Featured

ಸುರತ್ಕಲ್ : ಆಯತಪ್ಪಿ ನದಿಗೆ ಬಿದ್ದು ಯುವಕ ಮೃತ್ಯು – vishwanews24

ಸುರತ್ಕಲ್ : ಆಯತಪ್ಪಿ ನದಿಗೆ ಬಿದ್ದು ಯುವಕ ಮೃತ್ಯು

ಸುರತ್ಕಲ್ : ಮರವೂರು ರೈಲ್ವೇ ಸೇತುವೆಯ ಕೆಳಗಿನ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಆಯತಪ್ಪಿ ನದಿಗೆ ಬಿದ್ದು ಯುವಕನೋರ್ವ ಮೃತಪಟ್ಟಿರುವ ಘಟನೆ ಸೋಮವಾರ ಸಂಜೆ ವರದಿಯಾಗಿದೆ.

ಮೃತರನ್ನು ಮೂಲತಃ ಬಜ್ಪೆ ನಿವಾಸಿ ಸದ್ಯ ಸುರತ್ಕಲ್‌ ಸಮೀಪದ ಚೊಕ್ಕಬೊಟ್ಟುವಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಶಾಕಿರ್‌ (30) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಶಾಕಿರ್‌ ತನ್ನ 4 ಮಂದಿ ಸ್ನೇಹಿತರೊಂದಿಗೆ ಮರವೂರು ರೈಲ್ವೇ ಸೇತುವೆಯ ಕೆಳ ಭಾಗಕ್ಕೆ ಈಜಲೆಂದು ತೆರಳಿದ್ದರು ಎನ್ನಲಾಗಿದೆ. ಈ ವೇಳೆ ಶಾಕಿರ್‌ ಕಾಲು ಜಾರಿ ಆಯತಪ್ಪಿ ನದಿಗೆ ಬಿದ್ದು ನೀರಿನಲ್ಲಿ ನಾಪತ್ತೆಯಾಗಿದ್ದರು ಎಂದು ತಿಳಿದು ಬಂದಿದೆ.

ಬಳಿಕ ಜೊತೆಗಿದ್ದ ಸ್ನೇಹಿತರು ಪೊಲೀಸರು ಮತ್ತು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಕಾವೂರು ಪೊಲೀಸರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದು, ಅವರು ಬಂದು ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲೆತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Vishwa News 24

Recent Posts

ಎಸ್‌ಐಆರ್‌ ವಿವಾದ: ಬಿಜೆಪಿ ಕಾರ್ಯಕರ್ತರಿಗೆ ಕಿರುಕುಳ ನೀಡಿದರೆ ರಾಜ್ಯಾದ್ಯಂತ ಹೋರಾಟ :ಯಡಿಯೂರಪ್ಪ ಎಚ್ಚರಿಕೆ – vishwanews24

ಬಿಜೆಪಿ ಕಾರ್ಯಕರ್ತರ ಮೇಲಿನ FIR ರದ್ದಿಗೆ ಆಗ್ರಹ : ರಾಜ್ಯಾದ್ಯಂತ ಹೋರಾಟದ ಎಚ್ಚರಿಕೆ ನೀಡಿದ ಬಿಎಸ್‌ವೈ ಬೆಂಗಳೂರು: ಎಸ್‍ಐಆರ್ ಸಂಬಂಧ…

19 hours ago

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ – vishwanews24

ಮಂಗಳೂರು: ಮನೆ ಕನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು; ದೆಹಲಿ ಮೂಲದ ಇಬ್ಬರ ಬಂಧನ, 18 ಲಕ್ಷ ಮೌಲ್ಯದ ಸೊತ್ತು…

20 hours ago

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ – vishwanews24

ಏಷ್ಯನ್ ಗೇಮ್ಸ್ : ಕುಸ್ತಿಯಲ್ಲಿ ಚಿನ್ನ ಗೆದ್ದ ಅಮನ್ ಸೆಹ್ರಾವತ್ ನಗೋಯಾ: ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನಲ್ಲಿ…

20 hours ago

ಕಾರ್ಕಳ : ಅ. 5 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ – vishwanews24

ಕಾರ್ಕಳ : ಅ. 05 ರಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಯಿಂದ ಬೃಹತ್ ಪ್ರತಿಭಟನೆ ಕಾರ್ಕಳ: ರಾಜ್ಯ ಕಾಂಗ್ರೆಸ್ ಸರ್ಕಾರದ…

21 hours ago

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ – vishwanews24

ಮಂಗಳೂರು: ಯುವನಿಧಿ ಫಲಾನುಭವಿಗಳಿಗೆ ಕೌಶಲ ಭಾಗ್ಯ: ಉಚಿತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಅರ್ಜಿ ಆಹ್ವಾನ ಮಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ…

21 hours ago

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ – vishwanews24

180 ಜನರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚಾರ್‌ಗೆ 1 ಕೋಟಿ ರೂ. ಘೋಷಣೆ ನವದೆಹಲಿ : ದುಬೈನಿಂದ…

21 hours ago