ಬೆಂಗಳೂರು: ಎಸ್‌ಐಟಿ ಪೊಲೀಸರು ನೀಡಿದ ನಾಲ್ಕೈದು ನೋಟಿಸ್ಗಳಿಗೆ ಉತ್ತರಿಸದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಸಂತ್ರಸ್ತೆ ಮತ್ತೊಂದು ವಿಡಿಯೋ ತುಣುಕನ್ನು ಹರಿಯಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ “ನಮ್ಮ ತಂದೆ, ತಾಯಿ ಸ್ವಇಚ್ಛೆಯಿಂದ ದೂರು ನೀಡಿರಲ್ಲ. ನಾನು ತಪ್ಪೇ ಮಾಡಿಲ್ಲ ಎನ್ನುವುದು 100% ನಮ್ಮ ಪೋಷಕರಿಗೆ ಗೊತ್ತು. ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ ನಾನು ಎಸ್‌ಐಟಿ ನಾನು ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಹಾಗೂ ವಿಚಾರಣೆಗೆ ಬರುತ್ತೇನೆ” ಎಂದು ವಿಡಿಯೋ ಹೇಳಿದ್ದಾರೆ.
ಇದನ್ನೂ ಓದಿ :ಕೋವಿಡ್ 2ನೇ ಅಲೆ : ಹೊಸ ಮಾರ್ಗ ಸೂಚಿ ಪ್ರಕಟ, ಮದುವೆಗೆ 200, ರಾಜಕೀಯ ಕಾರ್ಯಕ್ರಮಕ್ಕೆ– 500 ಮಂದಿಗೆ ಅವಕಾಶ -Vishwanews24
“ನನಗೆ ಕಳೆದ 2 ದಿನಗಳಿಂದ ನ್ಯಾಯ ಸಿಗುವ ಭರವಸೆಯಲ್ಲಿದ್ದೇನೆ. ಇದಲ್ಲದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ಇತರ ಮಹಿಳಾ ಸಂಘಟನೆಗಳ ಬಳಿ ಕೇಳಿಕೊಳ್ಳುತ್ತಿದ್ದೇನೆ. ನಮ್ಮ ತಂದೆ, ತಾಯಿಗೆ ರಕ್ಷಣೆ ನೀಡಿ. ಅವರು ಸೇಫ್ ಎಂದು ತಿಳಿದ ತಕ್ಷಣ ಎಸ್‌ಐಟಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುತ್ತೇನೆ”.
“ಈ ನಡುವೆ ನಾನು ಮಾರ್ಚ್ 12ರಂದೇ ನಗರ ಪೊಲೀಸ್ ಆಯುಕ್ತರಿಗೆ, ವಿಶೇಷ ತನಿಖಾ ತಂಡಕ್ಕೆ ವಿಡಿಯೋವನ್ನು ಕಳಿಸಿದ್ದೆ. ಆದರೆ ಆ ನಾನು ವಿಡಿಯೋ ನಾನು ಕಳಿಸಿದ್ದ ದಿನ ಬಿಡುಗಡೆ ಆಗಿಲ್ಲ. ಮಾ.13ರಂದು ರಮೇಶ್ ಜಾರಕಿಹೊಳಿರಿಂದ ದೂರು ನೀಡಿದ ಬಳಿಕ ಅರ್ಧ ಗಂಟೆಯ ಬಳಿಕ ವಿಡಿಯೋ ರಿಲೀಸ್ ಆಗಿದೆ. ಹೀಗಾಗಿ ಇಲ್ಲಿ ಏನಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಎಸ್‌ಐಟಿಯವರು ಯಾರ ಪರವಾಗಿದ್ದಾರೆಂದು ಅರ್ಥವಾಗುತ್ತಿಲ್ಲ” ಎಂದು ಸಿಡಿ ಲೇಡಿ ಬಿಡುಗಡೆ ಮಾಡಿದ ಎರಡನೇ ವಿಡಿಯೋದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ : ಉಡುಪಿ: ಸಂಚಾರ ಪೋಲಿಸರಿಂದ ಕಾನೂನು ಸುವ್ಯವಸ್ಥೆಯ ಜೊತೆಗೆ ಮಾಸ್ಕ್ ಜಾಗೃತಿ ಅಭಿಯಾನ -Vishwanews24
ಉಡುಪಿ :ಜಿಲ್ಲೆಯ ಎಲ್ಲಾ ಹೊಟೇಲ್ಗಳನ್ನು ಸಾಮೂಹಿಕವಾಗಿ ಮುಚ್ಚಬೇಕು ಎಂಬ ಒತ್ತಡ ಹೆಚ್ಚುತ್ತಿದೆ: ತಲ್ಲೂರು ಶಿವರಾಮ ಶೆಟ್ಟಿ ಉಡುಪಿ/ಕುಂದಾಪುರ: ಪಶ್ಚಿಮ ಏಷ್ಯಾ…
ಉಪಚುನಾವಣೆ : ದಾವಣಗೆರೆ ದಕ್ಷಿಣ, ಬಾಗಲಕೋಟೆಗೆ ಬಿಜೆಪಿ ಅಭ್ಯರ್ಥಿ ಘೋಷಣೆ ಬೆಂಗಳೂರು: ಉಪಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಬಾಗಲಕೋಟೆ…
ಕುಂದಾಪುರ: ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ನೀಡುವಂತೆ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮನವಿ ಕುಂದಾಪುರ: ರಾಜ್ಯ ಮೋಟಾರು ಸಾರಿಗೆ ಮತ್ತು…
ಉಡುಪಿ: ಗ್ಯಾಸ್ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಸೈಬರ್ ವಂಚಕರು : ವೃದ್ಧ ದಂಪತಿಯಿಂದ ₹9.78 ಲಕ್ಷ ವಸೂಲಿ ಉಡುಪಿ: ಇರಾನ್…
ಮಂಗಳೂರು : ಪಿಲಿಕುಳದಲ್ಲಿ ಏಳು ಮರಿಗಳಿಗೆ ಜನ್ಮ ನೀಡಿದ ಭಾರತೀಯ ತೋಳ 'ಗೀತಾ' ಮಂಗಳೂರು: ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ಭಾರತೀಯ ತೋಳ–…
ಮಂಗಳೂರು : ಅಪ್ರಾಪ್ತ ಬಾಲಕನ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ಆರೋಪಿ ವಶ ಮಂಗಳೂರು: ಸಮೀಪದ ಕೊಣಾಜೆ ಪೊಲೀಸ್…