Featured

ಸುರತ್ಕಲ್ :  ಅ.18ಕ್ಕೆ ಟೋಲ್ ಗೇಟ್ ಮುತ್ತಿಗೆ: ಕುಂದಾಪುರದಿಂದ ನೂರಾರು ಮಂದಿ ಭಾಗವಹಿಸಲು ನಿರ್ಧಾರ – Vishwanews24

ಸುರತ್ಕಲ್ :  ಅ.18ಕ್ಕೆ ಟೋಲ್ ಗೇಟ್ ಮುತ್ತಿಗೆ: ಕುಂದಾಪುರದಿಂದ ನೂರಾರು ಮಂದಿ ಭಾಗವಹಿಸಲು ನಿರ್ಧಾರ

ಕುಂದಾಪುರ : ಹತ್ತು ಕಿ.ಮೀ ಅಂತರದಲ್ಲಿ ಎರಡು ಕಡೆ ಟೋಲ್ ಸಂಗ್ರಹಿಸುವುದು ಹೆದ್ದಾರಿ ದರೋಡೆಗೆ ಸಮ. ಈ ರೀತಿ ಪ್ರಯಾಣಿಕರನ್ನು ಬಲವಂತವಾಗಿ ವಸೂಲಿ ಮಾಡುವುದು ನಿಯಮಗಳ ಉಲ್ಲಂಘನೆಯಾಗಿದೆ. ಆರು ತಿಂಗಳ ತಾತ್ಕಾಲಿಕ ಅವಧಿಗೆ ಆರಂಭಗೊಂಡ ಸುರತ್ಕಲ್ ಟೋಲ್ ಗೇಟ್ ಜನರ ಪ್ರಬಲ ವಿರೋಧದ ಹೊರತಾಗಿಯೂ ಏಳು ವಷ೯ಗಳನ್ನು ಅಕ್ರಮವಾಗಿ ಪೂರೈಸಿದೆ.

ಈ ಅವಧಿಯಲ್ಲಿ ಸುರತ್ಕಲ್, ಬಿ.ಸಿ. ರೋಡ್ ಹೆದ್ದಾರಿಯಲ್ಲಿ ಸುಂಕ ಸಂಗ್ರಹದ ಹೆಸರನಲ್ಲಿ ವಾಹನ ಸವಾರರಿಂದ ವಸೂಲಿ ಮಾಡಿದ ಮೊತ್ತ ಸರಿ ಸುಮಾರು 400 ಕೋಟಿ ರೂಪಾಯಿ. ಇಷ್ಟಾದರೂ ಆಳುವವರ ಹಣದ ದಾಹ ತಣಿಯುತ್ತಿಲ್ಲ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಆರೋಪಿಸಿದರು.

ಮಲ್ಪೆ: ಆಕಸ್ಮಿಕವಾಗಿ ಕಾಲು ಜಾರಿ ಬೋಟ್ ನಿಂದ ಬಿದ್ದು ಮೀನುಗಾರ ಸಾವು – Vishwanews24

ಕುಂದಾಪುರ ಕಾಮಿ೯ಕ ಭವನದ ಸಬಾಂಗಣದಲ್ಲಿ ಜರುಗಿದ ಟೋಲ್ ಗೇಟ್ ಮುತ್ತಿಗೆ ಹೋರಾಟದ ಯಶಸ್ಸಿಗಾಗಿ ಏಪ‌೯ಡಿಸಿದ ಸಿದ್ಧತಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

ಹೋರಾಟ‌ ಸಮಿತಿಯ ಮುಖಂಡ ಸಹಕಾರಿ ‌ದುರೀಣ ಕೊಳ್ಕೆಬೈಲ್ ಕಿಸನ್ ಹೆಗ್ಡೆ ಮಾತನಾಡಿ, ಟೋಲ್ ಗೇಟ್ ಮುತ್ತಿಗೆ ಹೋರಾಟಕ್ಕೆ ಬಸ್ಸ್ ಮಾಲಕರ ಸಂಘವು ಸಂಪೂಣ೯ ಬೆಂಬಲ ಕೊಡುತ್ತದೆ‌. ಉಡುಪಿ ಜಿಲ್ಲೆಯ ಬಡ ಮಧ್ಯಮ ವರ್ಗದ ಹಾಗೂ ಟ್ಯಾಕ್ಸಿ ಚಾಲಕರನ್ನು ಟೋಲ್ ಗೇಟ್ ಹಿಂದಿರುವ ಶಕ್ತಿಗಳು ನಿರಂತರ ಶೋಷಿಸುತ್ತಿದೆ. ಈ ಶೋಷಣೆಯ ನಾಂದಿಗೆ ನೂರಾರು ಮಂದಿ ಜಿಲ್ಲೆಯಿಂದ ಭಾಗವಹಿಸುವಂತೆ ಕರೆ ನೀಡಿದರು.

ಸಿಐಟಿಯು ಜಿಲ್ಲಾ ಪ್ರಧಾನ ಕಾಯ೯ದಶಿ೯ ಸುರೇಶ ಕಲ್ಲಾಗರ, ಚಂದ್ರಶೇಖರ.ವಿ. ರಮೇಶ್.ವಿ.ರಾಜು ದೇವಾಡಿಗ ರವಿ.ವಿ.ಎಂ.‌,ದಲಿತ ಸಂಘಷ೯ ಸಮಿತಿ ಮುಖಂಡ ನಾಗರಾಜ, ಶ್ರೀನಿವಾಸ ಮಲ್ಯಾಡಿ, ಶ್ರೀನಾಥ ಕುಲಾಲ್, ಗಣೇಶ ಮೆಂಡನ್ ಬಾಲಕೃಷ್ಢ ಎಂ. ವೆಂಕಟೇಶ್ ಕೋಣಿ ಮತ್ತು ಇತರ ಸಮಾನ ಮನಸ್ಕ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

ಪಡುಬಿದ್ರಿ: ಬ್ಲೂಫ್ಲ್ಯಾಗ್‌ ಬೀಚ್‌ ನಿರ್ವಹಣೆಯಲ್ಲಿ ಅಕ್ರಮ..ನಕಲಿ ರಶೀದಿ ಮುದ್ರಿಸಿ ಬೋಟಿಂಗ್‌ಗೆ ಹಣ ವಸೂಲಿ : ಡಿಸಿಗೆ ದೂರು – Vishwanews24

ಟೋಲ್ ಗೇಟ್ ಮುತ್ತಿಗೆ ನೇರ ಕಾಯಾ೯ಚರಣೆಯ ಅಂಗವಾಗಿ ಕುಂದಾಪುರ ಪೇಟೆಯಲ್ಲಿ ಪಾದಯಾತ್ರೆ ಮೂಲಕ ಪ್ರಚಾರ ಜಾಥಾ ನಡೆಸಲು ನಿಧ೯ರಿಸಲಾಯಿತು. ಇಂಟಕ್ ಮುಖಂಡ ಲಕ್ಷ್ಮಣ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

Vishwa News 24

Recent Posts

ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ – vishwanews24

 ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…

2 days ago

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ : ಬೆಸ್ಕಾಂ ಸ್ಪಷ್ಟನೆ – vishwanews24

ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…

2 days ago

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ – vishwanews24

ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…

2 days ago

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಆರೋಪ – vishwanews24

ಅಕ್ರಮ ಎಸ್‌ಐಆರ್‌ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್‌ ಸಂಚು : ಶೋಭಾ ಕರಂದ್ಲಾಜೆ ಗಂಭೀರ…

2 days ago

ಮೈಸೂರು ದಸರಾದಲ್ಲಿ ಕಂಬಳ ಆಯೋಜನೆ: ಸಂಸದ ಯದುವೀರ್ ಒಡೆಯರ್ ಆಕ್ಷೇಪ – vishwanews24

ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…

2 days ago

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ – vishwanews24

ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…

2 days ago