Featured

ಸಿಲಿಕಾನ್ ಸಿಟಿ ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಕೆ. ಅಣ್ಣಾಮಲೈ ಅಧಿಕಾರ ಸ್ವೀಕಾರ

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿಗೆ ಮತ್ತೊಬ್ಬ ದಕ್ಷ ಪೊಲೀಸ್ ಅಧಿಕಾರಿಯ ಎಂಟ್ರಿಯಾಗಿದೆ. ಕರ್ನಾಟಕ ಸಿಂಗಂ ಖ್ಯಾತಿಯ  ಪೊಲೀಸ್ ಅಧಿಕಾರಿ ಕೆ.ಅಣ್ಣಾಮಲೈ ಬೆಂಗಳೂರು ದಕ್ಷಿಣ ವಿಭಾಗದ ನೂತನ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.ಚಿಕ್ಕಮಗಳೂರು ಎಸ್ಪಿಯಾಗಿದ್ದ  ಅಣ್ಣಾಮಲೈ ಖಡಕ್ ಅಫೀಸರ್ ಎಂದೇ ಹೆಸರಾಗಿದ್ದು,  ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಕಚೇರಿಯಲ್ಲಿ ನಿನ್ನೆ  ನಿರ್ಗಮಿತ ಡಿಸಿಪಿ ಶರಣಪ್ಪ ಅವರಿಂದ ಅಧಿಕಾರ ಸ್ವೀಕರಿಸಿದರು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಣ್ಣಾಮಲೈ, ಸರ್ಕಾರದ ಆದೇಶದಂತೆ ಡಿಸಿಪಿಯಾಗಿ ವರ್ಗಾವಣೆಯಾಗಿದ್ದು, ತಮ್ಮ ಮೇಲೆ ಹೊಣೆಗಾರಿಕೆ ಹೆಚ್ಚಿದೆ ಎಂದು ತಿಳಿಸಿದರು.

ಅಪರಾಧ ಪ್ರಕರಣಗಳನ್ನು ಮಟ್ಟ ಹಾಕುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ,  ದಕ್ಷ ಅಧಿಕಾರಿ ಎಂದೇ ರಾಜ್ಯಾದ್ಯಂತ ಹೆಸರಾಗಿರುವ  ಚಿಕ್ಕಮಗಳೂರು ಎಸ್ಪಿಯಾಗಿದ್ದ ಕೆ. ಅಣ್ಣಾಮಲೈ ಅವರನ್ನು ಬೆಂಗಳೂರು ದಕ್ಷಿಣ ವಿಭಾಗೀಯ ಡಿಸಿಪಿಯಾಗಿ ವರ್ಗಾವಣೆ ಮಾಡಿದ್ದಾರೆ ಎನ್ನಲಾಗುತ್ತಿದೆ.

ಪಶ್ಚಿಮ ವಲಯದಲ್ಲಿ ಈಗಾಗಲೇ  ರವಿ ಚೆನ್ನಣ್ಣವರ್,  ಡಿಸಿಪಿಯಾಗಿದ್ದು, ಮತ್ತೋರ್ವ ದಕ್ಷ ಅಧಿಕಾರ ಅಣ್ಣಾಮಲೈ ಅವರು ದಕ್ಷಿಣ ವಲಯದ ಡಿಸಿಪಿಯಾಗಿ ಅಧಿಕಾರ ಸ್ವೀಕರಿಸಿರುವುದರಿಂದ ಇದೀಗ ಸಿಲಿಕಾನ್ ಸಿಟಿ ರೌಡಿಗಳಲ್ಲಿ ನಡುಕು ಉಂಟಾಗಿದೆ.

Vishwa News 24

Recent Posts

ಹೈದರಾಬಾದ್  : ಕಾರು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ತೆಲುಗು ನಟ ಭರತ್ ಕಾಂತ್ ಸಾವು – vishwanews24

ಹೈದರಾಬಾದ್  : ಕಾರು ಟ್ರಕ್ ನಡುವೆ ಭೀಕರ ರಸ್ತೆ ಅಪಘಾತ : ತೆಲುಗು ನಟ ಭರತ್ ಕಾಂತ್ ಸಾವು ಹೈದರಾಬಾದ್…

13 minutes ago

ನೀವು ಇತಿಹಾಸ ನಿರ್ಮಿಸಿದ್ದೀರಿ: ತಮಿಳುನಾಡು ನೂತನ ಸಿಎಂ ವಿಜಯ್‌’ಗೆ ಸಿದ್ದರಾಮಯ್ಯ ವಿಶೇಷ ಅಭಿನಂದನೆ – vishwanews24

ನೀವು ಇತಿಹಾಸ ನಿರ್ಮಿಸಿದ್ದೀರಿ: ತಮಿಳುನಾಡು ನೂತನ ಸಿಎಂ ವಿಜಯ್‌'ಗೆ ಸಿದ್ದರಾಮಯ್ಯ ವಿಶೇಷ ಅಭಿನಂದನೆ ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮಿಳುನಾಡಿನ…

26 minutes ago

ಕಾರವಾರದ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆ : 22 ಮೀನುಗಾರರ ರಕ್ಷಣೆ – vishwanews24

ಕಾರವಾರದ ಮೀನುಗಾರಿಕಾ ಬೋಟ್ ಗೋವಾ ಸಮುದ್ರ ಪ್ರದೇಶದಲ್ಲಿ ಮುಳುಗಡೆ : 22 ಮೀನುಗಾರರ ರಕ್ಷಣೆ ಕಾರವಾರ: ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ…

36 minutes ago

ಯುವತಿ ವಿಚಾರಕ್ಕೆ ಕಿರುಕುಳ ಆರೋಪ : ಆಡಿಯೋ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ – vishwanews24

ಯುವತಿ ವಿಚಾರಕ್ಕೆ ಕಿರುಕುಳ ಆರೋಪ : ಆಡಿಯೋ ರೆಕಾರ್ಡ್ ಮಾಡಿ ಯುವಕ ಆತ್ಮಹತ್ಯೆ ಹಾಸನ: ಯುವತಿ ವಿಚಾರಕ್ಕೆ ಕಿರುಕುಳ ನೀಡುತ್ತಿದ್ದಾರೆ…

51 minutes ago

ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ‌ : ಮೋದಿ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ – vishwanews24

ರಾಜಿ ಮಾಡಿಕೊಂಡ ಪ್ರಧಾನಿಯಿಂದ ದೇಶ ಮುನ್ನಡೆಸಲು ಸಾಧ್ಯವಿಲ್ಲ‌ : ಮೋದಿ ವಿರುದ್ಧ ರಾಹುಲ್‌ ಗಾಂಧಿ ಆಕ್ರೋಶ ನವದೆಹಲಿ: ರಾಜಿ ಮಾಡಿಕೊಂಡ…

60 minutes ago

ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ಅಕ್ರಮ ವೇಶ್ಯಾವಟಿಕೆ ದಂಧೆ ; ಮೂವರ ಬಂಧನ – vishwanews24

ಬೆಳ್ತಂಗಡಿ: ಕ್ಯಾಂಟೀನ್ ಹೆಸರಲ್ಲಿ ಅಕ್ರಮ ವೇಶ್ಯಾವಟಿಕೆ ದಂಧೆ ; ಪೊಲೀಸರ ದಾಳಿ - ಮೂವರ ಬಂಧನ ಬೆಳ್ತಂಗಡಿ,: ಕ್ಯಾಂಟೀನ್ ಹೆಸರಲ್ಲಿ…

1 hour ago