Featured

ಬಿ.ಎಸ್‌. ವೈ  ಅವರು ತಕ್ಷಣವೇ  ರಾಜೀನಾಮೆ ನೀಡಬೇಕು,  ಇಲ್ಲವಾದಲ್ಲಿ ಕಾಂಗ್ರೆಸ್‌ ಬೀದಿಗಿಳಿದು ಹೋರಾಟ : ಸಿದ್ದರಾಮಯ್ಯ – Vishwanews24

ಬಿ.ಎಸ್‌. ವೈ  ಅವರು ತಕ್ಷಣವೇ  ರಾಜೀನಾಮೆ ನೀಡಬೇಕು,  ಇಲ್ಲವಾದಲ್ಲಿ ಕಾಂಗ್ರೆಸ್‌ ಬೀದಿಗಿಳಿದು ಹೋರಾಟ : ಸಿದ್ದರಾಮಯ್ಯ – Vishwanews24

ಬೆಂಗಳೂರು, : “ಸಿಎಂ ಸ್ಥಾನಕ್ಕೆ ತಕ್ಷಣವೇ ಬಿ.ಎಸ್‌.ಯಡಿಯೂರಪ್ಪ ಅವರು ರಾಜೀನಾಮೆ ನೀಡಬೇಕು. ಇಲ್ಲವಾದಲ್ಲಿ ಕಾಂಗ್ರೆಸ್‌ ಬೀದಿಗಿಳಿದು ಹೋರಾಟ ಮಾಡಲಿದೆ” ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ವಿಧಾನಸೌಧದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಜೊತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ಅಕ್ರಮವಾಗಿ ಡಿನೋಟಿಫಿಕೇಷನ್‌‌‌‌‌‌ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಎಂ ಬಿ.ಎಸ್‌‌.ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ಹೈಕೋಟ್‌‌ನಲ್ಲಿ ವಜಾಗೊಂಡ ಕಾರಣ ತಮ್ಮ ಸ್ಥಾನಕ್ಕೆ ಸಿಎಂ ಬಿಎಸ್‌ವೈ ಅವರು ಕೂಡಲೇ ರಾಜೀನಾಮೆ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

“ಯಡಿಯೂರಪ್ಪ ಅವರು ರಾಜೀನಾಮೆ ನೀಡಿ ಸುಪ್ರೀಂ ಕೋರ್ಟ್‌ಗೆ ಹೋಗಿ ಕ್ಲೀನ್‌‌ ಚಿಟ್‌ ಪಡೆದುಕೊಂದು ಪುನಃ ಸಿಎಂ ಆಗಲಿ. ಇಲ್ಲದಿದ್ದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ನಾ ಖಾವುಂಗ ನಾ ಖಾನೆ ದೂಂಗಾ ಎನ್ನುವ ಮಾತಿಗೆ ಅರ್ಥವೆಲ್ಲಿದೆ?. ತಮ್ಮ ಸ್ಥಾನಕ್ಕೆ ಯಡಿಯೂರಪ್ಪ ಅವರು ರಾಜೀನಾಮೆ ನೀಡದೇ ಇದ್ದಲ್ಲಿ ನರೇಂದ್ರ ಮೋದಿ ಅವರೇ ರಾಜೀನಾಮೆ ಪಡೆಯಬೇಕು” ಎಂದಿದ್ದಾರೆ.

2019ರಲ್ಲಿ ಯಡಿಯೂರಪ್ಪ ಅವರು, ತಮ್ಮ ವಿರುದ್ದದ ಲೋಕಾಯುಕ್ತ ಪೊಲೀಸರು ದಾಖಲಿಸಿರುವ ಎಫ್‌ಐಆರ್‌‌ ಹಾಗೂ ಈ ವಿಚಾರದ ಸಂಬಂಧ ನಡೆದಿರುವ ಲೋಕಾಯುಕ್ತ ಕೋರ್ಟ್‌‌ ವಿಚಾರಣೆಯನ್ನು ರದ್ದು ಮಾಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಈ ತಕರಾರು ಅರ್ಜಿಯನ್ನು ನ್ಯಾ.ಜಾನ್‌‌ ಮೈಕೆಲ್‌‌‌‌‌ ಕುನ್ಹಾ ಅವರಿದ್ದ ಏಕ ಸದಸ್ಯ ಪೀಠವು ವಜಾಗೊಳಿಸಿತ್ತು.

 

Vishwa News 24

Recent Posts

DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ – vishwanews24

DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ ಬೆಂಗಳೂರು: ‘ಉಪಮುಖ್ಯಮಂತ್ರಿ ಸ್ಥಾನವೂ…

3 minutes ago

DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ – vishwanews24

DCM ಹುದ್ದೆ ಸೇರಿ ಪಕ್ಷ ಯಾವುದೇ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ : ಸಚಿವ ಝಮೀರ್ ಅಹಮ್ಮದ್ ಬೆಂಗಳೂರು: ‘ಉಪಮುಖ್ಯಮಂತ್ರಿ ಸ್ಥಾನವೂ…

7 minutes ago

ಮೂಡುಬಿದಿರೆ: ಖಾಸಗಿ ಬಸ್ ಹಾಗೂ ಕಾರು ನಡುವೆ ಮುಖಮುಖಿ ಢಿಕ್ಕಿ – vishwanews24

ಮೂಡುಬಿದಿರೆ: ಖಾಸಗಿ ಬಸ್ ಹಾಗೂ ಕಾರು ನಡುವೆ ಮುಖಮುಖಿ ಢಿಕ್ಕಿ ಮೂಡುಬಿದಿರೆ: ಕಾರ್ಕಳ-ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯ ಬೆಳುವಾಯಿ ಕಾಂತಾವರ ಕ್ರಾಸ್…

21 minutes ago

ಎಲ್ಲರ ಸಹಕಾರ ಮುಂದೆಯು ಹೀಗೆ ಇರಲಿ : ಮಂತ್ರಿಗಳಿಗೆ ಡಿಕೆಶಿ ಮನವಿ – vishwanews24

ಎಲ್ಲರ ಸಹಕಾರ ಮುಂದೆಯು ಹೀಗೆ ಇರಲಿ : ಮಂತ್ರಿಗಳಿಗೆ ಡಿಕೆಶಿ ಮನವಿ ಬೆಂಗಳೂರು: ಬ್ರೇಕ್‌ಫಾಸ್ಟ್‌ ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್‌ …

40 minutes ago

ಮಂಗಳೂರು : ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ: ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ – vishwanews24

ಮಂಗಳೂರು : ರಾತ್ರಿ ಬೀಟ್ ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ಹಲ್ಲೆ: ಪರಾರಿಯಾಗಿದ್ದ ಇಬ್ಬರು ಆರೋಪಿಗಳ ಬಂಧನ ಮಂಗಳೂರು : ರಾತ್ರಿ…

53 minutes ago

ಗಂಗಾ ನದಿಯಲ್ಲಿ ಭೀಕರ ದೋಣಿ ದುರಂತ  :ಇಬ್ಬರ ಶವ ಪತ್ತೆ, ಹಲವರು ನಾಪತ್ತೆ – vishwanews24

ಗಂಗಾ ನದಿಯಲ್ಲಿ ಭೀಕರ ದೋಣಿ ದುರಂತ  :ಇಬ್ಬರ ಶವ ಪತ್ತೆ, ಹಲವರು ನಾಪತ್ತೆ ಪಾಟ್ನಾ : ಬಿಹಾರದ ಪಾಟ್ನಾ ಸಮೀಪದ…

1 hour ago