Featured

ಸಿದ್ದರಾಮಯ್ಯನವ್ರು ಹೊಸ ಜಾತಿಗಳನ್ನು ಸೃಷ್ಟಿಸಿ ಶಾಶ್ವತ ಅಪರಾಧಿ ಆಗೋದು ಬೇಡ : ಶಾಸಕ ಸುನಿಲ್ ಕುಮಾರ್ – vishwanews24

ಒಬಿಸಿ ಜಾತಿಗಳ ಮೀಸಲಾತಿ ಕ್ರಿಶ್ಚಿಯನ್ನರು ಕಸಿಯುವ ಹುನ್ನಾರ : ಶಾಸಕ ಸುನಿಲ್ ಕುಮಾರ್  ಆರೋಪ

ಬೆಂಗಳೂರು: ಕ್ರಿಸ್ಚಿಯನ್ ಜೊತೆ 42 ಹಿಂದೂ ಉಪಚಾತಿಗಳನ್ನು ಸೇರಿಸಿ ಹೊಸ ಜಾತಿಗಳನ್ನು ಈ ಸರ್ಕಾರ ಸೃಷ್ಟಿ ಮಾಡಿದೆ ಎಂದು ಶಾಸಕ ಸುನಿಲ್ ಕುಮಾರ್  ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಸುನಿಲ್ ಕುಮಾರ್ ಅವರು, ಸಿದ್ದರಾಮಯ್ಯ ನೇತೃತ್ವದಲ್ಲಿ ತರಾತುರಿಯಲ್ಲಿ ಜಾತಿ ಸಮೀಕ್ಷೆ ನಡೀತಿದೆ. ಹೊಸದಾಗಿ ಜಾತಿಗಳ ಪಟ್ಟಿ ಸೃಷ್ಟಿ ಮಾಡಿದ್ದಾರೆ. ಇವಕ್ಕೆ ಸರ್ಕಾರದ ಯಾವುದೇ ದಾಖಲೆಗಳಿಲ್ಲ. ಕ್ರಿಶ್ಚಿಯನ್ ಜತೆ 47 ಹಿಂದೂ ಉಪಜಾತಿಗಳನ್ನು ಸೇರಿಸಿ ಹೊಸ ಜಾತಿಗಳ ಸೃಷ್ಟಿ ಮಾಡಿದ್ದಾರೆ. ಇದರ ಪರಿಣಾಮ ಮತಾಂತರಕ್ಕೆ ಸರ್ಕಾರ ಪರೋಕ್ಷ ಬೆಂಬಲ ಕೊಡ್ತಿದೆ. ಮುಂದೆ ಹಿಂದುಳಿದ ವರ್ಗಗಳ ಮೀಸಲಾತಿ ಕಸಿಯುವ ಹುನ್ನಾರ ನಡೀತಿದೆ. ಒಬಿಸಿ ಜಾತಿಗಳ ಮೀಸಲಾತಿ ಕ್ರಿಶ್ಚಿಯನ್ನರು ಕಸಿಯುವ ಹುನ್ನಾರ ಇದು ಎಂದು ಆರೋಪಿಸಿದ್ದಾರೆ.

ಈ ಹಂತದಲ್ಲೇ ಇದನ್ನು ಚಿವುಟಿ ಹಾಕಬೇಕು. ಈ ನಿಟ್ಟಿನಲ್ಲಿ ಇವತ್ತು ದುಂಡುಮೇಜಿನ ಸಭೆ ನಡೆಸಿ ಮುಂದಿನ ಹಂತದ ಹೋರಾಟ, ಅಭಿಯಾನ ಬಗ್ಗೆ ಚರ್ಚೆ ಮಾಡ್ತೇವೆ. ಸರ್ಕಾರದ ಉದ್ದೇಶವೇ ಇಡೀ ಸಮಾಜ ಒಡೆಯುವುದು, ಮೀಸಲಾತಿ ಕಸಿಯುವುದು ಹಾಗೂ ಮತಾಂತರಕ್ಕೆ ಪ್ರಚೋದಿಸುವುದು ಆಗಿದೆ. ಸ್ವಾಮೀಜಿಗಳು ಇವತ್ತಿನ ಸಭೆಗೆ ಬರ್ತಾರೆ. ಸಿದ್ದರಾಮಯ್ಯನವ್ರು ಹೊಸ ಜಾತಿಗಳನ್ನು ಸೃಷ್ಟಿಸಿ ಶಾಶ್ವತ ಅಪರಾಧಿ ಆಗೋದು ಬೇಡ. ಇವತ್ತು ರಾಜ್ಯಪಾಲರಿಗೂ ಈ ಸಂಬ0ಧ ದೂರು ಕೊಡ್ತೇವೆ ಎಂದು ತಿಳಿಸಿದ್ದಾರೆ.

ಒಬಿಸಿ ವರ್ಗಗಳ ಮೀಸಲಾತಿ ಕಸಿಯುವ ಕೆಲಸಕ್ಕೆ ಮುಸುಕು ಹಾಕಿಕೊಂಡು ಸಿದ್ದರಾಮಯ್ಯ ಚಾಲನೆ ಕೊಟ್ಟಿದ್ದಾರೆ. ನಮ್ಮ ದೂರು, ಆಕ್ಷೇಪಣೆಗಳಿಗೆ ಹಿಂದುಳಿದ ವರ್ಗಗಳ ಆಯೋಗ ಕಿವಿಗೆ ಹಾಕಿಕೊಂಡಿಲ್ಲ. ಸರ್ಕಾರ ಅರಾಜಕತೆ ಸೃಷ್ಟಿಸಲು ಹೊರಟಿದೆ, ಇದಕ್ಕೆ ನಾವು ಬಿಡಲ್ಲ. ಇವತ್ತಿನ ಸಭೆ ನೂರಕ್ಕೂ ಹೆಚ್ಚು ಗಣ್ಯರು ಬರ್ತಾರೆ. ಮುಂದಿನ ಒಂದು ವಾರದಲ್ಲಿ ಹೋರಾಟ ಮಾಡ್ತೇವೆ. ರಾಜ್ಯಪಾಲರು ಮಧ್ಯಪ್ರವೇಶಕ್ಕೆ ಕೋರುತ್ತೇವೆ. ಈ ಹೊಸ ಜಾತಿಗಳ ಪಟ್ಟಿ ತೆಗೆಯುವಂತೆ ಸರ್ಕಾರಕ್ಕೆ ನಿರ್ದೇಶನ ಕೊಡಲು ರಾಜ್ಯಪಾಲರಿಗೂ ಭೇಟಿ ಮಾಡಿ ಮನವಿ ಮಾಡ್ತೇವೆ ಎಂದಿದ್ದಾರೆ.

ಕುರುಬ ಸಮಯದಾಯ ಎಸ್‌ಟಿಗೆ ಸೇರಿಸಲು ಇಂದು ಸಭೆ ವಿಚಾರವಾಗಿ ಮಾತನಾಡಿ, ಯಾವುದೇ ಜಾತಿಗೆ ಇನ್ನೊಂದು ಜಾತಿ ಸೇರಿಸಬೇಕು ಅಂದ್ರೆ ಕುಲಶಾಸ್ತ್ರೀಯ ಅಧ್ಯಯನ ಆಗಬೇಕು. ದೊಡ್ಡಮಟ್ಟದ ಚರ್ಚೆಗಳು ಆಗಬೇಕು. ಸಿದ್ದರಾಮಯ್ಯ ಕುರುಡು ಪ್ರೇಮ ತೋರಿಸಿ ಕುರುಬ ಸಮುದಾಯ ಎಸ್‌ಟಿಗೆ ಸೇರಿಸಲು ಹೊರಟಿದ್ದಾರೆ. ಆ ಮೂಲಕ ರಾಜ್ಯದ ಹಿತ ಮರೆತು ಸ್ವಹಿತ ತೋರುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

1 day ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

1 day ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

1 day ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

1 day ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

1 day ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

1 day ago