ರಕ್ಷಿತ್ ಶೆಟ್ಟಿ ಅಭಿನಯದ ‘777 ಚಾರ್ಲಿ’ ಗಲ್ಲಾಪೆಟ್ಟಿಗೆಯಲ್ಲಿ ಹಣಬೇಟೆ ಜೋರಾಗಿಯೇ ನಡೆಸಿದೆ. ಸಿನಿಮಾ ನೋಡಿದ ಪ್ರೇಕ್ಷಕರೇ ಚಿತ್ರದ ಬಗ್ಗೆ ಮತ್ತೊಬ್ಬರಿಗೆ, ಇನ್ನಿಬ್ಬರಿಗೆ ಹೇಳುತ್ತಿರುವ ಕಾರಣ, ಜನ ತಾವಾಗಿಯೇ ಚಿತ್ರಮಂದಿರಗಳ ಕಡೆ ಮುಖ ಮಾಡಿದ್ದಾರೆ. ಅದರ ಫಲಿತಾಂಶ ಎಂಬಂತೆ ಕೇವಲ ಐದು ದಿನಗಳಲ್ಲಿ ‘777 ಚಾರ್ಲಿ’ ಗಳಿಕೆ 32 ಕೋಟಿ ದಾಟಿದೆ.
ಗಳಿಕೆಯ ಬಗ್ಗೆ ಮಾತನಾಡಿದ ನಿರ್ದೇಶಕ ಕಿರಣ್ ರಾಜ್, ‘ಒಂದು ವಾರ ಆಗುವವರೆಗೂ ನಮಗೆ ಸರಿಯಾದ ಮಾಹಿತಿ ದೊರೆಯುವುದಿಲ್ಲ. ವಿತರಕರಿಗೆ ಇನ್ನೂ ವಿದೇಶಗಳ ಗಳಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿಲ್ಲ. ಆದರೆ, ಆನ್ಲೈನ್ ಬುಕ್ಕಿಂಗ್ ಮಾಹಿತಿ ಆಧರಿಸಿ ಸದ್ಯ ಮಾಡಿರುವ ಲೆಕ್ಕಾಚಾರವೂ ತಪ್ಪಲ್ಲ. ಈಗ ಅಂದಾಜು ಗಳಿಕೆ ಸಿಗುತ್ತಿದ್ದು, ಮೊದಲ ವಾರಾಂತ್ಯಕ್ಕೆ ಸಂಪೂರ್ಣ ವಿವರ ದೊರೆಯಲಿದೆ’ ಎನ್ನುತ್ತಾರೆ.
‘777 ಚಾರ್ಲಿ’ ಮೊದಲ ದಿನ 6.5 ಕೋಟಿ, ಎರಡನೇ ದಿನ 8 ಕೋಟಿ, ಮೂರನೇ ದಿನ 10 ಕೋಟಿ, ನಾಲ್ಕನೇ ದಿನ ಸೋಮವಾರವಾದರೂ 5 ಕೋಟಿ ಹಾಗೂ ಮಂಗಳವಾರ ಮೂರರಿಂದ ನಾಲ್ಕು ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಆ ಮೂಲಕ ಚಿತ್ರದ ಗಳಿಕೆ ಐದು ದಿನಗಳಲ್ಲಿ ಅಂದಾಜು 32 ಕೋಟಿ ರೂ. ದಾಟಿದೆ ಎಂಬ ಮಾಹಿತಿ ಇದೆ.
ಕಡಬ: ಚಿನ್ನದ ತೂಕ ಹೆಚ್ಚಿಸಿ ಬ್ಯಾಂಕ್ ಗೆ ವಂಚನೆಗೆ ಯತ್ನ: ಇಬ್ಬರ ಬಂಧನ ಕಡಬ: ಚಿನ್ನಾಭರಣದ ತೂಕವನ್ನು ಕೃತಕವಾಗಿ ಹೆಚ್ಚಿಸಿ…
ಮಹಾರಾಷ್ಟ್ರ : ಮಳೆ ಅಬ್ಬರ - ಕುಸಿದು ಬಿದ್ದ ರತ್ನಗಿರಿ ರೈಲು ನಿಲ್ದಾಣದ ಛಾವಣಿ ; ತಪ್ಪಿದ ದೊಡ್ಡ ದುರಂತ…
ಶಿವಮೊಗ್ಗ: ಬಸ್ ನಿಲ್ದಾಣದಲ್ಲಿ ಚೀಲದೊಳಗೆ ನವಜಾತ ಹೆಣ್ಣು ಮಗು ಪತ್ತೆ ಶಿವಮೊಗ್ಗ: ನವಜಾತ ಹೆಣ್ಣು ಶಿಶುವೊಂದನ್ನು ಬಸ್ ನಿಲ್ದಾಣದಲ್ಲಿ ಅನಾಥವಾಗಿ…
ಪಡುಬಿದ್ರಿ : ನಡಿಪಟ್ಟಣದಲ್ಲಿ ಕಡಲು ಕೊರೆತಕ್ಕೆ ತಡೆಗೋಡೆ ನಿರ್ಮಾಣಕ್ಕೆ ಸಚಿವ ಖಾದರ್ ಗೆ ವಿಶ್ವಾಸ್ ಅಮೀನ್ ಮನವಿ ಪಡುಬಿದ್ರಿ: ಉಡುಪಿ…
ಬಂಟ್ವಾಳ : ಬಸ್ಸಿಗೆ ಕಾಯುತ್ತಿದ್ದ ವಿದ್ಯಾರ್ಥಿಗೆ ಚೂರಿ ಇರಿತ ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಇರಾ…
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…