ಸುಬ್ರಹ್ಮಣ್ಯ : ಎರಡು ತಿಂಗಳ ಹಿಂದೆ ನಾಪತ್ತೆಯಾಗಿದ್ದ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯೆ ಭಾರತಿ ಮೂಕಮಲೆ ಅವರು ಜ. 5ರಂದು ಸುಬ್ರಹ್ಮಣ್ಯ ಠಾಣೆಗೆ ಪ್ರಿಯಕರನೊಂದಿಗೆ ಹಾಜರಾಗಿ ಆತನೊಂದಿಗೆ ವಾಪಾಸ್ ತೆರಳಿದ್ದಾರೆ.
ಭಾರತಿ ಮೂಕಮಲೆ ತನ್ನ ಪ್ರಿಯಕರ ನಂದನ್ ಮತ್ತು ಅವರ ನ್ಯಾಯವಾದಿ ಮುಖಾಂತರ ಸುಬ್ರಹ್ಮಣ್ಯ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದ್ದಾರೆ. ನಂದನ್‌ನೊಂದಿಗೆ ಜೀವನ ಮುಂದುವರೆಸುವ ನಿರ್ಧಾರ ಪ್ರಕಟಿಸಿದ್ದಾರೆ. ಠಾಣೆಯಲ್ಲಿ ತನ್ನ ನಿರ್ಧಾರವನ್ನು ಲಿಖೀತ ರೂಪದಲ್ಲಿ ಬರೆದು ಕೊಟ್ಟು ನಂದನ್‌ನೊಂದಿಗೆ ತೆರಳಿದ್ದಾರೆ.
ತನ್ನಿಬ್ಬರು ಸಣ್ಣ ಹೆಣ್ಣು ಮಕ್ಕಳನ್ನು, ಪತಿಯನ್ನು ತೊರೆದು ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ಭಾರತಿ ಮತ್ತವರ ಪ್ರಿಯಕರ ನಂದನ್ ಎಷ್ಟೇ ಹುಡುಕಾಡಿದರೂ ಸಿಕ್ಕಿರಲಿಲ್ಲ. ತಿಂಗಳ ಹಿಂದೆ ವೀಡಿಯೋ ಮಾಡಿ ಹರಿಯಬಿಟ್ಟಿದ್ದ ಭಾರತಿ, ತಾನು ಪ್ರಿಯಕರನೊಂದಿಗೆ ಇರುವುದಾಗಿ ತಿಳಿಸಿದ್ದು, ತನ್ನನ್ನು ಹುಡುಕುವ ಕಾರ್ಯ ಮಾಡಬೇಡಿ ಎಂದು ಕೇಳಿ ಕೊಂಡಿದ್ದರು.
ಅದರೂ ಸುಬ್ರಹ್ಮಣ್ಯ ಪೊಲೀಸರು ಅವರ ಇರುವಿಕೆಯನ್ನು ಪತ್ತೆ ಮಾಡಲು ಕಾರ್ಯಾಚರಣೆ ನಡೆಸಿದ್ದರು. ಆದರೆ ಆ ಕಾರ್ಯ ಫಲಪ್ರದವಾಗಿರಲಿಲ್ಲ.
ಅಡ್ಡಮತದಾನ ಮಾಡಿಲ್ಲವೆಂದು ಧರ್ಮಸ್ಥಳದಲ್ಲಿ ಬಿಜೆಪಿ ಹೆಚ್.ಕೆ ಸುರೇಶ್ ಆಣೆ ಪ್ರಮಾಣ.. ನಾನು ಯಾವುದೇ ತಪ್ಪು ಮಾಡಿಲ್ಲ, ಅಡ್ಡಮತದಾನದಲ್ಲಿ ಭಾಗಿಯಾಗಿಲ್ಲ.. ನಾನು…
ಉಡುಪಿ ಜಿಲ್ಲೆಯ ನಗರ ಪೊಲೀಸ್ ಠಾಣೆಯ ಶಿವಕುಮಾರ್ ಹೆಚ್ ಎಂ ಅವರಿಗೆ 2026 ನೇ ಸಾಲಿನ ಡಿಜಿ ಪದಕ ಉಡುಪಿ:…
ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ…
ರಾಮ ಮಂದಿರ ದೇಣಿಗೆ ಹಗರಣ ಮುಚ್ಚಿ ಹಾಕಲು ಬಿಜೆಪಿ ಪ್ರಯತ್ನ: ಪ್ರಿಯಾಂಕ್ ಖರ್ಗೆ ಆರೋಪ ಬೆಂಗಳೂರು: ರಾಮ ಮಂದಿರ ದೇಣಿಗೆ…
ನಂದಿನಿ ಮಿಲ್ಕ್ ಪಾರ್ಲರ್‌ನಲ್ಲಿ ಅಗ್ನಿ ಅವಘಡ : ಶಾಕ್‌ನಿಂದ ಮಾಲೀಕ ಹೃದಯಾಘಾತಕ್ಕೆ ಬಲಿ ಚಿಕ್ಕಬಳ್ಳಾಪುರ: ನಗರದ ಪಶುವೈದ್ಯ ಇಲಾಖೆ ಕಚೇರಿ ಸಮೀಪ…
ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; ಆರು ಮಂದಿ ಮೀನುಗಾರರ ರಕ್ಷಣೆ ಮಂಗಳೂರು : ಮಂಗಳೂರಿನ ಬಳಿ ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ…