ಸುಬ್ರಹ್ಮಣ್ಯ: ಸುಪ್ರಸಿದ್ದ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿಯ ಸಂಭ್ರಮ ಮನೆಮಾಡಿದೆ. ಡಿ.1ರಂದು ಕೊಪ್ಪರಿಗೆ ಏರುವ ಮೂಲಕ ಜಾತ್ರೋತ್ಸವ ಆರಂಭವಾಗಿದ್ದು, ನಿನ್ನೆ ರಾತ್ರಿ ಪಂಚಮಿ ರಥೋತ್ಸವ ನಡೆಯಿತು. ರಾತ್ರಿ ದೇವರಿಗೆ ಪಲ್ಲಕ್ಕಿ ಉತ್ಸವ, ಬಂಡಿ ಉತ್ಸವ ದೇವಸ್ಥಾನದ ಹೊರಾಂಗಣದಲ್ಲಿ ವೈಭವದಿಂದ ನೆರವೇರಿತು.
ತಡರಾತ್ರಿ ನಡೆದ ಪಂಚಮಿ ರಥೋತ್ಸವವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು. ಪಂಚಮಿ ರಥವೂ ಬಹಳ ವಿಶೇಷವಾಗಿದ್ದು, ವಿದ್ಯುತ್ ದೀಪಾಲಂಕಾರದಿಂದ ರಾರಾಜಿಸಿದ ರಥದಲ್ಲಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಉತ್ಸವ ಮೂರ್ತಿಯನ್ನಿಟ್ಟು ತೇರನ್ನು ಎಳೆಯಲಾಯಿತು.
ರಥೋತ್ಸವದ ಬಳಿಕ ಸವಾರಿಕಟ್ಟೆಯಲ್ಲಿ ಕಟ್ಟೆ ಪೂಜೆ ಮತ್ತು ಆಕರ್ಷಣೀಯ “ಕುಕ್ಕೆ ಬೆಡಿ” ಪ್ರದರ್ಶನಗೊಂಡಿತು.ಕೊರೊನಾ ಕಾರಣದಿಂದ ಮುನ್ನೆಚ್ಚರಿಕೆ ಕ್ರಮ ಪಾಲಿಸಿಕೊಂಡು ರಥೋತ್ಸವ ನಡೆಸಲಾಯಿತು. ಹರಕೆಯ ಎಡೆಸ್ನಾನ ರದ್ದುಗೊಳಿಸಿ, ಬೀದಿ ಮಡೆಸ್ನಾನಕ್ಕೆ ಮಾತ್ರ ಅವಕಾಶ ನೀಡಲಾಗಿತ್ತು
ಚಂಪಾ ಷಷ್ಠೀ ರಥೋತ್ಸವದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಅದು ಮಡೆ ಮಡೆ ಸ್ನಾನ. ಶ್ರೀ ಕ್ಷೇತ್ರದ ಪುಣ್ಯ ನದಿ ಕುಮಾರಧಾರದಿಂದ ಸನ್ನಿಧಾನದವರೆಗೆ ಸುಮಾರು ೫ ಕಿ.ಮೀ ಉರುಳು ಸೇವೆ ಮಾಡುವ ಮೂಲಕ ಭಕ್ತಾದಿಗಳು ಹರಕೆ ಸಲ್ಲಿಸುವುದು ವಾಡಿಕೆ. ರಸ್ತೆಯಲ್ಲಿ ಈ ಭಕ್ತಾದಿಗಳಿಗೆಂದೇ ವಿಶೇಷವಾಗಿ ಉರುಳು ಸೇವೆ ಪಥವನ್ನು ನಿರ್ಮಾಣ ಮಾಡಲಾಗುತ್ತದೆ. ಕಲ್ಲು, ಮಣ್ಣಿನ ನಡುವೆ ಜಾಗಟೆ, ಶಂಖ, ವಿಷ಼ಲ್ ಮುಂತಾದವುಗಳ ಜೊತೆ, ಸುಬ್ರಹ್ಮಣ್ಯ ದೇವರ ನಾಮ ಸ್ಮರಣೆ ಮಾಡುತ್ತಾ ಭಕ್ತಾದಿಗಳು ಉರುಳು ಸೇವೆ ಮಾಡುತ್ತಾರೆ.
ಮುಂಬೈನಲ್ಲಿ ಮುಂಗಾರು: ತಗ್ಗು ಪ್ರದೇಶಗಳು ಜಲಾವೃತ, ರೈಲು ಸಂಚಾರ ವ್ಯತ್ಯಯ ಮುಂಬೈ: ಮುಂಬೈನಲ್ಲಿ ಮುಂಗಾರು ಆರಂಭವಾದ ಒಂದು ದಿನದ ನಂತರ,…
ಜೂ.25ಕ್ಕೆ ಮಂಗಳೂರಿಗೆ ಶಾರುಖ್ ಖಾನ್: ರೋಹನ್ ಕಾರ್ಪೊರೇಶನ್ ವಿಶೇಷ ಕಾರ್ಯಕ್ರಮದಲ್ಲಿ ಭಾಗಿ ಮಂಗಳೂರು: ಬಾಲಿವುಡ್ ನ ಖ್ಯಾತ ನಟ ಹಾಗೂ…
ಕರ್ತವ್ಯದ ವೇಳೆ ಹೃದಯಾಘಾತ : ಡಿಎಆರ್ ಪೊಲೀಸ್ ಕಾನ್ಸ್‌ಟೇಬಲ್ ಸಾವು ರಾಯಚೂರು: ಜಿಲ್ಲೆಯ ದೇವದುರ್ಗ ಜಿಲ್ಲಾ ಸಶಸ್ತ್ರ ಮೀಸಲು ಪಡೆ ಕಾನ್ಸ್‌ಟೇಬಲ್…
ತುಮಕೂರು: LIC ಹಣದ ಆಸೆಗೆ ಸ್ವಂತ ತಮ್ಮನನ್ನೇ ಕೊಲೆ ಮಾಡಿದ ಅಣ್ಣ ತುಮಕೂರು : ಎಲ್‌ಐಸಿ ಪಾಲಿಸಿಯಿಂದ ಸಿಗುವ 30…
ಲಂಡನ್ ಕೋರ್ಟ್‌ನಲ್ಲಿ ಬ್ಯಾಂಕ್ ಆಫ್ ಇಂಡಿಯಾಗೆ ಗೆಲುವು : ನೀರವ್ ಮೋದಿಗೆ 100 ಕೋಟಿ ರೂ. ಪಾವತಿಸಲು ಆದೇಶ ಲಂಡನ್…
ಮಂಗಳೂರು/ಉಡುಪಿ: ಐವನ್ ಡಿಸೋಜಾ ರಿಗೆ ಸಚಿವ ಸ್ಥಾನ ನೀಡುವಂತೆ ಬಿ ಕೆ ಹರಿಪ್ರಸಾದ್ ಗೆ ಕಥೊಲಿಕ್ ಸಭಾ ಮನವಿ ಮಂಗಳೂರು/ಉಡುಪಿ:…