Featured

ಸುಬ್ರಹ್ಮಣ್ಯ ಮನೆ ಮೇಲೆ ಗುಡ್ಡ ಕುಸಿದ ಪ್ರಕರಣ: ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರದ ವತಿಯಿಂದ 11 ಲಕ್ಷ ಪರಿಹಾರ ನೀಡಿದ ಸಚಿವ ಎಸ್. ಅಂಗಾರ – Vishwanews24

ಸುಬ್ರಹ್ಮಣ್ಯ ಮನೆ ಮೇಲೆ ಗುಡ್ಡ ಕುಸಿದ ಪ್ರಕರಣ: ಮೃತ ಮಕ್ಕಳ ಕುಟುಂಬಕ್ಕೆ ಸರ್ಕಾರದ ವತಿಯಿಂದ 11 ಲಕ್ಷ ಪರಿಹಾರ ನೀಡಿದ ಸಚಿವ ಎಸ್. ಅಂಗಾರ

ಸುಬ್ರಮಣ್ಯ: ನಿನ್ನೆ ಇಲ್ಲಿ ಪರ್ವತಮುಖಿಯಲ್ಲಿ ಮನೆ ಮೇಲೆ ಗುಡ್ಡ ಕುಸಿದು ಸಾವನ್ನಪ್ಪಿದ ಇಬ್ಬರು ಮಕ್ಕಳ ಹೆತ್ತವರಿಗೆ ಸರ್ಕಾರದ ವತಿಯಿಂದ 11 ಲಕ್ಷ 5 ಸಾವಿರ ಮೊತ್ತದ ಒಟ್ಟು 3 ಚೆಕ್ ನ್ನು ಸಚಿವ ಎಸ್. ಅಂಗಾರ ವಿತರಿಸಿದರು. ಮಕ್ಕಳ ತಂದೆ ಕುಸುಮಾಧರಿಗೆ ಅವರ ತಂದೆ ಬೊಮ್ಮಣ ಗೌಡ ಕರಿಮಜಲು ಅವರ ನಿವಾಸದಲ್ಲಿ ವಿತರಿಸಿದರು.

ಮೃತಪಟ್ಟ ಇಬ್ಬರು‌ ಮಕ್ಕಳಿಗಾಗಿ ಸರಕಾರದಿಂದ ತಲಾ 5 ಲಕ್ಷದಂತೆ ಹಾಗೂ‌ ಮನೆ ನಾಶಕ್ಕಾಗಿ ಸರಕಾರ ನೀಡುವ ರೂ. 95ಸಾವಿರದ 100 ಹಾಗೂ ಮನೆಯೊಳಗಿದ್ದ ವಸ್ತುಗಳು ನಾಶವಾಗಿರುವುದಕ್ಕೆ ಸರಕಾರದಿಂದ ಕೊಡ ಮಾಡುವ ರೂ. 10 ಸಾವಿರ ಹೀಗೆ ಒಟ್ಟು 11 ಲಕ್ಷ 5 ಸಾವಿರದ 100 ರೂ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ವೆಂಕಟ್ ವಳಲಂಬೆ, ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮುಳಿಯ ಕೇಶವ ಭಟ್, ಬಿಜೆಪಿ ಸುಳ್ಯ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಕಡಬ ತಹಶಿಲ್ದಾರ್ ಅನಂತ ಶಂಕರ, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸುಬ್ರಹ್ಮಣ್ಯ ಗ್ರಾ.ಪಂ. ಸದಸ್ಯೆ ಭಾರತಿ ದಿನೇಶ್, ಸುಬ್ರಹ್ಮಣ್ಯ ಐನೆಕಿದು ಸಹಕಾರಿ ಸಂಘದ ನಿರ್ದೇಶಕ ವೆಂಕಟೇಶ್ ಹೆಚ್.ಎಲ್., ಸುಬ್ರಹ್ಮಣ್ಯದ ಉದ್ಯಮಿ ರವಿ ಕಕ್ಕೆಪದವು, ಮತ್ತಿತರರು ಉಪಸ್ಥಿತರಿದ್ದರು.

Vishwa News 24

Recent Posts

ಮಲ್ಪೆ : ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ತೆರಳದ ಪರ್ಸೀನ್ ಬೋಟುಗಳು -vishwanews24

ಮಲ್ಪೆ : ಆಳಸಮುದ್ರದಲ್ಲಿ ಭಾರೀ ಗಾಳಿ: ಮೀನುಗಾರಿಕೆಗೆ ತೆರಳದ ಪರ್ಸೀನ್ ಬೋಟುಗಳು ಮಲ್ಪೆ: ಕಳೆದ ಎರಡು ದಿನಗಳಿಂದ ಆಳಸಮುದ್ರದಲ್ಲಿ ಭಾರೀ…

7 hours ago

ಸೆ.7ರೊಳಗೆ ಕರಾವಳಿ – ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಕೆ.ಜೆ. ಜಾರ್ಜ್‌ -vishwanews24

ಸೆ.7ರೊಳಗೆ ಕರಾವಳಿ – ಮಲೆನಾಡು ಪ್ರವಾಸೋದ್ಯಮ ನೀತಿಯ ಕರಡು ಸಿದ್ಧ: ಕೆ.ಜೆ. ಜಾರ್ಜ್‌ ಬೆಂಗಳೂರು: ಕರ್ನಾಟಕದ ಕರಾವಳಿ ಹಾಗೂ ಮಲೆನಾಡು…

10 hours ago

ಮಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಅಡುಗೆ ಸೇವಾ ಘಟಕವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು -vishwanews24

ಮಂಗಳೂರು: ವಂದೇ ಭಾರತ್ ಎಕ್ಸ್‌ಪ್ರೆಸ್ ಅಡುಗೆ ಸೇವಾ ಘಟಕವನ್ನು ಪರಿಶೀಲಿಸಿದ ಆಹಾರ ಸುರಕ್ಷತಾ ಅಧಿಕಾರಿಗಳು ಮಂಗಳೂರು : ಮಂಗಳೂರು ಸೆಂಟ್ರಲ್…

12 hours ago

ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು -vishwanews24

ಉಡುಪಿ : ಬಾಳೆಹಣ್ಣು ದಾಸ್ತಾನು ಕೇಂದ್ರಗಳ ಮೇಲೆ ದಾಳಿ ; ರಾಸಾಯನಿಕಯುಕ್ತ ಬಾಳೆಹಣ್ಣುಗಳ ನಾಶ ಪಡಿಸಿದ ಅಧಿಕಾರಿಗಳು ಉಡುಪಿ :…

13 hours ago

ತುಳುಕೂಟ ಉಡುಪಿ: 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ -vishwanews24

ತುಳುಕೂಟ ಉಡುಪಿ: 2026–27ನೇ ಸಾಲಿನ ಕಾರ್ಯಕಾರಿ ಸಮಿತಿ ಪ್ರಕಟ- ಅಧ್ಯಕ್ಷರಾಗಿ ಬಿ. ಜಯಕರ ಶೆಟ್ಟಿ ಇಂದ್ರಾಳಿ ತುಳು ಭಾಷೆ, ಸಾಹಿತ್ಯ,…

13 hours ago

ಎಲ್‌ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ -vishwanews24

ಎಲ್‌ಪಿಜಿ: ಇ-ಕೆವೈಸಿ ದಿನಾಂಕ ಆ. 23ರ ವರೆಗೆ ವಿಸ್ತರಣೆ ಉಡುಪಿ: ಎಲ್‌ಪಿಜಿ ಗ್ರಾಹಕರಿಗೆ ಇ-ಕೆವೈಸಿ ಪೂರ್ಣ ಗೊಳಿಸಲು ನೀಡಲಾಗಿದ್ದ ಗಡುವನ್ನು ಆ.…

14 hours ago