Featured

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಪೋಸ್ಟ್: ಯುವಕ ಅರೆಸ್ಟ್ – vishwanews24

ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆ ಪೋಸ್ಟ್: ಕಾಪು ಮೂಲದ ಯುವಕ ಅರೆಸ್ಟ್

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಪ್ರಚೋದನೆಯ ಸಂದೇಶಗಳನ್ನು ಹಂಚಿಕೊ0ಡ ಆರೋಪದ ಮೇಲೆ ಕಂಕನಾಡಿ ನಗರ ಠಾಣೆಯ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ಕಾಪು ತಾಲೂಕಿನ ಮೂಡುಬೆಳ್ಳೆ ಗ್ರಾಮದ ನಿವಾಸಿ ಪವನ್ ಆಚಾರ್ಯ (22) ಎಂದು ಗುರುತಿಸಲಾಗಿದೆ.

ಇದನ್ನೂ ಓದಿ:

ಪ್ರಕರಣದ ಹಿನ್ನೆಲೆ:
2025ರಲ್ಲಿ ಬಜಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಎಂಬುವವರ ಕೊಲೆಯ ನಂತರ, ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಸಂಘರ್ಷಕ್ಕೆ ಪ್ರಚೋದನೆ ನೀಡುವಂತಹ ಪೋಸ್ಟ್ಗಳನ್ನು ಹಂಚಿಕೊಂಡ ಆರೋಪ ಈತನ ಮೇಲಿದೆ. ತನಿಖೆಯ ವೇಳೆ ‘TN-MADDY’ ಎಂಬ ಖಾತೆಯಿಂದ ಈ ಕೋಮು ಪ್ರಚೋದನೆಯ ಸಂದೇಶಗಳನ್ನು ಹಂಚುತ್ತಿದ್ದುದು ಪವನ್ ಎಂಬುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರು ಆರೋಪಿಯನ್ನು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯ ವಿರುದ್ಧ ಕಾಪು ಪೊಲೀಸ್ ಠಾಣೆಯಲ್ಲೂ ಮತ್ತೊಂದು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ:

Vishwa News 24

Recent Posts

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿಯಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವು – vishwanews24

ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿಯಿಂದ ಬಿದ್ದು ದ್ವಿತೀಯ ಪಿಯುಸಿ ವಿದ್ಯಾರ್ಥಿ ಸಾವು ಹೆಬ್ರಿ: ಕೆಲಸ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಏಣಿಯಿಂದ…

43 minutes ago

ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ ; ಕರಾವಳಿ ಜಿಲ್ಲೆಗೆ ಆರೆಂಜ್ ಅಲರ್ಟ್  ಘೋಷಣೆ – vishwanews24

ರಾಜ್ಯದಲ್ಲಿ ಏ.1ರವರೆಗೆ ಆಲಿಕಲ್ಲು ಮಳೆ ಸಾಧ್ಯತೆ ; ಕರಾವಳಿ ಜಿಲ್ಲೆಗೆ ಆರೆಂಜ್ ಅಲರ್ಟ್  ಘೋಷಣೆ ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ…

53 minutes ago

ಮೇ 16ರಂದು ಇತಿಹಾಸ ಪ್ರಸಿದ್ದ ಕಾಪು “ಪಿಲಿಕೋಲ” – vishwanews24

ಮೇ 16ರಂದು ಇತಿಹಾಸ ಪ್ರಸಿದ್ದ ಕಾಪು "ಪಿಲಿಕೋಲ" ಕಾಪು: ತನ್ನದೇ ಆದ ವಿಶಿಷ್ಟ- ವೈಶಿಷ್ಟ್ಯತೆಗಳಿಂ­ದಾಗಿ ಕರಾ­ವಳಿ ಜಿಲ್ಲೆ­ಗಳು ಮಾತ್ರವಲ್ಲದೇ ದೇಶ-ವಿದೇ­ಶ­ಗ­ಳ­ಲ್ಲಿಯೂ…

2 hours ago

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: SDPI ಖಂಡನೆ -vishwanews24

ಕಾಪು ಅಕ್ರಮ ಮೀನುಗಾರಿಕೆ ನಡೆಸುತ್ತಿದ್ದ ದೋಣಿ ಸ್ಥಳೀಯ ನಾಡದೋಣಿ ಗೆ ಡಿಕ್ಕಿ ಪ್ರಕರಣ: ಎಸ್‌ ಡಿ ಪಿ ಐ ಖಂಡನೆ…

3 hours ago

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂ. ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ – vishwanews24

ಕಾರ್ಕಳ : ಮಹಾಮಸ್ತಕಾಭಿಷೇಕಕ್ಕೆ 1.59 ಕೋಟಿ ರೂಪಾಯಿ ಅನುದಾನ: ರಾಜ್ಯ ಸರ್ಕಾರಕ್ಕೆ ಉದಯ ಶೆಟ್ಟಿ ಮುನಿಯಾಲು ಧನ್ಯವಾದ ಸಲ್ಲಿಕೆ ಕಾರ್ಕಳದಲ್ಲಿ…

3 hours ago

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ – vishwanews24

ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ ಡೀಸೆಲ್ ಪೂರೈಕೆಗೆ  ಕೇಂದ್ರ ಸಚಿವರಿಗೆ ಮನವಿ ಉಡುಪಿ: ಮೀನುಗಾರಿಕ ದೋಣಿಗಳಿಗೆ ಅಗತ್ಯ ಪ್ರಮಾಣದ…

3 hours ago