ಕಾಪು: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಕಾಪು 2020-21ನೇ ಶೈಕ್ಷಣಿಕ ಸಾಲಿನಿಂದ ನೂತನವಾಗಿ ಆರಂಭಿಸಿರುವ ಬಿಬಿಎ(ಬ್ಯಾಚುಲರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಕೋರ್ಸು ಮತ್ತು ಕರ್ನಾಟಕ ಬ್ಯಾಂಕ್ ಕೇಂದ್ರ ಕಚೇರಿಯಿಂದ ಕೊಡಮಾಡಿದ ಸಿ.ಸಿಟಿವಿಯ ಉದ್ಘಾಟನ ಕಾರ್ಯಕ್ರಮ ಸೋಮವಾರ ನಡೆಯಿತು.
ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಕಾಪುವಿನ ಶಾಸಕ ಲಾಲಾಜಿ ಆರ್ ಮೆಂಡನ್ ನೆರವೇರಿಸಿ ಮಾತನಾಡಿ” ಕಾಲೇಜು ಜೀವನ ಕೇಲವ ಮೋಜು ಆಗದೆ ಜೀವನದ ಗುರಿ ಮುಟ್ಟುವ ಮೆಟ್ಟಿಲಾಗಬೇಕು,ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೂಡ ಶಿಕ್ಷಣದಲ್ಲಿ ಹಿಂದೆ ಬೀಳಬಾರದೆಂಬ ಹಿತದೃಷ್ಟಿಯಿಂದ ಸರ್ಕಾರಕ್ಕೆ ಒತ್ತಡ ಹಾಕುವ ಮುಖಾಂತರ ಕಾಪು ಸರಕಾರಿ ಕಾಲೇಜಿಗೆ ಹೊಸಹೊಸ ಕೋರ್ಸು ಮತ್ತು ಅದಕ್ಕೆ ಬೇಕಾಗುವ ಕಟ್ಟಡ ಇತರ ವ್ಯವಸ್ಥೆ ತರುವ ಪ್ರಯತ್ನ ಮಾಡುತ್ತೇವೆ ಆದರೇ ಅದರ ಸದುಪಯೋಗಿಸಿಕೊಳ್ಳುವ ಪ್ರಯತ್ನ ವಿದ್ಯಾರ್ಥಿಗಳು ಮಾಡಬೇಕು ಎಂದರು.
ವಿದ್ರಾರ್ಥಿಗಳಿಗೆ ಉಪನ್ಯಾಸಕರ ಕೊರತೆ ಆಗದ ರೀತಿಯಲ್ಲಿ ಶೈಕ್ಷಣಿಕ ಸೇವೆ ನೀಡುವ ಕೆಲಸ ಮಾಡುತ್ತೇವೆ ಆದರೇ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ನೀಡುವ ಜವಬ್ದಾರಿ ಇರಬೇಕು ಎಂದರು.
ಕಾರ್ಯಕ್ರಮದಲ್ಲಿ ಪ್ರಾದೇಶಿಕ ಕಚೇರಿಯ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಗೋಪಾಲಕೃಷ್ಣ ಸಾಮಗ ಕರ್ನಾಟಕ ಬ್ಯಾಂಕ್ ನ ಉಡುಪಿ ,ಪುರಸಭಾ ಸದಸ್ಯ ಉಸ್ಮಾನ್,ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ,ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಚಂದ್ರ ಮಲ್ಲಾರ್,ಹರಿಣಾಕ್ಷಿ,ಸಂದೀಪ್ ಶೆಟ್ಟಿ,ಲಕ್ಷ್ಮಿಕಾಂತ್ ಕಾಪು, ಉಪಸ್ಥಿತರಿದ್ದರು.
ಉಪನ್ಯಾಸಕಿ ರಜನಿ ಬಿಬಿಎ ಕೋರ್ಸುನ ಬಗ್ಗೆ ಪ್ರಸ್ತಾಪಿಸಿ,ಪ್ರಾಂಶುಪಾಲ ಡಾ|ಪ್ರೋ.ಅನಿಲ್ ಕುಮಾರ್ ಸ್ವಾಗತಿಸಿದರು, ಪ್ರೋ.ಲತಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿ,ಉಪನ್ಯಾಸಕಿ ಡಾ.ಸುಚಿತ್ರಾ ವಂದಿಸಿದರು.
ಬ್ಯೂರೋ ರಿಪೋರ್ಟ್
ಪುರುಷೋತ್ತಮ ಸಾಲಿಯಾನ್
ವಿಶ್ವನ್ಯೂಸ್24
ಭಾರೀ ಮಳೆ ಮುನ್ಸೂಚನೆ : ನಾಳೆ(ಜುಲೈ 2)ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ…
ಶಿರ್ವ : ಕಾರಿಗೆ ಡೀಸೆಲ್ ತುಂಬಿಸಿ ಹಣ ನೀಡದೆ ಪಾವತಿಸದೆ ಪರಾರಿ ; ಪ್ರಕರಣ ದಾಖಲು ಶಿರ್ವ : ಶಂಕರಪುರದ…
ಹಜ್ ಯಾತ್ರೆ - 2027 : ಅರ್ಜಿ ಸಲ್ಲಿಕೆಗೆ ಜುಲೈ 20 ಕೊನೆ ದಿನ ಬೆಂಗಳೂರು: ಮುಂದಿನ (2027ನೇ) ಸಾಲಿನಲ್ಲಿ…
ಉಡುಪಿ: ಭಾರೀ ಮಳೆಯಾಗುವ ಸಾಧ್ಯತೆ ; ಜುಲೈ 2 ಮತ್ತು 3ರಂದು ರೆಡ್ ಅಲರ್ಟ್ ಘೋಷಣೆ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ…
ಇಂದಿನಿಂದ ಜಾರಿಗೆ ಬರಲಿವೆ ಹೊಸ ರೂಲ್ಸ್: LPG, ಆಧಾರ್, ರೈಲ್ವೆ, ಬ್ಯಾಂಕ್ ಸೇವೆಗಳಲ್ಲಿ ಬದಲಾವಣೆ ನವದೆಹಲಿ: ಇಂದಿನಿಂದ ದೇಶಾದ್ಯಂತ ಹಲವು…
ಬ್ರಹ್ಮಾವರ :ಭೀಕರ ರಸ್ತೆ ಅಪಘಾತ: ಪ್ರಸಿದ್ಧ ಹುಲಿ ವೇಷ ಕಲಾವಿದ ಸಾವು ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರ ಬ್ರಹ್ಮಾವರದ ಹೇರೂರು…