ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಭವಿತ್ ಈ ಕೇಸಲ್ಲಿ ತನ್ನ ಪಾತ್ರವಿಲ್ಲ ಎಂದು ವಿಡಿಯೋವೊಂದು ಮಾಡಿದ ಬೆನ್ನಲ್ಲೇ ಕಿಂಗ್ ಪಿನ್ ನರೇಶ್ ಕೂಡ ವೀಡಿಯೋ ರಿಲೀಸ್ ಮಾಡಿದ್ದಾರೆ ಎನ್ನಲಾಗಿದೆ.
ಈ ಕುರಿತಂತೆ ವಿಡಿಯೋದಲ್ಲಿ ಮಾತನಾಡಿದ ನರೇಶ್, “ನನ್ನನ್ನು ಸಿಡಿ ಪ್ರಕರಣದ ಸಂತ್ರಸ್ತೆ ಸಂಪರ್ಕ ಹೊಂದಿರುವುದು ನಿಜ, ಆದರೆ ಸಿಡಿ ಪ್ರಕರಣದಲ್ಲಿ ತನ್ನ ಪಾತ್ರವಿಲ್ಲ. ತಾನು ಯಾವುದೇ ಹಣ ಕೂಡ ಪಡೆದಿಲ್ಲ. ಪ್ರಕರಣದಲ್ಲಿ ತನ್ನನ್ನು ಸಿಲುಕಿಸುವಂತ ಹುನ್ನಾರ ನಡೆದಿದೆ” ಎಂದು ತಿಳಿಸಿದ್ದಾರೆ.
“ನಾನು ಹಣ ಪಡೆದಿರುವ ಬಗ್ಗೆ ಸಾಕ್ಷಿ ಕೊಡಿ. ಸಿಡಿ ಕೇಸ್ ನಲ್ಲಿ ನನ್ನನ್ನು ಸಿಲುಕಿಸುವ ಹುನ್ನಾರ ನಡೆದಿದೆ. ತಾನು ತನಿಖೆಗೆ ಬಂದ್ರೆ ಏನಾಗುತ್ತೆಂದು ಗೊತ್ತು. ಹಾಗಾಗಿ ನಾನು ತನಿಖೆಗೆ ಹಾಜರಾಗಿಲ್ಲ. ಸಿಡಿ ಕೇಸ್ ಗೂ ನನಗೂ ಸಂಬಂಧವಿಲ್ಲ” ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.
ಇನ್ನು ಸಂತ್ರಸ್ತ ಯುವತಿಯೊಂದಿಗೆ ಸಂಪರ್ಕ ಇದ್ದಿದ್ದು ಸತ್ಯ. ನಾನು ಪತ್ರಕರ್ತನಾಗಿದ್ದರಿಂದಾಗ, ಸ್ನೇಹಿತರಿಂದ ನಂಬರ್ ಪಡೆದು ನನ್ನ ಸಂಪರ್ಕಿಸಿದ್ದು ನಿಜ. ಆದ್ರೇ ಆ ವೇಳೆಯಲ್ಲೇ ತನ್ನ ತಾಯಿಗೆ ಹುಷಾರ್ ಇರಲಿಲ್ಲ. ಹೀಗಾಗಿ ನಾನು ಸರಿಯಾಗಿ ಮಾತನಾಡಿರಲಿಲ್ಲ. ಬಳಿಕ ಒಮ್ಮೆ ಕರೆ ಮಾಡಿ ನಮಗೆ ನ್ಯಾಯ ಕೊಡಿಸೋದಿಲ್ವ ಎಂದು ಕೇಳಿದ್ರು. ಆಗ ನನ್ನ ತಾಯಿಗೆ ಹುಷಾರ್ ಇಲ್ಲದ್ದು, ಮಗಳ ನಾಮಕರಣದ ಬ್ಯುಸಿ ಬಗ್ಗೆ ತಿಳಿಸಿದೆ. ಯಾಕ್ ಸಾರ್ ನಮ್ಮನ್ನು ಕರೆಯೋದಿಲ್ವಾ ನಾಮಕರಣಕ್ಕೆ ಅಂದ್ರು. ಬಾರಮ್ಮ ಅಂದೆ ಹೀಗಾಗಿ ನಾಮಕರಣಕ್ಕೂ ಬಂದಿದ್ರು ಎಂದು ಹೇಳಿದ್ದಾರೆ.
ಅ. 18ರಂದು ರಕ್ಷಣಾಪುರ ಜವನೆರ್ ಕಾಪು ವತಿಯಿಂದ ನಾಲ್ಕನೇ ವರ್ಷದ ‘ಕಾಪು ಪಿಲಿ ಪರ್ಬ’ ವಿನಯ್ ಕುಮಾರ್ ಸೊರಕೆ ಮಾರ್ಗದರ್ಶನದಲ್ಲಿ…
ಅ.15ರಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ದ.ಕ. ಮತ್ತು ಉಡುಪಿ ಪ್ರವಾಸ ಮಂಗಳೂರು ಉಚ್ಚಿಲ ದಸರಾ ನವರಾತ್ರಿ ಮಹೋತ್ಸವ ದಲ್ಲಿ ಭಾಗಿ…
ಉಡುಪಿ ಉಚ್ಚಿಲ ದಸರಾ -2026 ರಾಜ್ಯ ಮಟ್ಟದ ನೃತ್ಯ ಸ್ಪರ್ಧೆ ; ಟ್ರೋಫಿ ಗೆದ್ದುಕೊಂಡ ಉಡುಪಿಯ ಎಕ್ಸ್ಟ್ರಿಮ್ ಡ್ಯಾನ್ಸ್ ಅಕಾಡೆಮಿ…
ಉಡುಪಿ: ‘ಭಾರತ್ ಮಾತಾ ಕೀ ಜೈ’ ಘೋಷಣೆ ಕೂಗಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಅಧಿಕಾರಿಯ ವಿರುದ್ಧ ಕಠಿಣ…
ದಸರಾ ರಜೆ ವೇಳೆ ಪರೀಕ್ಷೆ ವಿವಾದ: ಅ.19 ಮತ್ತು 22ರ ಪರೀಕ್ಷೆ ಮುಂದೂಡಿದ ಸೈಂಟ್ ಆಗ್ನೆಸ್ ಕಾಲೇಜು ಮಂಗಳೂರು: ದಸರಾ…
`ಬ್ರೇಕಿಂಗ್ ಬ್ಯಾಡ್' ಖ್ಯಾತಿಯ ಹಾಲಿವುಡ್ ನಟ ಆರ್ಜೆ ಮಿಟ್ಟೆ ನಿಧನ ಅಮೆರಿಕದ ಜನಪ್ರಿಯ ಟಿವಿ ಸರಣಿ `ಬ್ರೇಕಿಂಗ್ ಬ್ಯಾಡ್’ನಲ್ಲಿ ವಾಲ್ಟರ್…