ಸುರತ್ಕಲ್: ಸುರತ್ಕಲ್ ನಗರದಲ್ಲಿ ಬಹುಕೋಟಿ ವೆಚ್ಚದ ಮಾರುಕಟ್ಟೆ ನಿರ್ಮಾಣ ಕಾಮಗಾರಿಯು ಕೊರೋನಾ ಬಳಿಕ ಮಾರುಕಟ್ಟೆಯಲ್ಲಿ ಸರಕುದರ ಏರಿಕೆ ಹಾಗೂ ಜಿಎಸ್‌ಟಿಯನ್ಬು ಟೆಂಡರ್ ನಲ್ಲಿ ತೋರಿಸದ ಹಿನ್ನಲೆಯಲ್ಲಿ ಕಾಮಗಾರಿ ಹಿನ್ನಡೆ ಕಂಡಿದ್ದು ಸತತ ಪ್ರಯತ್ನದ ಬಳಿಕ ಇದೀಗ 64 ಕೋಟಿ ವೆಚ್ಚದಲ್ಲಿ ಕಾಮಗಾರಿ ಆರಂಭವಾಗಲಿದೆ ಎಂದು ಡಾ. ಭರತ್ ಶೆಟ್ಟಿ ವೈ ತಿಳಿಸಿದ್ದಾರೆ.
ಕಳೆದ ಬಾರಿ ಅಂದಾಜು 16 ಕೋಟಿಯ ಕಾಮಗಾರಿ ನಡೆದಿತ್ತು. ಬಳಿಕ ಗುತ್ತಿಗೆದಾರರು ಎಸ್ ಆರ್ ದರ ಹಾಗೂ ಜಿ ಎಸ್ ಟಿ ಯನ್ನು ಟೆಂಡರ್ ನಲ್ಲಿ ತೋರಿಸದ ಕಾರಣ ಭಾರಿ ನಷ್ಟವಾಗುತ್ತದೆ ಎಂದು ಕಾಮಗಾರಿ ನಡೆಸಲು ಹಿಂದೆ ಸರಿದಿದ್ದರು.
ಇದೀಗ ತಾನು ಸತತವಾಗಿ ಈ ಹಿಂದಿನ ಬಿಜೆಪಿ ಸರಕಾರವಿದ್ದಾಗ ಹಣಕಾಸು ಇಲಾಖೆ , ನಗರಾಭಿವೃದ್ಧಿ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದ ಮೇರೆಗೆ ಟೆಂಡರ್ ನಡೆಸುವ ಪ್ರಾಥಮಿಕ ಹೆಜ್ಜೆ ಇರಿಸಲಾಗಿತ್ತು.
ಬದಲಾದ ಸರಕಾರದಲ್ಲಿ ಈಗಿನ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಲ್ಲಿ ಖುದ್ದಾಗಿ ಭೇಟಿ ನೀಡಿ ಮಾಡಿದ ಮನವಿಗೆ ಸ್ಪಂದಿಸಿದ್ದು, ಆರ್ಥಿಕ ಇಲಾಖೆಯು ಕೂಡ ಅನುಮೋದನೆ ನೀಡಿದ್ದು ಟೆಂಡರ್ ನೀಡಲಾಗಿದೆ. ಸರಕಾರವು ವಿಳಂಬ ಮಾಡದೆ ಗುತ್ತಿಗೆದಾರರಿಗೆ ಅನುಮತಿ ಪತ್ರ ನೀಡಿದ ತಕ್ಷಣ ಕಾಮಗಾರಿ ಆರಂಭವಾಗಲಿದೆ ಎಂದು ಭರತ್ ಶೆಟ್ಟಿ ವೈ ಹೇಳಿದ್ದಾರೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…