ಉಡುಪಿ

ಸಾಮೂಹಿಕ ವಿವಾಹ : ವೀಳ್ಯ ಶಾಸ್ತ್ರ……….ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌

ವೀಳ್ಯಶಾಸ್ತ್ರ  ಹಾಗೂ ಉಡುಗೊರೆ ನೀಡುವ ಕಾರ್ಯಕ್ರಮದಲ್ಲಿ  ನಾಡೋಜ ಡಾ| ಜಿ. ಶಂಕರ್‌ ಹಾಗೂ ಪತ್ನಿ ಶಾಲಿನಿ ಶಂಕರ್‌ ವಧು-ವರರನ್ನು ಆಶೀರ್ವಚಿಸಿದರು.

ಉಡುಪಿ: ಉಚಿತ ಸಾಮೂಹಿಕ ವಿವಾಹವಾಗುವ ವಧು-ವರರಿಗೆ ವೀಳ್ಯ ಶಾಸ್ತ್ರ ಕಾರ್ಯಕ್ರಮವು ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ ಮತ್ತು ಮೊಗವೀರ ಯುವ ಸಂಘಟನೆಯ ಆಶ್ರಯದಲ್ಲಿ ಶ್ಯಾಮಿಲಿ ಸಭಾಭವನದಲ್ಲಿ ಸೋಮವಾರ ನಡೆಯಿತು.

ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಡಾ| ಜಿ. ಶಂಕರ್‌ ಅವರು ಮಾತನಾಡಿ, ಕಳೆದ 10 ವರ್ಷಗಳಿಂದ ಸಾಮೂಹಿಕ ವಿವಾಹ ನಡೆಸಲಾಗುತ್ತಿದೆ. ಅಂಗವಿಕಲರು ಕೂಡ ಸಾಮೂಹಿಕ ವಿವಾಹದಲ್ಲಿ ಪಾಲ್ಗೊಂಡಿದ್ದಾರೆ. ಈ ವರ್ಷದ್ದು ಸೇರಿ 10 ವರ್ಷದಲ್ಲಿ ಇಲ್ಲಿಯರೆಗೆ 267 ಜೋಡಿಗಳು ಸಾಮೂಹಿಕ ವಿವಾಹದಲ್ಲಿ ನೊಂದಣಿ ಮಾಡಿಸಿಕೊಂಡಿದ್ದಾರೆ. 49 ಮಂದಿಯ ಸಾಮೂಹಿಕ ಉಚಿತ ವಿವಾಹವು ಎ. 19ರಂದು ನಡೆಯಲಿದೆ. ಸಾಮೂಹಿಕ ವಿವಾಹದಲ್ಲಿ ಮದುವೆಯಾದವರ ಭವಿಷ್ಯದ ದೃಷ್ಟಿಯಿಂದ ಅವರಿಗೆ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನು ನಾವು ಮಾಡಲಿದ್ದೇವೆ ಎಂದರು.

ಶಾಲಿನಿ ಜಿ. ಶಂಕರ್‌, ಯಶಪಾಲ್‌ ಎ. ಸುವರ್ಣ, ಮೊಗವೀರ ಯುವ ಸಂಘಟನೆಯ ಅಧ್ಯಕ್ಷ ವಿನಯ ಕರ್ಕೇರ, ಕಾರ್ಯದರ್ಶಿ ಸತೀಶ ಮರಕಾಲ ಮತ್ತಿತರರು ಉಪಸ್ಥಿತರಿದ್ದರು.ವಿವಾಹಪೂರ್ವ ಜೋಡಿಗಳಾದ ವಧುವಿಗೆ ಸೀರೆ, ರವಿಕೆ ಕಣ, ಕಾಲುಂಗುರ ಹಾಗೂ ವರನಿಗೆ ಪಂಚೆ, ಧೋತಿ, ಶರ್ಟು, ಪೇಟ ಇನ್ನಿತರ ಮದುವೆ ಸಾಮಗ್ರಿಗಳನ್ನು ಡಾ| ಜಿ. ಶಂಕರ್‌ ಅವರು ವಧು-ವರರ ಕುಟುಂಬಿಕರ ಸಮ್ಮುಖದಲ್ಲಿ ಹಸ್ತಾಂತರಿಸಿದರು.

ದೊಡ್ಡ ಭಾಗ್ಯ
ಸಾಮೂಹಿಕ ವಿವಾಹ ವೆಂದು ಯಾರೂ ಕೀಳರಿಮೆ ಪಡಬೇಡಿ. ದುಂದು ವೆಚ್ಚವಿಲ್ಲದೆ ಸಾವಿರಾರು ಮಂದಿಯ ಸಮ್ಮುಖ ಮದುವೆ ಮಾಡಿಸ ಲಾಗುತ್ತದೆ. ಇದಕ್ಕಿಂತ ದೊಡ್ಡ ಭಾಗ್ಯವಿಲ್ಲ.

-ಡಾ| ಜಿ. ಶಂಕರ್‌, ಡಾ| ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ  

 

Vishwa News 24

Recent Posts

ಕುದುರೆಮುಖ ಆಫ್ ರೋಡಿಂಗ್ ಚಟುವಟಿಕೆ ವಿರುದ್ಧ ತೀವ್ರ ಆಕ್ರೋಶ – vishwanews24

ಕುದುರೆಮುಖದಲ್ಲಿ ಅನಧಿಕೃತ ಜೀಪುಗಳ ಆಫ್ ರೋಡಿಂಗ್ .. ನಿಷೇಧಿಸುವಂತೆ ಜಿಲ್ಲಾಡಳಿತಕ್ಕೆ ಸ್ಥಳೀಯರು, ಪರಿಸರ ಪ್ರೇಮಿಗಳ ಒತ್ತಾಯ ಮೋಜು-ಮಸ್ತಿಗಾಗಿ ಸೂಕ್ಷ್ಮ ಪರಿಸರದಲ್ಲಿ…

2 hours ago

ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು – vishwanews24

ಕುಂದಾಪುರ: ಮನೆಯ ಬಾಗಿಲು ಮುರಿದು ಒಳನುಗ್ಗಿದ ಕಳ್ಳರು; ಚಿನ್ನಾಭರಣ, ನಗದು ಕಳವು ಕುಂದಾಪುರ: ಕುಂದಾಪುರದ ಬೊಬ್ಬರ್ಯನಕಟ್ಟೆಯ ಮನೆಯಲ್ಲಿ ಯಾರೂ ಇಲ್ಲದ…

3 hours ago

ಕರ್ನಾಟಕ ವಿಧಾನಸಭೆ ನೂತನ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ – vishwanews24

ಕರ್ನಾಟಕ ವಿಧಾನಸಭೆ ಸ್ಪೀಕರ್​ ಆಗಿ ಜಿ.ಎಸ್. ಪಾಟೀಲ್ ಅವಿರೋಧ ಆಯ್ಕೆ ಬೆಂಗಳೂರು: ಕರ್ನಾಟಕ ವಿಧಾನಸಭಾಧ್ಯಕ್ಷರಾಗಿ ಗುರುಪಾದಗೌಡ ಸಂಗನಗೌಡ ಪಾಟೀಲ (ಜಿ.ಎಸ್.ಪಾಟೀಲ್)…

3 hours ago

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು : 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ – vishwanews24

ನಿರ್ಮಾಣ ಹಂತದಲ್ಲಿದ್ದ ಸುರಂಗದ ಒಳಗೆ ನುಗ್ಗಿದ ನೀರು .. 7 ಕಾರ್ಮಿಕರ ದಾರುಣ ಸಾವು ; 14ಕ್ಕೂ ಹೆಚ್ಚು ಮಂದಿಗೆ…

3 hours ago

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  – vishwanews24

ಧ್ವಜಾರೋಹಣಕ್ಕೆ ವಿನಾಯಿತಿ ಕೋರಿ ಸಿಎಂಗೆ ಸಚಿವ ಜಮೀರ್ ಪತ್ರ ; ಮನವಿಗೆ  ಸ್ಪಂದಿಸಿದ ಸಿಎಂ  ಚುನಾವಣೆ, ಪಕ್ಷ ಸಂಘಟನೆ ಕಾರಣ…

3 hours ago

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾ.ಪಂ ಸಿಬ್ಬಂದಿ ವಜಾ – vishwanews24

ಮನೆ ತೆರಿಗೆ ಲಕ್ಷಾಂತರ ಹಣ ದುರುಪಯೋಗ: ಶಿವಪುರ ಗ್ರಾಪಂ ಸಿಬ್ಬಂದಿ ವಜಾ ಉಡುಪಿ: ಹೆಬ್ರಿ ತಾಲ್ಲೂಕಿನ ಶಿವಪುರ ಗ್ರಾಮ ಪಂಚಾಯಿತಿಯಲ್ಲಿ…

3 hours ago