Featured

ಸಾವಿರಾರು ಜೀವ ಉಳಿಸಿ ಹುತಾತ್ಮರಾದ ಇಬ್ಬರು ಪೈಲಟ್ ಗಳು – Vishwanews24

ಬೆಂಗಳೂರು:  ಉನ್ನತ ದರ್ಜೆಗೇರಿಸಲ್ಪಟ್ಟ ಮಿರಾಜ್ 2000 ಯುದ್ಧ ವಿಮಾನವು ಪ್ರಾಯೋಗಿಕ ಹಾರಾಟ ನಡೆಸುತ್ತಿರುವ ವೇಳೆ ಶುಕ್ರವಾರ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಪತನಗೊಂಡು ಸಾವನ್ನಪ್ಪಿದ್ದ ಸ್ಕ್ವಾಡ್ರನ್ ಲೀಡರ್ಸ್ ಸಮೀರ್ ಅಬ್ರೋಲ್ ಮತ್ತು ಸಿದ್ಧಾರ್ಥ ನೇಗಿ ಅವರ ಸಮಯ ಪ್ರಜ್ಞೆ ಸಾವಿರಾರು ಜನರ ಪ್ರಾಣ ಉಳಿಸಿದೆ.

ವಿಮಾನ ಟೇಕ್-ಆಫ್ ಹಂತದಲ್ಲಿದ್ದಾಗಲೇ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಒಂದೋ ಬೆಂಕಿ ಹತ್ತಿದ ವಿಮಾನದ ಹಾರಾಟವನ್ನು ಮುಂದುವರಿಸುವುದೇ ಅಥವಾ ವಿಮಾನದಿಂದ ತಾವು ಸುರಕ್ಷಿತವಾಗಿ ಕೆಳಕ್ಕೆ ಹಾರುವುದೇ ಎಂಬ ತೀರ್ಮಾನವನ್ನು ಕೆಲವೇ ಸೆಕೆಂಡುಗಳಲ್ಲಿ ಇಬ್ಬರೂ ತೆಗೆದುಕೊಳ್ಳಬೇಕಿತ್ತು. ಅವರೇನಾದರೂ ವಿಮಾನ ಹಾರಾಟ ಮುಂದುವರಿಸಿ ನಂತರ ವಿಮಾನ ಎತ್ತರಕ್ಕೇರಿದ ನಂತರ ಕೆಳಕ್ಕೆ ಜಿಗಿದಿದ್ದೇ ಆದಲ್ಲಿ ಬೆಂಕಿಯುಗುಳುತ್ತಿದ್ದ ವಿಮಾನ ರನ್-ವೇಗಿಂತ ಕೆಲವೇ ದೂರದಲ್ಲಿದ್ದ ಜನಸಂದಣಿಯ ಪ್ರದೇಶಕ್ಕೆ ಅಪ್ಪಳಿಸಿ ಭಾರೀ ಸಾವು ನೋವು ಸಂಭವಿಸುತ್ತಿತ್ತು ಎಂದು ತಿಳಿದು ಬಂದಿದೆ.

ವಿಮಾನ ಹಾರಾಟ ಆರಂಭಿಸುತ್ತಲೇ ಅದರ ಟಯರ್ ಹೊರಕ್ಕೆ ಬಂದು ಅದರ ಲೋಹದ ಭಾಗ ರನ್-ವೇಗೆ ತಾಗಿತ್ತು. ಕ್ಷಣಾರ್ಧದಲ್ಲಿ ಪೈಲಟ್ ಗಳು ಟೇಕ್ ಆಫ್ ಸ್ಥಗಿತಗೊಳಿಸಿದ್ದು ಬೆಂಕಿ ಇಡೀ ವಿಮಾನವನ್ನು ಆಕ್ರಮಿಸಿಕೊಂಡಿದ್ದರಿಂದ ಇಬ್ಬರೂ ಪೈಲಟ್ ಗಳಿಗೆ ಯೋಚಿಸಲು ಹೆಚ್ಚು ಸಮಯವಿರಲಿಲ್ಲ. ಅವರಿಬ್ಬರು ಎಟಿಸಿಯನ್ನು ಕೊನೆಯ ಬಾರಿ ಸಂಪರ್ಕಿಸಿ ವಿಮಾನ ಹಾರಾಟ ನಿಲ್ಲಿಸಿ ಪ್ಯಾರಚೂಟ್ ಬಳಸಿ ಕೆಳಕ್ಕೆ ಜಿಗಿದಿದ್ದರೂ ಅವರು ವಿಮಾನ ನೆಲಕ್ಕಪ್ಪಳಿಸಿದ ಸ್ಥಳಕ್ಕೆ ಹತ್ತಿರದಲ್ಲಿಯೇ ಬಿದ್ದು ತೀವ್ರ ಸುಟ್ಟ ಗಾಯಗಳಿಂದಾಗಿ ಸಾವನ್ನಪ್ಪಿದ್ದರು.

ವಿಮಾನ ಎಚ್‍ಎಎಲ್ ವಿಮಾನ ನಿಲ್ದಾಣದ ತುದಿಯಲ್ಲಿ ಪತನಗೊಳ್ಳದೆ ಹೊರಗೇನಾದರೂ ಪತನಗೊಂಡಿದ್ದರೆ ಪರಿಣಾಮ ಊಹಿಸಲು ಅಸಾಧ್ಯವಾಗಿತ್ತು.

ವಿಮಾನ ನಿಲ್ದಾಣ ಕಂಪೌಂಡಿನ ಪೂರ್ವ ದಿಕ್ಕಿನಲ್ಲಿ ಟೆಕ್ ಪಾರ್ಕ್ ಮತ್ತು ಯೆಮಳೂರು ಗ್ರಾಮ ಸಂಪರ್ಕಿಸುವ ಕರಿಯಮ್ಮನ ಅಗ್ರಹಾರ ರಸ್ತೆಯಿತ್ತಲ್ಲದೆ ರಸ್ತೆ ತುಂಬಾ ವಾಹನಗಳಿಂದ ಗಿಜಿಗುಡುತ್ತಿತ್ತು, ಹಳೆ ಏರ್ ಪೋರ್ಟ್ ರಸ್ತೆ ಮತ್ತು ಮರಾಠಹಳ್ಳಿ ಪ್ರಾಂತ್ಯದಲ್ಲಿಯೂ ಇದೇ ಪರಿಸ್ಥಿತಿಯಿತ್ತು.

ವಿಮಾನ ಪತನಗೊಂಡ ಕೇವಲ 500 ಮೀಟರ್ ದೂರದಲ್ಲಿ ಮಂಜುನಾಥ ಲೇಔಟ್ ಇದೆಯಲ್ಲದೆ ಹಲವಾರು ಶಾಲೆಗಳೂ ಇಲ್ಲಿವೆ. ಈ ಸ್ಥಳದ ಪಕ್ಕದಲ್ಲಿಯೇ ಔಟರ್ ರಿಂಗ್ ರೋಡ್ ಇದ್ದು ಇಲ್ಲಿನ ಸುತ್ತಮುತ್ತ ಸಾವಿರಾರು ಮನೆಗಳಿವೆ. ಈ ಪ್ರದೇಶಗಳಲ್ಲಿ ವಿಮಾನ ಪತನವಾಗಿದ್ದರೆ ದೊಡ್ಡ ಮಟ್ಟದಲ್ಲೇ ಅನಾಹುತ ಸಂಭವಿಸಿರುತ್ತಿತ್ತು.

Vishwa News 24

Recent Posts

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ – vishwanews24

ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್‌ ರೈಲು ಪ್ರಾಯೋಗಿಕ ಸಂಚಾರ ಯಶಸ್ವಿ ಮಂಗಳೂರು: ಬೆಂಗಳೂರು-ಮಂಗಳೂರು ನಡುವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು…

10 hours ago

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ – vishwanews24

ಆಗಸ್ಟ್ 17ಕ್ಕೆ ನಾಗರ ಪಂಚಮಿ: ಉಭಯ ಜಿಲ್ಲೆಗಳಲ್ಲಿ ಸ್ಥಳೀಯ ರಜೆ ಘೋಷಣೆಗೆ ಶಾಸಕ ವೇದವ್ಯಾಸ ಕಾಮತ್ ಮನವಿ ಮಂಗಳೂರು  :…

10 hours ago

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ  – vishwanews24

ಭೀಕರ ಅಪಘಾತದಲ್ಲಿ 6 ಮಂದಿ ಕೂಲಿಕಾರ ಮಹಿಳೆಯರು ಸಾವು; ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ .. ವಿದ್ಯಾಭ್ಯಾಸ…

10 hours ago

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ – vishwanews24

ಮುದರಂಗಡಿ ಡೇವಿಡ್ ಡಿಸೋಜಾ ಹತ್ಯೆ ಪ್ರಕರಣ : ಹಣಕಾಸಿನ ನೆರವು ನೀಡಿದ್ದ ಮತ್ತಿಬ್ಬರು ಆರೋಪಿಗಳ ಬಂಧನ ಮುದರಂಗಡಿ: ಕಾಪು ತಾಲೂಕಿನ…

11 hours ago

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ – vishwanews24

ಮಂಗಳೂರಿನಲ್ಲಿ ರಾಜ್ಯದ ಎರಡನೇ ಪ್ರಾದೇಶಿಕ ಪಾಸ್‌ಪೋರ್ಟ್ ಕಚೇರಿ ತ್ವರಿತವಾಗಿ ಸ್ಥಾಪಿಸಲು ಕಾಂಗ್ರೆಸ್ ಆಗ್ರಹ ಕರಾವಳಿ ಹಾಗೂ ಮಲೆನಾಡಿನ ಜನರ ಪಾಸ್‌ಪೋರ್ಟ್…

11 hours ago

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು – vishwanews24

ದೆಹಲಿ-ಪುಣೆ ಸ್ಪೈಸ್‌ಜೆಟ್ ವಿಮಾನದಲ್ಲಿ ಎಸಿ ವೈಫಲ್ಯ: ಉಸಿರಾಟದ ತೊಂದರೆಯಿಂದ ಕಂಗಾಲಾದ ಪ್ರಯಾಣಿಕರು ನವದೆಹಲಿ: ದೆಹಲಿ-ಪುಣೆ ಸ್ಪೈಸ್‌ಜೆಟ್ (Spice Jet) ವಿಮಾನದಲ್ಲಿ…

12 hours ago