ಸುಳ್ಯ: ಮಂಗಳೂರು ಮೂಲದ ವಿವಾಹಿತ ಯುವಕನೋರ್ವ ಪ್ರೇಯಸಿಯೊಂದಿಗೆ ಸುಳ್ಯದ ಗಾಂಧಿನಗರದ ಲಾಡ್ಜ್ ಒಂದರಲ್ಲಿ ಬಂದು ತಂಗಿದ್ದಾರೆಂದು ತಿಳಿದ ಯುವಕನ ಪತ್ನಿ ಡಿ.೧೧ರಂದು ಸಂಜೆ ಸುಳ್ಯಕ್ಕೆ ಬಂದು ಅವರು ತಂಗಿದ್ದ ಲಾಡ್ಜ್ ಬಳಿ ಬಂದು ಬೀದಿರಂಪ ಮಾಡಿದ ಘಟನೆ ವರದಿಯಾಗಿದೆ.
ಲಾಡ್ಜ್ ನಲ್ಲಿದ್ದ ಯುವತಿಯ ಜತೆಗಿದ್ದ ವಿವಾಹಿತ ಯುವಕ ತನ್ನ ಪತ್ನಿ ಲಾಡ್ಜ್‌ನ ರಿಸೆಪ್ಶನ್ ಬಳಿಗೆ ಬಂದು ನಿಂತಿರುವ ವಿಷಯ ತಿಳಿದು ಪ್ರೇಯಸಿಯೊಂದಿಗೆ ಲಾಡ್ಜ್ ನಿಂದ ಹೊರಗೆ ಬಂದಿದ್ದಾರೆ.
ಈ ಜೋಡಿಯನ್ನು ನೋಡಿದ ಆತನ ಹೆಂಡತಿ ರಸ್ತೆಯಲ್ಲಿ ಗಂಡನನ್ನು ಮತ್ತು ಆ ಯುವತಿಯನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದು, ಗಲಾಟೆ ಉಂಟಾಗಿದೆ. ಈ ವೇಳೆ ನೂರಾರು ಜನ ಜಮಾಯಿಸಿದ್ದು, ಕೋಪಗೊಂಡಿದ್ದ ಪತ್ನಿಯನ್ನು ಸಮಾಧಾನಪಡಿಸಲು ಯುವಕ ಎಷ್ಟೇ ಪ್ರಯತ್ನ ಪಟ್ಟರೂ ಆತನಿಗೆ ಸಾಧ್ಯವಾಗಲಿಲ್ಲ.
ಕೊನೆಗೆ ಪತಿ ಹಾಗೂ ಮತ್ತವನ ಪ್ರೇಯಸಿಯನ್ನು ರಸ್ತೆಯಲ್ಲಿ ಎಳೆದಾಡಿ, ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದ್ದಾಳೆ. ಪೊಲೀಸರಿಗೆ ವಿಷಯ ತಿಳಿದು ಅವರು ಬಂದು ಮೂವರನ್ನೂ ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿ ಕಳುಹಿಸಿದ್ದಾರೆ ಎಂದು ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ : ದರ್ಶನ್ ಅರ್ಜಿ ವಿಚಾರಣೆಗೆ ಅರ್ಹವಲ್ಲ: ಮತ್ತೊಮ್ಮೆ ಜಾಮೀನು ತಿರಸ್ಕರಿಸಿದ ಸುಪ್ರೀಂ ನಟ ದರ್ಶನ್ ರೇಣುಕಾ…
ಗೃಹ ಜ್ಯೋತಿ ಪರಿಶೀಲನೆ: ಪ್ರವರ್ಗ ಮಾಹಿತಿ (ಜಾತಿ ಪ್ರಮಾಣಪತ್ರ) ಕಡ್ಡಾಯವಲ್ಲ ಬೆಂಗಳೂರು: ರಾಜ್ಯಾದ್ಯಂತ ಜುಲೈ 1 ರಿಂದ ಆರಂಭಗೊಂಡಿರುವ ಗೃಹ ಜ್ಯೋತಿ…
ಎಸ್‌ಐಆರ್ ಪ್ರಕ್ರಿಯೆಯಲ್ಲಿ ಭಾರೀ ಅಕ್ರಮ : ಸಮಗ್ರ ತನಿಖೆಗೆ ಪ್ರಲ್ಹಾದ ಜೋಶಿ ಆಗ್ರಹ ನವದೆಹಲಿ: ರಾಮನಗರ ಜಿಲ್ಲೆಯಲ್ಲಿ ನಡೆದ ಮತದಾರರ…
ಅಕ್ರಮ ಎಸ್‌ಐಆರ್ ಪ್ರಕ್ರಿಯೆ : 2028ರ ಚುನಾವಣೆ ಗೆಲ್ಲಲು ಬಾಂಗ್ಲಾದೇಶಿಯರ ಸಕ್ರಮಕ್ಕೆ ಕಾಂಗ್ರೆಸ್ ಸಂಚು : ಶೋಭಾ ಕರಂದ್ಲಾಜೆ ಗಂಭೀರ…
ಮೂಲ ನೆಲದಿಂದ ಬೇರ್ಪಡಿಸಿ ಕರಾವಳಿಯ ಮಣ್ಣಿನ ಸಂಸ್ಕೃತಿಯ ಪಾವಿತ್ರ್ಯಕ್ಕೆ ಧಕ್ಕೆ ತರಬೇಡಿ .. ಕರಾವಳಿ ಕಂಬಳವು ತನ್ನದೇ ಆದ ಆಳವಾದ ಸಾಂಪ್ರದಾಯಿಕ…
ಮಂಗಳೂರು:ಸಾಮಾಜಿಕ ಜಾಲತಾಣಗಳಲ್ಲಿ ಸೆಲಿನಾ ಟ್ರಾವೆಲ್ಸ್ ವಿರುದ್ಧ ಹರಿದಾಡಿದ ಕರಪತ್ರ : ಪೊಲೀಸ್ ಇಲಾಖೆ ಸ್ಪಷ್ಟನೆ ಮಂಗಳೂರು: ಖಾಸಗಿ ಸಾರಿಗೆ ಸಂಸ್ಥೆಯಾದ…