ದಕ್ಷಿಣ ಕನ್ನಡ

ಸುಚಿತ್ರ ಥಿಯೇಟರ್‌; ಇಂದು 3ಡಿ ಪ್ರದರ್ಶನಕ್ಕೆ ಚಾಲನೆ

ಮಹಾನಗರ: ಅತ್ಯಾಧುನಿಕ ಸೌಕರ್ಯಗಳೊಂದಿಗೆ ಈಗಾಗಲೇ ಚಿತ್ರಪ್ರೇಮಿಗಳ ಮನಸ್ಸು ಗೆದ್ದ ನಗರದ ಕೆ.ಎಸ್‌. ರಾವ್‌ ರಸ್ತೆಯ ‘ಸುಚಿತ್ರ’ ಥಿಯೇಟರ್‌ ಇದೀಗ 3ಡಿ ಸೌಕರ್ಯದೊಂದಿಗೆ ಮತ್ತೂಂದು ಬದಲಾವಣೆಗೆ ತೆರೆದುಕೊಂಡಿದೆ. ಮಂಗಳೂರಿನ ಸಿಂಗಲ್‌ ಥಿಯೇಟರ್‌ ಗಳ ಪೈಕಿ ಪ್ರಥಮ ಬಾರಿಗೆ 3ಡಿ ಸೌಕರ್ಯವನ್ನು ಸುಚಿತ್ರ ಅಳವಡಿಸಿದ್ದು, ಇವತ್ತಿನಿಂದ ಪ್ರದರ್ಶನ ಆರಂಭಿಸಲಿದೆ.

ಅತ್ಯಾಧುನಿಕ ಸೌಕರ್ಯಗಳಿರುವ ಸುಚಿತ್ರ ಥಿಯೇಟರ್‌ನಲ್ಲಿ ‘ತ್ರಿಬಲ್‌ ಬಿಮ್‌ 3ಡಿ’ ಸೌಲಭ್ಯವನ್ನು ನೀಡಲಾಗಿದೆ. ಇದಕ್ಕೆ ಹೈಜೆನ್‌ ಸಿಲ್ವರ್‌ ಸ್ಕೀನ್‌ ಕೂಡ ಅಳವ ಡಿಸಲಾಗಿದೆ. ಈ ಮೂಲಕ 3ಡಿ ಸಿನೆಮಾವನ್ನು ಇನ್ನು ಮುಂದೆ ಸುಚಿತ್ರದಂತಹ ಸಿಂಗಲ್‌ ಥಿಯೇಟರ್‌ನಲ್ಲೂ ವೀಕ್ಷಿಸಬಹುದಾಗಿದೆ. ಜಿಲ್ಲೆಯ ಯಾವುದೇ ಸಿಂಗಲ್‌ ಥಿಯೇಟರ್‌ನಲ್ಲಿ ಇಲ್ಲದಂತಹ ಹವಾ ನಿಯಂತ್ರಿತ ವ್ಯವಸ್ಥೆಯೊಂದಿಗೆ (ಎಸಿ)ಆಧುನಿಕ ಶೈಲಿಯ ಸೌಂಡ್‌ ಸಿಸ್ಟಂ, 4ಕೆ ಮಾದರಿಯ ಡಿಜಿಟಲ್‌ ಪ್ರೊಜೆಕ್ಟ್ ಸಹಿತ ಅತ್ಯಾಧುನಿಕ ವ್ಯವಸ್ಥೆಗಳನ್ನು ಸುಚಿತ್ರದಲ್ಲಿ ಬಳಸಿಕೊಳ್ಳಲಾಗುತ್ತಿದೆ. ಇದು ಕರಾವಳಿಯ ಸಿನೆಮಾ ಥಿಯೇಟರ್‌ ಗಳ ಪಾಲಿಗೆ ಹೊಸ ಅನುಭವವಾಗಿತ್ತು. 64 ಚಾನೆಲ್‌ Dolby Atmos ಸಿಸ್ಟಂನಲ್ಲಿ ಸುಚಿತ್ರ ಈಗಾಗಲೇ ಸಿನೆಮಾ ಪ್ರೇಮಿಗಳಿಗೆ ರಸದೌತಣ ನೀಡುತ್ತಿದೆ. ಇದರಿಂದಾಗಿ ತೆರೆಯ ಮೇಲೆ ಕಾಣುವ ಪ್ರತೀ ಸಿನೆಮಾದ ಸೌಂಡ್‌ ವೀಕ್ಷಕರಿಗೆ ರೋಚಕ ಅನುಭವ ನೀಡಲಿದೆ. ಈ ಚಿತ್ರಮಂದಿರದ ನವೀಕರಣದ ಕೆಲಸವನ್ನು ಕಳೆದ ಜೂನ್‌ ನಿಂದ ಆರಂಭಿಸಲಾಗಿದ್ದು, ಇತ್ತೀಚೆಗೆ ಚಿತ್ರ ಪ್ರದರ್ಶನ ಆರಂಭವಾಗಿತ್ತು.

ಭಾರತದಲ್ಲಿ ಮೊದಲ ಬಾರಿಗೆ 2012 ರಲ್ಲಿ Dolby Atmos ಸ್ಕ್ರೀನ್‌ ವ್ಯವಸ್ಥೆ ಜಾರಿಗೆ ಬಂದಿದೆ. ದೇಶದ ಸುಮಾರು 400 ಸ್ಕ್ರೀನ್‌ಗಳಲ್ಲಿ ಈಗಾಗಲೇ ಇದೇ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದೆ. ಸಿನೆಮಾ ಪ್ರದರ್ಶನಗೊಳ್ಳುವಾಗ ಥಿಯೇಟರ್‌ನ ನಾಲ್ಕೂ ಮೂಲೆಗಳಲ್ಲಿ ಪ್ರೇಕ್ಷಕನ ಕಿವಿಗೆ ಸಮರ್ಪಕವಾಗಿ ಸ್ವರ ಕೇಳುವ ರೀತಿಯಲ್ಲಿ ಥಿಯೇಟರ್‌ ಅನ್ನು ಸಿದ್ಧಪಡಿಸಲಾಗುತ್ತದೆ. ಸುಚಿತ್ರದಲ್ಲಿ ಇಂತಹ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ.

ಸುಚಿತ್ರ ಥಿಯೇಟರ್‌ನ ಬಾಲ್ಕನಿಯಲ್ಲಿ 272 ಹಾಗೂ ಕೆಳಗಡೆ 534 ಸೀಟು ವ್ಯವಸ್ಥೆ ಇದ್ದು, ಎಲ್ಲ  ಸೀಟುಗಳನ್ನು ಹೊಸದಾಗಿ ಸುಸಜ್ಜಿತ ರೀತಿಯಲ್ಲಿ ಜೋಡಿಸಲಾಗಿದೆ. ಟಿಕೆಟ್‌ ದರವನ್ನು ಪ್ರಸ್ತುತ ದರಕ್ಕಿಂತ ಸ್ವಲ್ಪ ಏರಿಕೆ ಮಾಡಲು ನಿರ್ಧರಿಸಲಾಗಿದ್ದು, ಮುಂದೆ 100 ರೂ. ಹಾಗೂ 150 ರೂ. ಎಂದು ನಿಗದಿಪಡಿಸಲು ಚಿಂತಿಸಲಾಗಿದೆ. ಮಲ್ಟಿಪ್ಲೆಕ್ಸ್‌ ಸಿನೆಮಾದ ಟಿಕೆಟ್‌ ಗಳನ್ನು ಆನ್‌ ಲೈನ್‌ (ಬುಕ್‌ ಮೈ ಶೋ) ಮೂಲಕ ಪಡೆಯುವ ರೀತಿಯಲ್ಲಿಯೇ ಸುಚಿತ್ರ ಥಿಯೇಟರ್‌ ನ ಟಿಕೆಟ್‌ಗಳು ದೊರೆಯುತ್ತಿದೆ. ಥಿಯೇ ಟರ್‌ನ ಒಳಗಡೆಯ ಕ್ಯಾಂಟೀನ್‌ ವ್ಯವಸ್ಥೆ ಯಲ್ಲೂ ಸುಧಾರಣೆಯಾಗಲಿವೆೆ. ಸುಚಿತ್ರಾ ಥಿಯೇಟರ್‌ ಆಧುನಿಕ ಶೈಲಿಗೆ ಬದಲಾವಣೆಗೊಂಡಂತೆ, ಅದರ ಪಕ್ಕದಲ್ಲೇ ಇರುವ ಪ್ರಭಾತ್‌ ಥಿಯೇಟರ್‌ ಕೂಡ ಈಗ ಆಧುನಿಕ ಸ್ಪರ್ಶ ಪಡೆದುಕೊಳ್ಳುತ್ತಿದೆ. ಇಲ್ಲೂ ಕೂಡ ಅತ್ಯಾಧುನಿಕ ಪ್ರಾಜೆಕ್ಟ್, ಸೌಂಡ್‌ ಸಿಸ್ಟಂ, ಹವಾನಿಯಂತ್ರಿತ ಸೌಕರ್ಯ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳ ಜೋಡಣೆಯಾಗುತ್ತಿದೆ.

 

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

1 day ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

1 day ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

1 day ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

1 day ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

1 day ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

1 day ago