ಜೆಡಿಎಸ್ ಒಂದು ಸುಳ್ಳುಪಕ್ಷ ಹಾಗೂ ಬಿಜೆಪಿಯ ಅಂಗಪಕ್ಷವಾಗಿದೆ: ಇಕ್ಬಾಲ್ ಅನ್ಸಾರಿ
ಕೊಪ್ಪಳ : ಸಮ್ಮಿಶ್ರ ಸರ್ಕಾರದಲ್ಲಿ ಭಾರೀ ಬಿರುಕು ಮೂಡಿದೆಯೇ ಎಂಬ ಅನುಮಾನ ಹುಟ್ಟಿಸುವ ಘಟನೆಯೊಂದು ನಡೆದಿದೆ. ಸಿಎಂ ಕುಮಾರಸ್ವಾಮಿ ಕಟ್ಟಾ ಬೆಂಬಲಿಗರು ಬಹಿರಂಗ ಸಭೆಯಲ್ಲಿ ಜೆಡಿಎಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಸಂಸದ, ಮಾಜಿ ಶಾಸಕರು ಮಾಜಿ ಸಂಸದ ಶಿವರಾಮಗೌಡ, ಮಾಜಿ ಶಾಸಕ ಇಕ್ಬಾಲ್ ಅನ್ಸಾರಿಯವರು ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
‘ ಜೆಡಿಎಸ್ ಹಾಗೂ ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ಇದ್ದಂತೆ. ಜೆಡಿಎಸ್ ಬಿಜೆಪಿ ಪಕ್ಷಗಳು ಯಾವತ್ತಿದ್ರೂ ಕಾಂಗ್ರೆಸ್ ನ ವಿರೋಧಿಗಳು ಅಂತೆ. ಗಂಗಾವತಿಯಲ್ಲಿ ಜೆಡಿಎಸ್ ಬಂದ್ರೆ ದುರಾಡಳಿತ ನಡೆಯುತ್ತೆ. ಬಿಜೆಪಿಯನ್ನು ಗೆಲ್ಲಿಸೋ ಸಲುವಾಗಿ ಜೆಡಿಎಸ್ ಹುಟ್ಟಿಕೊಂಡಿದೆ. ಬಿಜೆಪಿಗೆ ಖೋ ಕೊಟ್ಟು ಜೆಡಿಎಸ್ ಮನೆಯಲ್ಲಿ ಕೂಡುತ್ತೆ. ಈ ಕಾರಣಕ್ಕೆ ಕಾಂಗ್ರೆಸ್ ನ್ನು ತಾವೆಲ್ಲರು ಬೆಂಬಲಿಸಬೇಕು, ‘ ಜೆಡಿಎಸ್ ಒಂದು ಸುಳ್ಳು ಪಕ್ಷವಾಗಿದ್ದು, ಅದು ಬಿಜೆಪಿಯ ಅಂಗಪಕ್ಷವಾಗಿದೆ. ಇನ್ನು ಜೆಡಿಎಸ್ ಬಿಜೆಪಿಯನ್ನು ಗೆಲ್ಲಿಸಲೆಂದೇ ಉಂಟಾದ ಪಕ್ಷವೆಂದು ಇಕ್ಬಾಲ್ ಅನ್ಸಾರಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಗಂಗಾವತಿಯಲ್ಲಿರುವ ಜೆಡಿಎಸ್ ಬಿಜೆಪಿ ಪಕ್ಷದ ಅಂಗಪಕ್ಷ. ಚುನಾವಣೆ ಬಂದಾಗ ಮುಸ್ಲಿಂ ಮತ ಇದ್ದಲ್ಲಿ ಜೆಡಿಎಸ್ ಅಂತಾರೆ. ಹಿಂದುಗಳ ಮತ ಹೆಚ್ಚಿದ್ದಲ್ಲಿ ಬಿಜೆಪಿ ಅಂತಾರೆ. ಈ ಕಾರಣಕ್ಕೆ ಜೆಡಿಎಸ್‌ನ್ನು ನಂಬಬೇಡಿ. ಇಂತ ಪಕ್ಷಗಳು ಯಾತಕ್ಕಾಗಿ ಇದ್ದಾವೆ. ಒಂದು ಪಕ್ಷ ಇನ್ನೊಂದು ಪಕ್ಷವನ್ನು ಗೆಲ್ಲಿಸಲು ಇವೆ ಎಂದು ಬಿಜೆಪಿ, ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
‘ ಜೆಡಿಎಸ್ ಟಿಕೆಟ್ ಭಾರೀ ಸುಲಭ ಸಿಗುತ್ತೆ. ಅದೇನು ದೊಡ್ಡ ಮಾತು ಅಲ್ಲ. ಆದರೆ ಎಲೆಕ್ಷನ್ ಆಗಿದ ಮೇಲೆ ಪಕ್ಷಕ್ಕೆ ಬಾಗಿಲು ಹಾಕ್ತಾರೆ ಇದು ಜೆಡಿಎಸ್ ಚಾಳಿ. ಜೆಡಿಎಸ್ ಪಕ್ಷವನ್ನು ನಂಬಬೇಡಿ ‘ ಎಂದು ವಾಗ್ದಾಳಿ ನಡೆಸಿದ್ದಾರೆ. ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ. ಅನ್ಸಾರಿ ಹಾಗೂ ಶಿವರಾಮೇ ಗೌಡರ ವಾಗ್ದಾಳಿಯಿಂದ ಜೆಡಿಎಸ್ ಗೆ ಇರುಸು-ಮುರುಸು ಉಂಟಾಗಿದೆ.
ಕಾರ್ಕಳ : ಮನೆ ವಿಚಾರದಲ್ಲಿ ಜಗಳ; ಮಗನ ಕೊಲೆಗೆ ಯತ್ನಿಸಿದ ತಂದೆ ಕಾರ್ಕಳ : ಮನೆ ವಿಚಾರದಲ್ಲಿ ತಂದೆಯೊಬ್ಬ ತನ್ನ…
ಮೈಸೂರು ದಸರಾ ಕಂಬಳ: ಹೆಸರು ನೋಂದಣಿಗೆ ಸೂಚನೆ ಮಂಗಳೂರು: ಮೈಸೂರು ದಸರಾ 2026ರ ಅಂಗವಾಗಿ ಮೊದಲ ಬಾರಿಗೆ ಅದ್ದೂರಿಯಾಗಿ ಆಯೋಜಿಸಲಾಗುತ್ತಿರುವ…
ಸೌಜನ್ಯಾ ಪ್ರಕರಣ: ಎಸ್‌ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ಬಂಟ್ವಾಳ: ಸೌಜನ್ಯಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮರುತನಿಖೆಗೆ…
ನವರಾತ್ರಿ ವೇಳೆಗೆ ಗೃಹಲಕ್ಷ್ಮಿ ಯೋಜನೆಯ 33ನೇ ಕಂತಿನ ಹಣ ಫಲಾನುಭವಿಗಳ ಖಾತೆಗೆ ಬೆಂಗಳೂರು: ನವರಾತ್ರಿ ಹಬ್ಬದ ಸಂದರ್ಭದಲ್ಲಿ ರಾಜ್ಯದ ‘ಗೃಹಲಕ್ಷ್ಮಿ’…
ಬಂಟ್ವಾಳ: ಬೆಂಗಳೂರು–ಮಡಗಾಂವ್ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಬಂಟ್ವಾಳ : ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸಲು…
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…