Featured

ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ : ನಾರಾಯಣಸಾ ಕೆ.ಭಾಂಡಗೆ – vishwanews24

ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ : ನಾರಾಯಣಸಾ ಕೆ.ಭಾಂಡಗೆ

ಬಾಗಲಕೋಟೆ: 2025ನೇ ಸಾಲಿನ ಕರ್ನಾಟಕ ಬಜೆಟ್​​ ಮಂಡನೆಯಾಗಿದ್ದು, ಸಿದ್ದರಾಮಯ್ಯ ಮಂಡಿಸಿರೋ ಬಜೆಟ್​ನ ಗಾತ್ರ ಬರೋಬ್ಬರಿ 4 ಲಕ್ಷ ಕೋಟಿ ರೂ ಆಗಿದೆ. ಈ ಬಗ್ಗೆ ಬಾಗಲಕೋಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾಜ್ಯಸಭಾ ಸದಸ್ಯ ನಾರಾಯಣಸಾ ಕೆ.ಭಾಂಡಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯನವರ ಬಜೆಟ್ ಮುಸಲ್ಮಾನರಿಗೆ ರಂಜಾನ್ ಕೊಡುಗೆ ಎಂದು ಹೇಳಿದ್ದಾರೆ.

ಸರ್ಕಾರ ರಂಜಾನ್ ಹಬ್ಬದ ಇಫ್ತಾರ್ ಕೂಟದ ಔತಣವನ್ನು ಪೂರ್ಣವಾಗಿ ಕೊಟ್ಟಂತಿದೆ. ಮುಸಲ್ಮಾನರಿಗೆ ಕೊಟ್ಟ ಅನುದಾನ ನೋಡಿದ್ರೆ, ಇದು ಮುಸಲ್ಮಾನರ ಸರ್ಕಾರ ಅನ್ನೋದನ್ನ ಸಿದ್ದರಾಮಯ್ಯ ಮತ್ತೆ ಸಾಬೀತು ಮಾಡಿದ್ದಾರೆ. ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮುಸಲ್ಮಾನರ ಮದುವೆಗೆ ಸಹಾಯಧನ ಕೊಟ್ಟಿದ್ದಾರೆ. ಅಲ್ಪಸಂಖ್ಯಾತ 16 ಮಹಿಳಾ ಕಾಲೇಜ್, 100 ಉರ್ದು ಶಾಲೆಗೆ ಹೈಟೆಕ್ ಟಚ್, ಹಜ್ ಭವನ ನಿರ್ಮಾಣಕ್ಕೆ ದುಡ್ಡು ಕೊಡ್ತಿದ್ದಾರೆ. ಮುಸಲ್ಮಾನರು ಎಂದು ಹೇಳಬಾರದು ಎಂಬ ಕಾರಣಕ್ಕೆ ಅಲ್ಪಸಂಖ್ಯಾತರು ಎಂದು ಹೇಳಿದ್ದಾರೆ. 25 ಸಾವಿರ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣಾ ತರಬೇತಿ ವಿಚಾರವಾಗಿ ಯಾಕೆ, ಅವರಿಗೆ ಯಾಕೆ ರಕ್ಷಣಾ ತರಬೇತಿ? ಬೇರೆ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣೆ ಬೇಡವೇನು ಎಂದು ಪ್ರಶ್ನೆ ಮಾಡಿದರು.

ಈ ಬಜೆಟ್ ನಲ್ಲಿ ಮುಸಲ್ಮಾನರಿಗೆ ಎನ್ ಕೊಡಬೇಕೆಂದು ರಂಜಾನ್ ಹಬ್ಬದ ಕೊಡುಗೆಯಾಗಿ ಸಂಪೂರ್ಣ ಬಜೆಟ್‌ನ್ನು ಮುಸಲ್ಮಾನರಿಗೆ ಕೊಟ್ಟಿದ್ದಾರೆ. ಎಲ್ಲವನ್ನೂ ಮುಸಲ್ಮಾನರಿಗೆ ಕೊಟ್ಟ ಈ ಸರ್ಕಾರದ್ದು ಬೋಗಸ್ ಬಜೆಟ್ ಉರ್ದು ಉರ್ದು ಅಂತ ಅಲ್ಪಸಂಖ್ಯಾತರ ಹೆಸರಿನಲ್ಲಿ ಮುಸಲ್ಮಾನರಿಗೆ ಕೊಟ್ಟಿದ್ದು, ಇದು ತಾರತಮ್ಯ ಮಾಡಿದಂತಿದೆ ಎಂದು ಕಿಡಿಕಾರಿದ್ದಾರೆ.

Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

2 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

2 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

3 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

3 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

6 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

7 hours ago