. ಅದು ಇಬ್ಬರು ವ್ಯಕ್ತಿಗಳು ಜೀವನಪರ್ಯಂತ ಸಮಾನತೆ, ಪರಸ್ಪರ ಒಪ್ಪಿಗೆ, ಗೌರವ ಮತ್ತು ಆರೋಗ್ಯಕರ ಸಂಬಂಧದೊಂದಿಗೆ ಕುಟುಂಬ ಕಟ್ಟುವ ಪವಿತ್ರ ಸಂಸ್ಥೆಯಾಗಿದೆ. ಹಿಂದೂ ಸಂಪ್ರದಾಯದಲ್ಲಿ ಪತ್ನಿಯನ್ನು ಅರ್ಧಾಂಗಿ ಎಂದು ಪರಿಗಣಿಸಲಾಗುತ್ತದೆ. ವಿವಾಹವು ಹೊಸ ಕುಟುಂಬದ ಅಡಿಪಾಯವಾಗಿದ್ದು, ಧಾರ್ಮಿಕ ಸಂಸ್ಕಾರ ಎಂಬ ಸ್ಥಾನಮಾನ ಹೊಂದಿದೆ ಎಂದು ಹೈಕೋರ್ಟ್ ಹೇಳಿದೆ.
ಈದ್ ಮಿಲಾದ್: ದ.ಕ/ಉಡುಪಿ ಜಿಲ್ಲೆಗೆ ಆ.25ರಂದು ಸಾರ್ವತ್ರಿಕ ರಜೆ ಘೋಷಣೆ ಮಂಗಳೂರು: ದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಆ. 25ರ ಮಂಗಳವಾರ…
ಮೃತಪಟ್ಟ ಭಿಕ್ಷುಕಿಯ ಮನೆಯಲ್ಲಿ 30 ಲಕ್ಷ ರೂ. ನಗದು ಪತ್ತೆ ಮಂಡ್ಯ: ಭಿಕ್ಷಾಟನೆ ಮಾಡಿ ಜೀವನ ಸಾಗಿಸುತ್ತಿದ್ದ ವೃದ್ಧೆಯೊಬ್ಬರು ಮೃತಪಟ್ಟಿದ್ದು,…
ಬ್ರಹ್ಮಾವರ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಹತ್ಯೆ; ಆರೋಪಿ ಮಗನ ಬಂಧನ ಉಡುಪಿ: ತಂದೆ–ತಾಯಿಗೆ ಸುತ್ತಿಗೆಯಿಂದ ತಲೆಗೆ ಹೊಡೆದು ಕೊಲೆ…
ಕಾರ್ಕಳ ಪುರಸಭೆಗೆ ಲೋಕಾಯುಕ್ತ ಅಧಿಕಾರಿಗಳ ದಿಢೀರ್ ಭೇಟಿ.. ಕಡತಗಳ ಪರಿಶೀಲನೆ ಕಾರ್ಕಳ: ಸಾರ್ವಜನಿಕರ ಅರ್ಜಿ ಹಾಗೂ ಕಡತಗಳ ವಿಲೇವಾರಿ ಬಗ್ಗೆ…
25 ಗಂಟೆಗಳ ಗಾಯನದಿಂದ ವಿದುಷಿ ಸಂಗೀತಾ ಬಾಲಚಂದ್ರ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ದಾಖಲೆ 'ಗೀತ ಗಂಗೋತ್ರಿʼ ಬಿರುದು ನೀಡಿ…
ಕಾಪು ಪುರಸಭೆಗೆ ಲೋಕಾಯುಕ್ತ ದಾಳಿ [gallery columns="1" size="large" ids="117027,117028,117029,117030,117031"]