Featured

ಸುಳ್ಯ : ಗಾನ ಗಂಧರ್ವ ಖ್ಯಾತಿಯ ಯಕ್ಷಗಾನ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ – VIshwanews24

ಸುಳ್ಯ : ಗಾನ ಗಂಧರ್ವ ಖ್ಯಾತಿಯ ಯಕ್ಷಗಾನ ಹಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ನಿಧನ – VIshwanews24

ಸುಳ್ಯ : ಹಿರಿಯ ಯಕ್ಷಗಾನ ಭಾಗವತ, ಯಕ್ಷಗಾನ ಭಾಗವತಿಕೆಯ ಗಾನ ಗಂಧರ್ವರೆಂದೇ ಪ್ರಸಿದ್ಧರಾದ‌ ಪದ್ಯಾಣ ಗಣಪತಿ ಭಟ್(66) ಅಲ್ಪಕಾಲದ ಅಸೌಖ್ಯದಿಂದ ಕಲ್ಮಡ್ಕದ ತಮ್ಮ ನಿವಾಸದಲ್ಲಿ ಮಂಗಳವಾರ ಬೆಳಗ್ಗೆ ನಿಧನರಾಗಿದ್ದಾರೆ.

ಅದ್ಭುತ ಕಂಠ ಸಿರಿಯ ಭಾಗವತ ಪದ್ಯಾಣ ಗಣಪತಿ ಭಟ್ ತನ್ನ ಹದಿಹರೆಯದ ಆರಂಭದಲ್ಲೇ ಯಕ್ಷಗಾನದ ಕ್ಷೇತ್ರಕ್ಕೆ ಬಂದು ಸುದೀರ್ಘ ನಾಲ್ಕು ದಶಕಗಳಿಂದಲೂ ಹೆಚ್ಚು ಕಾಲ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರು. 1955 ಜ.21ರಂದು ಪದ್ಯಾಣ ತಿರುಮಲೇಶ್ವರ ಭಟ್ ಮತ್ತು ಸಾವಿತ್ರಿ ದಂಪತಿಯ ಮೂರನೆಯ ಮಗನಾಗಿ ಜನಿಸಿದ ಗಣಪತಿ ಭಟ್ಟರ ಔಪಚಾರಿಕ ಶಿಕ್ಷಣ ಹುಟ್ಟೂರಿನಲ್ಲೇ ನಡೆಯಿತು. ಭಾಗವತಿಕೆಯ ಆರಂಭದ ಪಾಠಗಳು ತಮ್ಮ ಅಜ್ಜನ ಸಾಮಿಪ್ಯದಲ್ಲೇ ದೊರೆತವು. ನಂತರ ಮಾಂಬಾಡಿ ನಾರಾಯಣ ಭಾಗವತರಲ್ಲಿ ಎರಡು ವರ್ಷ ಶಾಸ್ತ್ರೀಯವಾಗಿ ಭಾಗವತಿಕೆಯನ್ನು ಕಲಿತರು. ತಮ್ಮ 16 ನೇ ವಯಸ್ಸಿನಲ್ಲಿಯೇ ತೆಂಕುತಿಟ್ಟು ಯಕ್ಷಗಾನ ರಂಗದಲ್ಲಿ ಭಾಗವತಿಕೆ ಆರಂಭಿಸಿದರು.

ಚೌಡೇಶ್ವರಿ ಮೇಳದಲ್ಲಿ ಸಂಗೀತಗಾರರಾಗಿ ಸೇರಿ ಬಳಿಕ ಕುಂಡಾವು ಮೇಳದಲ್ಲಿ ಭಾಗವತರಾಗಿ ಎರಡು ವರ್ಷ ಸೇವೆ ಸಲ್ಲಿಸಿದರು. ಬಳಿಕ ಸುರತ್ಕಲ್, ಮಂಗಳಾದೇವಿ, ಕರ್ನಾಟಕ, ಎಡನೀರು, ಶ್ರೀ ರಾಮಚಂದ್ರಾಪುರ ಮೇಳಗಳಲ್ಲಿ ಸೇವೆ ಸಲ್ಲಿಸಿದರು. ಸುರತ್ಕಲ್ ಶ್ರೀ ಮಹಮ್ಮಾಯಿ ಮೇಳವೊಂದರಲ್ಲೇ ಇಪ್ಪತ್ತಾರು ವರ್ಷಗಳ ಕಾಲ ಅವರು ಭಾಗವತರಾಗಿದ್ದರು.

ಬೆಂಗಳೂರಿನಿಂದ ನಾಪತ್ತೆಯಾಗಿದ್ದ‌ ನಾಲ್ವರು ಮಕ್ಕಳು ಮಂಗಳೂರಿನಲ್ಲಿ ಪತ್ತೆ – Vishwanews24

ಸತಿ ಶೀಲಾವತಿ, ರಾಣಿ ರತ್ನಾವಳಿ, ಕಡುಗಲಿ ಮಾರರಾಮ, ಪಾಪಣ್ಣ ವಿಜಯ ಗುಣಸುಂದರಿ, ಬಪ್ಪನಾಡು ಕ್ಷೇತ್ರ ಮಹಾತ್ಮ ಅನೇಕ ಪ್ರಸಂಗಗಳು ಪದ್ಯಾಣರ ಭಾಗವತಿಕೆಯ ಕಾರಣದಿಂದಲೇ ಅಪಾರ ಯಶಸ್ಸು ಕಂಡಿತ್ತು. ಮುಮ್ಮೇಳದಲ್ಲಿರುವ ಕಲಾವಿದನ ಮನೋಸ್ಥಿತಿ ಸಾಮರ್ಥ್ಯವನ್ನು ಅರ್ಥೈಸಿಕೊಂಡು ಹಾಡಬಲ್ಲ ಸಾಮರ್ಥ್ಯ ಹೊಂದಿದ್ದರು. ನಾಟಿ ಮತ್ತು ಭೈರವಿ ರಾಗಗಳಲ್ಲಿ ಅವರ ಹಿಡಿತ ವಿಶಿಷ್ಟ. ಯಕ್ಷಗಾನದಲ್ಲಿ ಅಪರೂಪವಾದ ಸಿಂಹೇಂದ್ರ ಮಧ್ಯಮ ,ಖಮಾತು , ತಿಲ್ಲಾನ , ವಾಸಂತಿ , ವೃಂದಾವನ ಷಣ್ಮುಖಪ್ರಿಯ , ಚಾರುಕೇಶಿ ಸಂಗೀತ ಪ್ರಯೋಗಗಳು ಅವರದ್ದೇ ಸಾಧನೆ. ಸಂಗೀತದ ಸುಮಾರು ಇಪ್ಪತ್ತು ರಾಗಗಳನ್ನು ಯಕ್ಷಗಾನದಲದಲಿ ಅಳವಡಿಸಿದ್ದಾರೆ.

ಕುವೈತ್, ಮುಂಬೈ , ಆಗ್ರಾ, ಚೆನ್ನೈ ಸೇರಿದಂತೆ ಹಲವಡೆಗಳಲ್ಲಿ ಪ್ರದರ್ಶನ ನೀಡಿದಷ್ಟೇ ಅಲ್ಲದೇ , ಅಲ್ಲಿನ ಅಭಿಮಾನಿಗಳಿಂದ ಮನ್ನಣೆ ಬಿರುದುಗಳನ್ನು ಪಡೆದಿದ್ದಾರೆ. ಸಾವಿರಾರು ಕನ್ನಡ , ತುಳು ಯಕ್ಷಗಾನ ಧ್ವನಿಸುರುಳಿಗಳಿಗೆ ಜೀವ ತುಂಬಿದ್ದಾರೆ

2007 ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳಿಗೆ ಭಟ್ ಪಾತ್ರರಾಗಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು ಮಿತ್ರರು, ಅಭಿಮಾನಿಗಳನ್ನು ಅಗಲಿದ್ದಾರೆ.

ಅ.14ರಿಂದ ನ.14ವರೆಗೆ ‘ಯಕ್ಷ ಮೋಹಿನಿ’ ಕೋಳ್ಯೂರು ರಾಮಚಂದ್ರ ರಾಯರಿಗೆ 90ರ ಸಂಭ್ರಮ – Vishwanews24

Vishwa News 24

Recent Posts

ಉಡುಪಿ : ಯುವತಿ ನಾಪತ್ತೆ -vishwanews24

ಉಡುಪಿ : ಯುವತಿ ನಾಪತ್ತೆ ಉಡುಪಿ : ಉಡುಪಿ ಸವೀಸ್ ಬಸ್ ನಿಲ್ದಾಣದ ಬಳಿ ಇರುವ ಹೊಲಿಗೆ ತರಬೇತಿ ಕೇಂದ್ರದಲ್ಲಿ…

2 hours ago

ಪಡುಬಿದ್ರಿ : ವ್ಯಕ್ತಿ ನಾಪತ್ತೆ -vishwanews24

ಪಡುಬಿದ್ರಿ : ವ್ಯಕ್ತಿ ನಾಪತ್ತೆ ಉಡುಪಿ: ಎಲ್ಲೂರು ಗ್ರಾಮ ಅದಮಾರು ಅಂಚೆ ಅಂಬೇಡ್ಕರ್ ರೋಡ್ ಆಶಿರ್ವಾದ ಹೌಸ್ ನಿವಾಸಿ ಹರ್ಷಲ್…

2 hours ago

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ -vishwanews24

ತುಳು ಭಾಷೆಯ ಮಾನ್ಯತೆ ಕೇವಲ ಉಡುಪಿ-ದ.ಕ. ಜಿಲ್ಲೆಗಳಿಗೆ ಸೀಮಿತಗೊಳಿಸುವುದು ಸರಿಯಲ್ಲ : ಪ್ರಮೋದ್ ಮಧ್ವರಾಜ್ ಉಡುಪಿ: ತುಳು ಭಾಷೆಗೆ ಅಧಿಕೃತ…

3 hours ago

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ -vishwanews24

ಉಡುಪಿ ಜಿಲ್ಲಾಸ್ಪತ್ರೆ ಶೀಘ್ರ ಲೋಕಾರ್ಪಣೆಗೆ ಖಾದರ್ ಗೆ ಉಡುಪಿ ಶಾಸಕರ ಮನವಿ ಉಡುಪಿ: ನೂತನ ಜಿಲ್ಲಾಸ್ಪತ್ರೆಯನ್ನು ಸಾರ್ವಜನಿಕರ ಸೇವೆಗೆ ಶೀಘ್ರ…

4 hours ago

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು -vishwanews24

ದುಬೈಯ ಶಾರ್ಜಾದಲ್ಲಿ ಉಡುಪಿ ಮೂಲದ ವ್ಯಕ್ತಿಯ ಅಮಾನವೀಯ ಕೊಲೆ : ಪತ್ನಿ  , ಪುತ್ರ ನಾಪತ್ತೆ ;  ಪ್ರಕರಣ ದಾಖಲು…

7 hours ago

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ -vishwanews24

ಮಂಗಳೂರು : ಅಕ್ರಮವಾಗಿ ಜಾನುವಾರು ಸಾಗಾಟ: ಓರ್ವ ಬಂಧನ, ಮತ್ತೋರ್ವ ಪರಾರಿ ಮಂಗಳೂರು: ಅಕ್ರಮವಾಗಿ ಹಾಗೂ ಹಿಂಸಾತ್ಮಕ ರೀತಿಯಲ್ಲಿ ಜಾನುವಾರುಗಳನ್ನು…

7 hours ago