Featured

ಸಿಎಂ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ, ಪದತ್ಯಾಗಕ್ಕೂ ಸಿದ್ಧ:  ಕೆ. ಎನ್ ರಾಜಣ್ಣ ಸ್ಫೋಟಕ ಹೇಳಿಕೆ – vishwanews24

ಸಿಎಂ ಅಧಿಕಾರದಲ್ಲಿ ಮುಂದುವರಿಯಲು ಸಿದ್ಧ, ಪದತ್ಯಾಗಕ್ಕೂ ಸಿದ್ಧ:  ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

ಬೆಂಗಳೂರು: ಮೇ 15ರ ಒಳಗಡೆ ಕಾಂಗ್ರೆಸ್‌ ಹೈಕಮಾಂಡ್‌ ಡಿಕೆ ಶಿವಕುಮಾರ್‌ ಅವರಿಗೆ ಗಿಫ್ಟ್‌ ನೀಡಲಿದ್ದಾರೆ ಎಂದು ಡಿಕೆ ಬಣದ ಶಾಸಕರು ಹೇಳುತ್ತಿದ್ದರೆ ಮತ್ತೊಂದು ಕಡೆ ಸಿದ್ದರಾಮಯ್ಯ ಬೆಂಬಲಿಗ ಶಾಸಕರು ಮುಂದೆ ಕರ್ನಾಟಕದಲ್ಲಿ ದಲಿತರು ಮುಖ್ಯಮಂತ್ರಿಯಾಗಬೇಕೆಂದು ಬಹಿರಂಗವಾಗಿ ಹೇಳಿಕೆ ನೀಡಲು ಆರಂಭಿಸಿದ್ದಾರೆ.

ಅಧಿಕಾರ ಮುಂದುವರಿಸಲು ಅಥವಾ ಪದತ್ಯಾಗ ಮಾಡಲು ಸಿದ್ದರಾಮಯ್ಯನವರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. ಮುಂದೆ ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಆಗಬೇಕು ಎನ್ನುವುದು ನಮ್ಮ ಪ್ರಬಲ ಒತ್ತಾಯವಾಗಿದೆ ಎಂದು ಮಾಜಿ ಸಚಿವ ಕೆಎನ್‌ ರಾಜಣ್ಣ  ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: 

ಮಾಧ್ಯಮಗಳೊಂದಿಗೆ ಮಾತನಾಡಿದ ರಾಜಣ್ಣ, “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಕ್ತ ಮನಸ್ಸಿನಲ್ಲಿದ್ದಾರೆ. ಹೈಕಮಾಂಡ್ ಮತ್ತು ರಾಹುಲ್ ಗಾಂಧಿ ಅವರು ನೀಡುವ ಯಾವುದೇ ಸೂಚನೆಯನ್ನು ಪಾಲಿಸಲು ಅವರು ಸಿದ್ಧರಿದ್ದಾರೆ. ಅಧಿಕಾರ ಮುಂದುವರಿಸಲು ಅಥವಾ ಪದತ್ಯಾಗ ಮಾಡಲು ಅವರು ಮಾನಸಿಕವಾಗಿ ಸಿದ್ಧರಾಗಿದ್ದು, ಪಕ್ಷದ ಹಿತದೃಷ್ಟಿಯಿಂದ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುವುದಾಗಿ ತಿಳಿಸಿದ್ದಾರೆ” ಎಂದು ಹೇಳಿದರು.

ರಾಜ್ಯದಲ್ಲಿ ಮುಂದಿನ ಬಾರಿ ದಲಿತ ಸಮುದಾಯದ ನಾಯಕರು ಮುಖ್ಯಮಂತ್ರಿಯಾಗಬೇಕು ಎಂಬುದು ನಮ್ಮ ಬೇಡಿಕೆ. ಈ ವಿಚಾರವನ್ನು ಈಗಾಗಲೇ ಹೈಕಮಾಂಡ್ ಗಮನಕ್ಕೆ ತರಲಾಗಿದೆ. ಇದರೊಂದಿಗೆ ಸಚಿವ ಸಂಪುಟ ಪುನಾರಚನೆಯೂ ಆಗಬೇಕಿದೆ. ಹೊಸಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಆಡಳಿತದಲ್ಲಿ ಹೊಸ ಬದಲಾವಣೆ ತರಬೇಕಿದೆ ಎಂದು ರಾಜಣ್ಣ ಅಭಿಪ್ರಾಯಪಟ್ಟರು.

ಇದನ್ನೂ ಓದಿ: 

Vishwa News 24

Recent Posts

ಅರಿಶಿಣ ಪುಡಿ, ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ಅಧಿಕೃತ ಪರೀಕ್ಷೆಗೆ ಸರ್ಕಾರ ಆದೇಶ – vishwanews24

ಅರಿಶಿಣಪುಡಿ, ಮಸಾಲೆ ಪುಡಿಗಳಲ್ಲಿ ಸೀಸದ ಅಂಶ ಪತ್ತೆ: ಅಧಿಕೃತ ಪರೀಕ್ಷೆಗೆ ಸರ್ಕಾರ ಆದೇಶ ಬೆಂಗಳೂರು: ದಿನನಿತ್ಯ ಬಳಸುವ ಅರಿಶಿಣಪುಡಿ ಹಾಗೂ…

4 hours ago

ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ: ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂ ಸ್ಟೇಗಳು ಪತ್ತೆ – vishwanews24

ಉಡುಪಿ ಪೊಲೀಸರ ವಿಶೇಷ ಕಾರ್ಯಾಚರಣೆ: ಜಿಲ್ಲೆಯಲ್ಲಿ ಒಟ್ಟು 32 ಅಕ್ರಮ ಹೋಂ ಸ್ಟೇಗಳು ಪತ್ತೆ ಉಡುಪಿ: ಕೊಡಗು ಜಿಲ್ಲೆಯ ಹೋಂಸ್ಟೇಯೊಂದರಲ್ಲಿ…

5 hours ago

ಬೆಂಗಳೂರು: ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ : 6 ವಿದೇಶಿ ಮಹಿಳೆಯರ ಬಂಧನ – vishwanews24

ಬೆಂಗಳೂರು: ರಸ್ತೆಯಲ್ಲಿ ನಿಂತು ವೇಶ್ಯವಾಟಿಕೆಗೆ ಪ್ರಚೋದನೆ : 6 ವಿದೇಶಿ ಮಹಿಳೆಯರ ಬಂಧನ ಬೆಂಗಳೂರು: ನಗರದ ಕೋರಮಂಗಲ ಚೆಕ್‌ಪೋಸ್ಟ್‌ ಬಳಿ …

5 hours ago

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  – vishwanews24

ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್  ಕೊಲ್ಲೂರು:…

5 hours ago

ಮಹಿಳಾ ಸಬಲೀಕರಣಕ್ಕಾಗಿ ಹೋರಾಟ ಮಾಡಿದ ಇತಿಹಾಸ ಕಾಂಗ್ರೆಸ್ ನದ್ದು : ಸಚಿವೆ ಲಕ್ಷ್ಮೀ ಹೆಬ್ಬಾಳಕರ್ – vishwanews24

ಕಾಂಗ್ರೆಸ್ ಯಾವತ್ತೂ ಮಹಿಳಾ ವಿರೋಧಿ ಅಲ್ಲ, ಬಿಜೆಪಿಯದ್ದು ರಾಜಕೀಯ ಆಟ :ಸಚಿವೆ ಲಕ್ಷ್ಮೀ ಹೆಬ್ಬಾಳಕರ್  ಬೆಳಗಾವಿ : ಕಾಂಗ್ರೆಸ್ ಯಾವತ್ತೂ…

5 hours ago

ಎಂಜಿನಿಯರ್‌ ಮೇಲೆ ಕೆಸರು ಸುರಿದ ಪ್ರಕರಣ : ಮಹಾರಾಷ್ಟ್ರ ಸಚಿವ ನಿತೇಶ್ ನಾರಾಯಣ ರಾಣೆಗೆ 1 ತಿಂಗಳು ಜೈಲು ಶಿಕ್ಷೆ – vishwanews24

ಎಂಜಿನಿಯರ್‌ ಮೇಲೆ ಕೆಸರು ಸುರಿದ ಪ್ರಕರಣ:ಮಹಾರಾಷ್ಟ್ರ ಸಚಿವ ನಿತೇಶ್ ನಾರಾಯಣ ರಾಣೆಗೆ 1 ತಿಂಗಳು ಜೈಲು ಶಿಕ್ಷೆ ಮುಂಬೈ: ಮಹಾರಾಷ್ಟ್ರ…

5 hours ago