Featured

ಸುರತ್ಕಲ್: ಮುಕ್ಕ ಆಸ್ಪತ್ರೆಯ ಕ್ಯಾಂಟೀನ್, ಹಾಸ್ಟೆಲ್ ಅಡುಗೆ ಕೋಣೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ ; ಪರಿಶೀಲನೆ – vishwanews24

ಸುರತ್ಕಲ್: ಮುಕ್ಕ ಆಸ್ಪತ್ರೆಯ ಕ್ಯಾಂಟೀನ್, ಹಾಸ್ಟೆಲ್ ಅಡುಗೆ ಕೋಣೆಗೆ ಆಹಾರ ಸುರಕ್ಷತಾ ಅಧಿಕಾರಿಗಳ ದಿಢೀರ್ ಭೇಟಿ ; ಪರಿಶೀಲನೆ

ಸುರತ್ಕಲ್: ಆರೋಗ್ಯ ಸಚಿವ ಯು ಟಿ ಖಾದರ್ ಅವರ ಸೂಚನೆಯ ಮೇರೆಗೆ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ ಸೋಮವಾರ ಮುಕ್ಕ‌ ಶ್ರೀನಿವಾಸ್‌ ವೈದ್ಯಕೀಯ ಕಾಲೇಜು, ಆಸ್ಪತ್ರೆಯ ಕ್ಯಾಂಟೀನ್ ಹಾಗೂ ಹಾಸ್ಟೆಲ್ ಅಡುಗೆ ಕೋಣೆಗೆ ಧಿಡೀರ್ ಭೇಟಿ ನೀಡಿ ಪರಿಶೀಲನೆ‌ ನಡೆಸಿತು.

ಅಧಿಕಾರಿಗಳ ತಂಡವು ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಕ್ಯಾಂಟೀನ್ ಗಳಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯನ್ನು ಪರಿಶೀಲಿಸಿತು.

ಆಹಾರ ಸಿದ್ಧಪಡಿಸಲು ಬಳಸಲಾಗುವ ಸಾಮಗ್ರಿಗಳ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ ಪರಿಶೀಲನೆಗಾಗಿ ಆಹಾರ ಪ್ರಯೋಗ ಶಾಲೆಗಳಿಗೆ ಕಳಿಸಿಕೊಟ್ಟಿತು. ಆಹಾರ ತಯಾರಿಸಲು ಬಳಸುವ ನೀರಿನ ಮಾದರಿಯನ್ನು ಪ್ರಯೋಗ ಶಾಲೆಗೆ ಪರೀಕ್ಷೆಗೆ ಕಳುಹಿಸಿತು. ರೋಗಿಗಳಿಗೆ ನೀಡುವ ಆಹಾರಗಳನ್ನು ಉತ್ತಮ ಗುಣಮಟ್ಟದಿಂದ ಹಾಗೂ ಸುರಕ್ಷಿತವಾಗಿ ತಯಾರಿಸಿ ನೀಡಲು ಕಟ್ಟು ನಿಟ್ಟಿನ ಸೂಚನೆ ನೀಡಿತು.

ಆಹಾರ ತಯಾರಿಸುವ ಹಾಗೂ ಸರಬರಾಜು ಮಾಡುವ ಸಿಬ್ಬಂದಿಯ ವೈಯಕ್ತಿಕ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ನೀಡು ವಂತೆ ಹಾಗೂ ನಿಯಮಿತವಾಗಿ ಅವರ ಆರೋಗ್ಯ ತಪಾಸಣೆ ನಡೆಸಿ ದೃಢೀಕರಣ ಪತ್ರಗಳನ್ನು ಸಲ್ಲಿಸುವಂತೆ ಸೂಚಿಸಿದ ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದ ತಂಡ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆಯ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲು ನಿರ್ದೇಶನ ನೀಡಿತು.

Vishwa News 24

Recent Posts

ಉಡುಪಿ : ನೇರ ಸಂದರ್ಶನ – vishwanews24

ಉಡುಪಿ : ನೇರ ಸಂದರ್ಶನ      ಉಡುಪಿ: ನಗರದ ಕಲ್ಸಂಕ ಅಂಬಾಗಿಲು ರಸ್ತೆಯ ಗುಂಡಿಬೈಲಿನಲ್ಲಿರುವ ಸಾನ್ವಿ ಟ್ರೇರ‍್ಸ್ನಲ್ಲಿ ನವೆಂಬರ್ 13 ರಂದು…

4 hours ago

ಬಂಟ್ವಾಳ: ಕೆಟ್ಟು ನಿಂತಿದ್ದ ಲಾರಿಯಲ್ಲಿ ಅಕ್ರಮ ಕೆಂಪು ಮಣ್ಣು ಸಾಗಾಟ ಪತ್ತೆ ; ಲಾರಿ ವಶಕ್ಕೆ – vishwanews24

ಬಂಟ್ವಾಳ : ರಸ್ತೆಯಲ್ಲೇ ಕೆಟ್ಟು ನಿಂತಿದ್ದ ಲಾರಿಯಲ್ಲಿ ಪರಿಶೀಲನೆ ವೇಳೆ ಅಕ್ರಮ ಮಣ್ಣು ಸಾಗಾಟ ಪತ್ತೆ ; ಲಾರಿ ವಶಕ್ಕೆ…

1 day ago

ಉತ್ತರ ಪ್ರದೇಶ : ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಬೆಂಕಿಗಾಹುತಿ ; ಆರು ಮಂದಿ ಸಜೀವ ದಹನ – vishwanews24

ಉತ್ತರ ಪ್ರದೇಶ : ಡಿವೈಡರ್‌ಗೆ ಡಿಕ್ಕಿ ಹೊಡೆದು ಕಾರು ಬೆಂಕಿಗಾಹುತಿ ; ಆರು ಮಂದಿ ಸಜೀವ ದಹನ ಉತ್ತರ ಪ್ರದೇಶ…

1 day ago

ಹೊಸದಿಲ್ಲಿ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ; ಹೊತ್ತಿ ಉರಿದ ನಾಲ್ಕು ಬೋಗಿಗಳು ; ತಪ್ಪಿದ ಭಾರೀ ಅನಾಹುತ – vishwanews24

ಹೊಸದಿಲ್ಲಿ: ಚಲಿಸುತ್ತಿದ್ದ ಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬೆಂಕಿ ಅವಘಡ ; ಹೊತ್ತಿ ಉರಿದ ನಾಲ್ಕು ಬೋಗಿಗಳು ; ತಪ್ಪಿದ ಭಾರೀ ಅನಾಹುತ…

4 days ago

ಉಡುಪಿ: ನ.29ರಂದು ಸೋದೆ ಪರ್ಯಾಯದ ಬಾಳೆ ಮುಹೂರ್ತ – vishwanews24

ಉಡುಪಿ: ನ.29ರಂದು ಸೋದೆ ಪರ್ಯಾಯದ ಬಾಳೆ ಮುಹೂರ್ತ ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ದ್ವೈವಾರ್ಷಿಕ ಪರ್ಯಾಯ ದಲ್ಲಿ 2028-30ರ ಅವಧಿಯಲ್ಲಿ…

4 days ago

7 ಮಂದಿಯ ಭೀಕರ ಹತ್ಯೆ  : ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಮರ್ಡರ್‌ ಕೇಸ್‌ ಬಗ್ಗೆ ಪೊಲೀಸ್‌ ಆಯುಕ್ತರ ಹೇಳಿಕೆ – vishwanews24

 7 ಮಂದಿಯ ಭೀಕರ ಹತ್ಯೆ  : ಸಿಲಿಕಾನ್ ಸಿಟಿಯನ್ನೇ ಬೆಚ್ಚಿಬೀಳಿಸಿದ ಮರ್ಡರ್‌ ಕೇಸ್‌ ಬಗ್ಗೆ ಪೊಲೀಸ್‌ ಆಯುಕ್ತರ ಹೇಳಿಕೆ ಬೆಂಗಳೂರು:…

4 days ago