ಬೆಂಗಳೂರು: ಉನ್ನತ ದರ್ಜೆಗೇರಿಸಲ್ಪಟ್ಟ ಮಿರಾಜ್ 2000 ಯುದ್ಧ ವಿಮಾನವು ಪ್ರಾಯೋಗಿಕ ಹಾರಾಟ ನಡೆಸುತ್ತಿರುವ ವೇಳೆ ಶುಕ್ರವಾರ ಬೆಂಗಳೂರಿನ ಎಚ್‍ಎಎಲ್ ವಿಮಾನ ನಿಲ್ದಾಣದಲ್ಲಿ ಪತನಗೊಂಡು ಸಾವನ್ನಪ್ಪಿದ್ದ ಸ್ಕ್ವಾಡ್ರನ್ ಲೀಡರ್ಸ್ ಸಮೀರ್ ಅಬ್ರೋಲ್ ಮತ್ತು ಸಿದ್ಧಾರ್ಥ ನೇಗಿ ಅವರ ಸಮಯ ಪ್ರಜ್ಞೆ ಸಾವಿರಾರು ಜನರ ಪ್ರಾಣ ಉಳಿಸಿದೆ.
ವಿಮಾನ ಟೇಕ್-ಆಫ್ ಹಂತದಲ್ಲಿದ್ದಾಗಲೇ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಒಂದೋ ಬೆಂಕಿ ಹತ್ತಿದ ವಿಮಾನದ ಹಾರಾಟವನ್ನು ಮುಂದುವರಿಸುವುದೇ ಅಥವಾ ವಿಮಾನದಿಂದ ತಾವು ಸುರಕ್ಷಿತವಾಗಿ ಕೆಳಕ್ಕೆ ಹಾರುವುದೇ ಎಂಬ ತೀರ್ಮಾನವನ್ನು ಕೆಲವೇ ಸೆಕೆಂಡುಗಳಲ್ಲಿ ಇಬ್ಬರೂ ತೆಗೆದುಕೊಳ್ಳಬೇಕಿತ್ತು. ಅವರೇನಾದರೂ ವಿಮಾನ ಹಾರಾಟ ಮುಂದುವರಿಸಿ ನಂತರ ವಿಮಾನ ಎತ್ತರಕ್ಕೇರಿದ ನಂತರ ಕೆಳಕ್ಕೆ ಜಿಗಿದಿದ್ದೇ ಆದಲ್ಲಿ ಬೆಂಕಿಯುಗುಳುತ್ತಿದ್ದ ವಿಮಾನ ರನ್-ವೇಗಿಂತ ಕೆಲವೇ ದೂರದಲ್ಲಿದ್ದ ಜನಸಂದಣಿಯ ಪ್ರದೇಶಕ್ಕೆ ಅಪ್ಪಳಿಸಿ ಭಾರೀ ಸಾವು ನೋವು ಸಂಭವಿಸುತ್ತಿತ್ತು ಎಂದು ತಿಳಿದು ಬಂದಿದೆ.
ವಿಮಾನ ಹಾರಾಟ ಆರಂಭಿಸುತ್ತಲೇ ಅದರ ಟಯರ್ ಹೊರಕ್ಕೆ ಬಂದು ಅದರ ಲೋಹದ ಭಾಗ ರನ್-ವೇಗೆ ತಾಗಿತ್ತು. ಕ್ಷಣಾರ್ಧದಲ್ಲಿ ಪೈಲಟ್ ಗಳು ಟೇಕ್ ಆಫ್ ಸ್ಥಗಿತಗೊಳಿಸಿದ್ದು ಬೆಂಕಿ ಇಡೀ ವಿಮಾನವನ್ನು ಆಕ್ರಮಿಸಿಕೊಂಡಿದ್ದರಿಂದ ಇಬ್ಬರೂ ಪೈಲಟ್ ಗಳಿಗೆ ಯೋಚಿಸಲು ಹೆಚ್ಚು ಸಮಯವಿರಲಿಲ್ಲ. ಅವರಿಬ್ಬರು ಎಟಿಸಿಯನ್ನು ಕೊನೆಯ ಬಾರಿ ಸಂಪರ್ಕಿಸಿ ವಿಮಾನ ಹಾರಾಟ ನಿಲ್ಲಿಸಿ ಪ್ಯಾರಚೂಟ್ ಬಳಸಿ ಕೆಳಕ್ಕೆ ಜಿಗಿದಿದ್ದರೂ ಅವರು ವಿಮಾನ ನೆಲಕ್ಕಪ್ಪಳಿಸಿದ ಸ್ಥಳಕ್ಕೆ ಹತ್ತಿರದಲ್ಲಿಯೇ ಬಿದ್ದು ತೀವ್ರ ಸುಟ್ಟ ಗಾಯಗಳಿಂದಾಗಿ ಸಾವನ್ನಪ್ಪಿದ್ದರು.
ವಿಮಾನ ಎಚ್‍ಎಎಲ್ ವಿಮಾನ ನಿಲ್ದಾಣದ ತುದಿಯಲ್ಲಿ ಪತನಗೊಳ್ಳದೆ ಹೊರಗೇನಾದರೂ ಪತನಗೊಂಡಿದ್ದರೆ ಪರಿಣಾಮ ಊಹಿಸಲು ಅಸಾಧ್ಯವಾಗಿತ್ತು.
ವಿಮಾನ ನಿಲ್ದಾಣ ಕಂಪೌಂಡಿನ ಪೂರ್ವ ದಿಕ್ಕಿನಲ್ಲಿ ಟೆಕ್ ಪಾರ್ಕ್ ಮತ್ತು ಯೆಮಳೂರು ಗ್ರಾಮ ಸಂಪರ್ಕಿಸುವ ಕರಿಯಮ್ಮನ ಅಗ್ರಹಾರ ರಸ್ತೆಯಿತ್ತಲ್ಲದೆ ರಸ್ತೆ ತುಂಬಾ ವಾಹನಗಳಿಂದ ಗಿಜಿಗುಡುತ್ತಿತ್ತು, ಹಳೆ ಏರ್ ಪೋರ್ಟ್ ರಸ್ತೆ ಮತ್ತು ಮರಾಠಹಳ್ಳಿ ಪ್ರಾಂತ್ಯದಲ್ಲಿಯೂ ಇದೇ ಪರಿಸ್ಥಿತಿಯಿತ್ತು.
ವಿಮಾನ ಪತನಗೊಂಡ ಕೇವಲ 500 ಮೀಟರ್ ದೂರದಲ್ಲಿ ಮಂಜುನಾಥ ಲೇಔಟ್ ಇದೆಯಲ್ಲದೆ ಹಲವಾರು ಶಾಲೆಗಳೂ ಇಲ್ಲಿವೆ. ಈ ಸ್ಥಳದ ಪಕ್ಕದಲ್ಲಿಯೇ ಔಟರ್ ರಿಂಗ್ ರೋಡ್ ಇದ್ದು ಇಲ್ಲಿನ ಸುತ್ತಮುತ್ತ ಸಾವಿರಾರು ಮನೆಗಳಿವೆ. ಈ ಪ್ರದೇಶಗಳಲ್ಲಿ ವಿಮಾನ ಪತನವಾಗಿದ್ದರೆ ದೊಡ್ಡ ಮಟ್ಟದಲ್ಲೇ ಅನಾಹುತ ಸಂಭವಿಸಿರುತ್ತಿತ್ತು.
ಸುರತ್ಕಲ್ : ಪ್ರೀತಿಸುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ವಂಚನೆ ಆರೋಪ: ಅಪ್ರಾಪ್ತೆ ಆತ್ಮಹತ್ಯೆ; ಯುವಕನ ವಿರುದ್ಧ ಪೋಕ್ಸೊ ಪ್ರಕರಣ ದಾಖಲು…
ರಾಜ್ಯ ಸರ್ಕಾರದಿಂದ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ ಶೋಕಾಸ್ ನೋಟಿಸ್ ಬೆಂಗಳೂರು: ರಾಜ್ಯ ಸರ್ಕಾರ 133 ಪ್ರಧಾನಮಂತ್ರಿ ಜನೌಷಧಿ ಕೇಂದ್ರಗಳಿಗೆ …
ಉಡುಪಿ: ಅಸ್ವಸ್ಥಗೊಂಡ ಪ್ರಯಾಣಿಕ ; ಬಸ್‌ನಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಣ ಉಳಿಸಿದ ಚಾಲಕ ಉಡುಪಿ : ಶಿವಮೊಗ್ಗದಿಂದ ಬರುತ್ತಿದ್ದ ಖಾಸಗಿ…
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…