Featured

ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಆಸ್ಟ್ರೇಲಿಯದ ಆರೋನ್‌ ಫಿಂಚ್‌ – Vishwanews24

ಸಿಡ್ನಿ: ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿದ ಆಸ್ಟ್ರೇಲಿಯದ ಆರೋನ್‌ ಫಿಂಚ್‌

ಸಿಡ್ನಿ: ಆಸ್ಟ್ರೇಲಿಯದ ಟಿ-20 ತಂಡದ ಕಪ್ತಾನ ಆರೋನ್‌ ಫಿಂಚ್‌ ಮಂಗಳವಾರ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ್ದಾರೆ.

ಕಳೆದ ವರ್ಷದ ಸೆಪ್ಟೆಂಬರ್‌ ನಲ್ಲಿ ಏಕದಿನ ಕ್ರಿಕೆಟ್‌ ಗೆ ವಿದಾಯ ಹೇಳಿದ್ದ ಫಿಂಚ್‌, ಮಂಗಳವಾರ ಟಿ-20 ಮಾದರಿಗೂ ನಿವೃತ್ತಿ ಘೋಷಿಸಿದ್ದಾರೆ.

2021 ರಲ್ಲಿ ಟಿ-20 ವಿಶ್ವಕಪ್‌ ಮುಡಿಗೇರಿಸಿಕೊಂಡ ಬಳಿಕ, 2022 ರಲ್ಲಿ ತವರಿನಲ್ಲಿ ನಡೆದ ಟಿ-20 ವಿಶ್ವಕಪ್‌ ನಲ್ಲಿ ಫಿಂಚ್‌ ನಾಯಕತ್ವದ ತಂಡ ಸೆಮಿ ಫೈನಲ್‌ ತಲುಪುವ ಮುನ್ನವೇ ಕೂಟದಿಂದ ಹೊರ ಬಿದ್ದಿತ್ತು.

2024 ರ ಟಿ-20 ವಿಶ್ವಕಪ್‌ ವರೆಗೆ ನಾನು ಆಡಲು ಆಗುವುದಿಲ್ಲ ಎನ್ನುವುದನ್ನು ಅರಿತುಕೊಂಡಿದ್ದೇನೆ. ಈ ಸಂದರ್ಭದಲ್ಲಿ ಕಪ್ತಾನ ಸ್ಥಾನದಿಂದ ಕೆಳಗಿಳಿದು, ತಂಡಕ್ಕೆ ಹೊಸ ಯೋಜನೆಗಳನ್ನು ರೂಪಿಸಲು ಹೆಚ್ಚು ಅವಕಾಶ ಕೊಡಲು ಸಹಕರಿವುದು ಇದು ಸರಿಯಾದ ಸಮಯ ಅನ್ನಿಸುತ್ತದೆ. ನನ್ನ ಪ್ರಕಾರ ಟಿ-20 ತಂಡ ಹೊಸ ಹಂತಕ್ಕೆ ಹೋಗಲು ಇದು ಸೂಕ್ತ ಸಮಯ. 2024 ರಲ್ಲಿ ವಿಶ್ವಕಪ್‌ ಇರಲಿದೆ. ತಂಡಕ್ಕೆ ಬರುವ ಹೊಸ ನಾಯಕ ತನ್ನ ಸಹಕಾರ, ಮಾರ್ಗದರ್ಶನವನ್ನು ನೀಡಿ ಅವರ ದಿಕ್ಕಿ ನಲ್ಲಿ ತಂಡವನ್ನು ಸಾಗಿಸಲು ಇದು ಸೂಕ್ತವಾದ ಸಂದರ್ಭವಾಗಿದೆ ಎಂದಿದ್ದಾರೆ.

ನನ್ನ 12 ವರ್ಷದ ಕ್ರಿಕೆಟ್‌ ಜರ್ನಿಯಲ್ಲಿ ನೂರಾರು ಅವಿಸ್ಮರಣೀಯ ನೆನಪುಗಳಿವೆ. ಹಲವರು ಸಿಹಿ ಕಹಿ ಅನುಭವಗಳಿವೆ. ನನ್ನ ಕುಟುಂಬ ಯಾವಾಗಲೂ ನನ್ನ ಬೆನ್ನ ಹಿಂದೆಯೇ ಇತ್ತು ಎಂದಿದ್ದಾರೆ.

2011 ರಲ್ಲಿ ಟಿ-20 ಕ್ರಿಕೆಟ್‌ ಗೆ ಇಂಗ್ಲೆಂಡ್‌ ವಿರುದ್ಧ ಪಾದಾರ್ಪಣೆ ಮಾಡಿದ್ದರು. 2 ಶತಕ,19 ಅರ್ಧ ಶತಕದೊಂದಿಗೆ 3120 ರನ್‌ ಗಳಿಸಿದ್ದಾರೆ. ಫಿಂಚ್‌ ಬಿಗ್‌ ಬ್ಯಾಷ್‌ ಲೀಗ್ ನ ಮೆಲ್ಬೋರ್ನ್ ರೆನೆಗೇಡ್ಸ್ ತಂಡದಲ್ಲಿ ಮುಂದುವರೆಯಲಿದ್ದಾರೆ

Vishwa News 24

Recent Posts

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ -vishwanews24

ಉಡುಪಿ ಮಲಬಾರ್ ಗೋಲ್ಡ್‌ನಲ್ಲಿ ಹಫೀಝ್ ರೆಹಮಾನ್‌ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…

4 days ago

ದೋಣಿ ಮುಗುಚಿ ಇಬ್ಬರು ಯುವಕರು ನೀರುಪಾಲು : ಓರ್ವನ ಮೃತದೇಹ ಪತ್ತೆ, ಇನ್ನೋರ್ವನಿಗಾಗಿ ಶೋಧ – vishwanews24

ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು  ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…

5 days ago

ಬಿಜೆಪಿ ಬೆಂಬಲಿಸುವವರೂ ನಮ್ಮ ಗ್ಯಾರಂಟಿಗಳ ಫಲಾನುಭವಿಗಳು : ಸಿದ್ದರಾಮಯ್ಯ – vishwanews24

 ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…

5 days ago

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ – vishwanews24

ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…

5 days ago

ರೈಲು ಪ್ರಯಾಣಿಕರ ಗಮನಕ್ಕೆ: ಇಂದಿನಿಂದ ಬುಕ್ಕಿಂಗ್ ಮತ್ತು ರದ್ದತಿ  ನಿಯಮದಲ್ಲಿ ಭಾರಿ ಬದಲಾವಣೆ ; ಇಲ್ಲಿದೆ ಪೂರ್ಣ ಮಾಹಿತಿ – vishwanews24

ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್‌ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…

5 days ago

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ – vishwanews24

ಉಡುಪಿ:  ಯುವ‌ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…

5 days ago