Categories: Featured

ಸಮಾಜ ಸೇವಾ ವೇದಿಕೆ ಕಳತ್ತೂರು- ಸೌಹಾರ್ದ ಈದ್ ಆಚರಣೆ:-vishwanews24

ಸಮಾಜ ಸೇವಾ ವೇದಿಕೆ ಕಳತ್ತೂರು- ಸೌಹಾರ್ದ ಈದ್ ಆಚರಣೆ

ಕಾಪು, ಜು. 22 : ಸಮಾಜ ಸೇವಾ ವೇದಿಕೆ ಕಳತ್ತೂರು ಮತ್ತು ಸಫಿಯ ಉಮರಬ್ಬ ಫ್ಯಾಮಿಲಿ ಟ್ರಸ್ಟ್ ಚಂದ್ರನಗರ ಇವರ ನೇತೃತ್ವದಲ್ಲಿ ಚಂದ್ರನಗರ ಯು.ಎಸ್.ಎಫ್ ಕಾಂಪ್ಲೆಕ್ಸ್ ನಲ್ಲಿ ಸೌಹಾರ್ದ ಕೂಟ ಈದ್ ಆಚರಣೆ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮಹಮ್ಮದ್ ಫಾರೂಕ್ ಚಂದ್ರನಗರ ಮಾತನಾಡಿ, ಸಮುದಾಯದ ಸೇವೆಯಲ್ಲಿ ಸಂತೃಪ್ತಿಯನ್ನು ಕಾಣುವ ಸಮಾನ ಮನಸ್ಕ ಸದಸ್ಯರನ್ನು ಸೇರಿಸಿಕೊಂಡು ಪ್ರಾರಂಭಿಸಿರುವ ವೇದಿಕೆಯ ಮೂಲಕ ಇನ್ನಷ್ಟು ಸೇವಾ‌ ಕಾರ್ಯಗಳನ್ನು ನಡೆಸಲು ಉದ್ದೇಶಿಸಲಾಗಿದೆ. ಎರಡು ವರ್ಷಗಳ ಅವಧಿಯಲ್ಲಿ ತೊಂದರೆಗೊಳಗಾದ ಜನರಿಗೆ ಪಡಿತರ ಕಿಟ್, ಆರೋಗ್ಯ ಕಿಟ್, ವೈದ್ಯರು, ಆಶಾ ಕಾರ್ಯಕರ್ತೆಯರು ಸಹಿತ ಕೊರೊನಾ ವಾರಿಯರ್ಸ್ ಗೆ ಗೌರವಾರ್ಪಣೆ ಸಹಿತ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಈದ್ ಸೌಹಾರ್ದ ಕೂಟದ ಮೂಲಕ ಜನರಿಗೆ ಇನ್ನಷ್ಟು ಹತ್ತಿರವಾಗುವ ಪ್ರಯತ್ನ ನಡೆಯುತ್ತಿದೆ ಎಂದರು.

ಸೌಹಾರ್ದಕೂಟ ಈದ್ ಆಚರಣೆಯ ಅಂಗವಾಗಿ ಸುಮಾರು150 ಕ್ಕೂ ಅಧಿಕ ಮಂದಿಗೆ ಫುಡ್ ಕಿಟ್ / ಆಹಾರ ಪೊಟ್ಟಣ ಗಳನ್ನು ವಿತರಿಸಲಾಯಿತು.

ಕಾಪು – ಕಳತ್ತೂರು ಸಮಾಜ ಸೇವಾ ವೇದಿಕೆಯ ಅಧ್ಯಕ್ಷ ಮಹಮ್ಮದ್ ಫಾರೂಕ್ ಚಂದ್ರನಗರ, ಸಫಿಯಾ‌ ಉಮ್ಮರಬ್ಬ ಫ್ಯಾಮಿಲಿ ‌ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷ ಕೆ. ಉಮರಬ್ಬ, ವೇದಿಕೆಯ ಪದಾಧಿಕಾರಿಗಳಾದ ದಿವಾಕರ್ ಡಿ. ಶೆಟ್ಟಿ,ದಿವಾಕರ್ ಬಿ‌. ಶೆಟ್ಟಿ, ರಾಜೇಶ್ ಕುಲಾಲ್, ದಯಾನಂದ ಶೆಟ್ಟಿ ದೆಂದೂರುಕಟ್ಟೆ , ಪತ್ರಕರ್ತ ರಾಕೇಶ್ ಕುಂಜೂರು, ಉದ್ಯಮಿ ದಿನೇಶ್ ಆಚಾರ್ಯ ಶಿರ್ವ, ಫಕ್ರುದ್ದೀನ್ ಆಲಿ ಮೊದಲಾದವರು ಉಪಸ್ಥಿತರಿದ್ದರು.

ಕಾಪು – ಕಳತ್ತೂರು ಸಮಾಜ ಸೇವಾ ವೇದಿಕೆಯ ಸಂಚಾಲಕ ದಿವಾಕರ ಡಿ. ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Vishwa News 24

Recent Posts

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ: ಪೊಲೀಸ್ ಕಮಿಷನರ್ -vishwanews24

MRPLನಲ್ಲಿ ಭಾರೀ ಸ್ಫೋಟ : ಎಂಟು ಮಂದಿಗೆ ಗಾಯ ಘಟನಾ ಸ್ಥಳದಲ್ಲಿ ಮಹಿಳಾ ಸಿಬ್ಬಂದಿ ಹಾಜರಿರಲಿಲ್ಲ ಹಾಗೂ ಗಾಯಗೊಂಡಿಲ್ಲ :…

2 hours ago

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  -vishwanews24

ಬಂಟ್ವಾಳ: ದನಗಳನ್ನು ಸಾಗಿಸುತ್ತಿದ್ದ ಲಾರಿ ವಶಕ್ಕೆ  ಬಂಟ್ವಾಳ: ಕಲ್ಲಡ್ಕ ಫ್ಲೈಓವರ್ ಮೇಲೆ ದನಗಳನ್ನು ಸಾಗಿಸುತ್ತಿದ್ದ ಲಾರಿಯೊಂದನ್ನು ಹಿಂದೂ ಸಂಘಟನೆಯ ಕಾರ್ಯಕರ್ತರು…

3 hours ago

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ; -vishwanews24

ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ ಭಾರೀ ಸ್ಫೋಟ.. ಬೈಕಂಪಾಡಿ, ಸುರತ್ಕಲ್, ಜೋಕಟ್ಟೆಯಲ್ಲಿ ಕಂಪಿಸಿದ ಕಟ್ಟಡಗಳು ಮಂಗಳೂರು: ಎಂಆರ್‌ಪಿಎಲ್ ತೈಲ ಸ್ಥಾವರದಲ್ಲಿ…

3 hours ago

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ -vishwanews24

ಕುಂದಾಪುರ: ಪತ್ನಿಗೆ ವಿಷ ನೀಡಿ ಕೊಲೆ ಯತ್ನ ಪ್ರಕರಣ; ಪತಿ, ಸ್ನೇಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಕುಂದಾಪುರ : ಪತ್ನಿಗೆ…

5 hours ago

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು -vishwanews24

ಕಾಪು: ಆಟೋ-ಟೆಂಪೋ ನಡುವೆ ಭೀಕರ ಡಿಕ್ಕಿ; ಚಿಕಿತ್ಸೆ ಫಲಿಸದೇ ಮಗು ಸಾವು ಕಾಪು : ಕಾಪು ಫ್ಲೈಓವರ್ ಬಳಿ ಶನಿವಾರ…

5 hours ago

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ -vishwanews24

ಬೆಂಗಳೂರು : ಮಟನ್ ಶಾಪ್‌ನಲ್ಲಿ ಎಂಡಿಎಂಎ ಮಾರಾಟ : ಇಬ್ಬರ ಬಂಧನ ಬೆಂಗಳೂರು: ಮಟನ್ ಶಾಪ್ ನಲ್ಲಿ ಎಂಡಿಎಂಎ ಮಾದಕ…

1 day ago