Featured

ಸಿದ್ದರಾಮಯ್ಯನವರೇ, ನೀವು ಬಿಡುಗಡೆಗೊಳಿಸಿದ ವಿಷ ಬೀಜಗಳೇ ಇಂದು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಅಶಾಂತಿಗೆ ಕಾರಣರಾಗಿದ್ದಾರೆ : ನಳಿನ್‌ ಕುಮಾರ್‌‌ ಕಟೀಲ್ -Vishwanews24

ಮಂಗಳೂರು: ಸಿದ್ದರಾಮಯ್ಯನವರೇ, ನೀವು ಬಿಡುಗಡೆಗೊಳಿಸಿದ ಆ ವಿಷ ಬೀಜಗಳೇ ಇಂದು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಕಂಡ ಕಂಡಲ್ಲಿ ಬೆಂಕಿ ಇಟ್ಟು ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌‌ ಕಟೀಲ್‌ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು, ಮಾನ್ಯ ಸಿದ್ದರಾಮಯ್ಯನವರೇ, ನೀವು ಅಂದು ಎಸ್‌‌‌ಡಿಪಿ, ಕೆಎಫ್‌ಡಿ ಮತ್ತು ಪಿಎಫ್‌ಐ ಸಂಘಟನೆಗಳಿಗೆ ಸೇರಿದ 1600 ಸಮಾಜಘಾತುಕರ ವಿರುದ್ದ ಇದ್ದ 175 ಕ್ರಿಮಿನಲ್ ಮೊಕದ್ದಮೆಗಳನ್ನು ರದ್ದು ಮಾಡಿ, ಅಪರಾಧಿಗಳನ್ನು ಖುಲಾಸೆಗೊಳಿಸಿದಿರಿ. ನೀವು ಬಿಡುಗಡೆಗೊಳಿಸಿದ ಆ ವಿಷ ಬೀಜಗಳೇ ಇಂದು ಕರ್ನಾಟಕದಲ್ಲಿ ಹೆಮ್ಮರವಾಗಿ ಬೆಳೆದು ಕಂಡ ಕಂಡಲ್ಲಿ ಬೆಂಕಿ ಇಟ್ಟು ಅಶಾಂತಿಗೆ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ.

ಆದರೆ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ. ಎಸ್‌‌ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಅಂತಹ ವಿಷಬೀಜಗಳನ್ನು ಸಮಾಜದಿಂದ ನಿರ್ಮೂಲನೆ ಮಾಡಲು, ಆ ಗಲಭೆಗಳಿಗೆ ಕಾರಣರಾದವರಿಂದಲೇ ನಷ್ಟ ಭರ್ತಿ ಮಾಡುವ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಸಮಾಜಘಾತುಕರ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ ಎಂದಿದ್ದಾರೆ.

Vishwa News 24

Recent Posts

ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ – vishwanews24

ಕರಾವಳಿ ಮತ್ತು ಮಲೆನಾಡು ಪ್ರದೇಶಗಳ ಪ್ರವಾಸೋದ್ಯಮಕ್ಕೆ ಹೊಸ ಚೈತನ್ಯ .. ಕರಾವಳಿ–ಮಲೆನಾಡು ಕರ್ನಾಟಕ ಪ್ರವಾಸೋದ್ಯಮ ನೀತಿ–2026 ರೂಪಿಸುವ ಕುರಿತು ಸಭೆ…

18 minutes ago

ಟೋಲ್ ಪ್ಲಾಜಾಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ – vishwanews24

ಟೋಲ್ ಪ್ಲಾಜಾಗೆ ಎಲ್‌ಪಿಜಿ ಟ್ಯಾಂಕರ್ ಡಿಕ್ಕಿ: ಐವರು ದುರ್ಮರಣ ; ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆ ನವದೆಹಲಿ: ಉತ್ತರ ಪ್ರದೇಶದ ಕೌಶಂಬಿ…

34 minutes ago

ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ – vishwanews24

ಕೊಪ್ಪಳ : ಅಂಜನಾದ್ರಿ ದೇಗುಲಕ್ಕೆ ಖ್ಯಾತ ಕ್ರಿಕೆಟಿಗ ರಾಹುಲ್​​ ದ್ರಾವಿಡ್​​ ದಂಪತಿ ಭೇಟಿ ಕೊಪ್ಪಳ: ಖ್ಯಾತ ಕ್ರಿಕೆಟ್‌ ಆಟಗಾರ, ಟೀಂ…

41 minutes ago

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ – vishwanews24

ತುಳು ಸಿನಿಮಾ ನಿರ್ಮಾಣ ಮಾಡಿದ ಗಣೇಶ್ ಪತ್ನಿ ಶಿಲ್ಪಾ ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಸದಭಿರುಚಿ ಚಿತ್ರಗಳನ್ನು ನಿರ್ಮಾಣ ಮಾಡುತ್ತಾ ಬರುತ್ತಿರುವ…

51 minutes ago

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ – vishwanews24

ಬೆಂಗಳೂರು: ಡೇ ಕೇರ್‌ ಸೆಂಟರ್‌ ಪ್ರಕರಣ ; ಇಬ್ಬರು ಮಹಿಳಾ ಸಿಬ್ಬಂದಿ ಬಂಧನ ಬೆಂಗಳೂರು: ಇಲ್ಲಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇಕೇರ್ ಸೆಂಟರ್…

59 minutes ago

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ – vishwanews24

ಮಂಗಳೂರು : ಜೈಲಿನೊಳಗೆ ಗಾಂಜಾ ಎಸೆತ ಪ್ರಕರಣ ; ಓರ್ವನ ಬಂಧನ ಮಂಗಳೂರು: ನಗರದ ಜಿಲ್ಲಾ ಕಾರಾಗೃಹದ ಆವರಣದೊಳಗೆ ಗಾಂಜಾ…

2 hours ago