ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ನ್ಯಾಯಾಧೀಶರ ಮುಂದೆ 164 ಅಡಿಯಲ್ಲಿ ಹೇಳಿಕೆ ಕೊಟ್ಟಿದ್ದ ಯುವತಿ ಇದೀಗ ಮತ್ತೆ ಉಲ್ಟಾ ಹೊಡೆದಿದ್ದಾರೆ ಎಂಬ ಹೇಳಿಕೆಯನ್ನು ಯುವತಿ ಪರ ವಕೀಲರು ನಿರಾಕರಿಸಿದ್ದಾರೆ. ಮಾಧ್ಯಮಗಳ ಜೊತೆಗೆ ಮಾತನಾಡಿದ ಯುವತಿ ಪರ ವಕೀಲರಾದ ಸೂರ್ಯ ಮುಕುಂದರಾಜ್ ಈ ಸುದ್ದಿ ಕಪೋಲಕಲ್ಪಿತ ಎಂದು ಸ್ಪಷ್ಟಪಡಿಸಿದ್ದಾರೆ.
ಸಿಡಿ ಪ್ರಕರಣದ ಸಂತ್ರಸ್ತೆ ಯುವತಿ ನ್ಯಾಯಾಧೀಶರ ಮುಂದೆ ಹಾಜರಾಗಿ ಸ್ವ ಇಚ್ಚೆಯ ಹೇಳಿಕೆಯನ್ನು ನೀಡಿದ್ದರು. ಇದಾದ ಬಳಿಕ ಎಸ್‌ಐಟಿ ವಿಚಾರಣೆಗೂ ಹಾಜರಾಗಿ ತಮ್ಮ ಹೇಳಿಕೆಯನ್ನು ನೀಡಿದ್ದರು.ಈ ನಡುವೆ ಯುವತಿ ತಾನು ಈ ಹಿಂದೆ ನೀಡಿದ್ದ ಹೇಳಿಕೆಗೆ ವಿರುದ್ಧವಾದ ಹೇಳಿಕೆಯನ್ನು ನೀಡಿದ್ದಾರೆ. ನನ್ನನ್ನು ಹನಿಟ್ರ್ಯಾಪ್‌ಗೆ ಬಳಕೆ ಮಾಡಲಾಗಿದೆ ಎಂದು ಯುವತಿ ಎಸ್‌ಐಟಿ ಮುಂದೆ ಹೇಳಿಕೆ ಕೊಟ್ಟಿದ್ದಾರೆ ಎಂದು ಸುದ್ದಿ ಹರಿಯಬಿಡಲಾಗಿತ್ತು.
ಸಿಡಿ ಪ್ರಕರಣ : ನನ್ನನ್ನು ‘ಹನಿಟ್ರ್ಯಾಪ್’ಗೆ ಬಳಿಸಿಕೊಂಡಿದ್ದರು ; ಅಧಿಕಾರಿಗಳ ಮುಂದೆ ಸಿಡಿ ಯುವತಿ ! Vishwanews24
ಆದರೆ ಈ ಸುದ್ದಿ ಕೇವಲ ಊಹಾಪೋಹ ಎಂದು ಯುವತಿ ಪರ ವಕೀಲರು ನಿರಾಕರಣೆ ಮಾಡಿದ್ದಾರೆ. ಯುವತಿ ಈ ರೀತಿಯ ಹೇಳಿಕೆ ಕೊಟ್ಟಿಲ್ಲ. ಈ ಸುದ್ದಿ ಸತ್ಯಕ್ಕೆ ದೂರವಾಗಿದೆ. ಯುವತಿಯಿಂದಲೂ ಸ್ಪಷ್ಟನೆ ಕೊಡಿಸಲು ಪ್ರಯತ್ನ ನಡೆಸಲಾಗುವುದು. ಯುವತಿ ತಾನು ಈ ಹಿಂದೆ ಕೊಟ್ಟ ಹೇಳಿಕೆಗೆ ಬದ್ಧಳಾಗಿದ್ದಾರೆ. ಆದರೂ ಯಾರು ಕಪೋಲಕಲ್ಪಿತ ಸುದ್ದಿಯನ್ನು ಹರಿಯಬಿಟ್ಟಿದ್ದಾರೆ ಗೊತ್ತಿಲ್ಲ ಎಂದು ಸೂರ್ಯ ಮುಕುಂದರಾಜ್ ಸ್ಪಷ್ಟಪಡಿಸಿದ್ದಾರೆ.
ಇನ್ನು ಮಾಧ್ಯಮಗಳ ಜೊತೆಗೆ ಮಾತನಾಡಿದ ಯುವತಿ ಪರ ವಕೀಲರಾದ ಜಗದೀಶ್ ಕುಮಾರ್ ಅವರೂ ಇದನ್ನು ಅಲ್ಲಗಳೆದಿದ್ದಾರೆ. ಯಾರು ಈ ಸುದ್ದಿಯನ್ನು ಹರಡುತ್ತಿದ್ದಾರೆ ಗೊತ್ತಿಲ್ಲ,ಆದರೆ ನ್ಯಾಯಾಲಯ ಗಮನಿಸುತ್ತಿದೆ, ಇಂತಹ ಊಹಾಪೋಹಗಳಿಗೆ ತಲೆಕೆಡಿಕೊಳ್ಳಬೆಕಾಗಿಲ್ಲ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ಸಿ.ಡಿಯಲ್ಲಿ ಕಾಣಿಸಿಕೊಂಡಿದ್ದ ಯುವತಿ ಅತ್ಯಾಚಾರ ದೂರು ನೀಡಿದ್ದರು. ಯುವತಿಯ ದೂರಿನ ಆಧಾರದಲ್ಲಿ ರಮೇಶ್ ವಿರುದ್ಧ ಅತ್ಯಾಚಾರ ಆರೋಪ ದಾಖಲಾಗಿದೆ. ಪ್ರಕರಣದ ತನಿಖೆಯನ್ನು ಎಸ್‌ಐಟಿ ನಡೆಸುತ್ತಿದೆ. ಈ ಇನ್ನು ರಮೇಶ್ ಜಾರಕಿಹೊಳಿ ಕೋವಿಡ್ ಕಾರಣ ಒಡ್ಡಿ ಎಸ್‌ಐಟಿ ತನಿಖೆಗೆ ಹಾಜರಾಗಿಲ್ಲ
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…
ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ…
ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…
ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…
`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…
ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಅಧಿಕಾರಿಗಳ ಸಮಿತಿ ರಚನೆ: ಸಚಿವ ಯು.ಟಿ. ಖಾದರ್ ಮಂಗಳೂರು: ಮಂಗಳೂರಿನಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ…