Featured

ಸುವೇಂಧು ಸಂಪುಟ ವಿಸ್ತರಣೆ: ಬಂಗಾಳದ ನೂತನ ಸಚಿವರಾಗಿ 35 ಶಾಸಕರಿಂದ ಪ್ರಮಾಣ ಸ್ವೀಕಾರ – vishwanews24

ಸುವೇಂಧು ಸಂಪುಟ ವಿಸ್ತರಣೆ: ಬಂಗಾಳದ ನೂತನ ಸಚಿವರಾಗಿ 35 ಶಾಸಕರಿಂದ ಪ್ರಮಾಣ ಸ್ವೀಕಾರ

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅವರು ಸೋಮವಾರ (ಇಂದು) ತಮ್ಮ ಸಚಿವ ಸಂಪುಟ ವಿಸ್ತರಣೆ ಮಾಡಿದ್ದು, 35 ಮಂದಿ ಬಿಜೆಪಿ ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಸುವೇಂಧು ಅಧಿಕಾರಿ ಅವರು ಮೇ 9 ರಂದು ಬಂಗಾಳ ಸಿಎಂ ಆಗಿ ಪ್ರಮಾಣ ಸ್ವೀಕರಿಸಿದ ಮೂರು ವಾರಗಳ ನಂತರ ಸಂಪುಟ ವಿಸ್ತರಣೆಯಾಗಿದೆ. ಕೋಲ್ಕತ್ತಾದ ಲೋಕಭವನದಲ್ಲಿ ಪ್ರಮಾಣ ಸ್ವೀಕಾರ ಸಮಾರಂಭ ನಡೆದಿದ್ದು, ರಾಜ್ಯಪಾಲ ಆರ್.ಎನ್ ರವಿ ಅವರು ನೂತನ ಸಚಿವರಿಗೆ ಪ್ರಮಾಣ ವಚನ ಬೋಧಿಸಿದ್ದಾರೆ. ಭಾರತದ ಸಂವಿಧಾನದ ವಿಧಿ 164(1ಎ) ಪ್ರಕಾರ ಪಶ್ಚಿಮ ಬಂಗಾಳವು ಮುಖ್ಯಮಂತ್ರಿ ಸೇರಿದಂತೆ ಗರಿಷ್ಠ 44 ಸಚಿವರನ್ನ ಹೊಂದಬಹುದಾಗಿದೆ.

ಮೊದಲ ಹಂತದಲ್ಲಿ ಸುವೇಂದು ಅಧಿಕಾರಿ ಅವರೊಟ್ಟಿಗೆ ಬಿಜೆಪಿ ಶಾಸಕರಾದ ದಿಲೀಪ್ ಘೋಷ್, ಅಗ್ನಿಮಿತ್ರ ಪಾಲ್, ನಿಸಿತ್ ಪ್ರಾಮಾಣಿಕ್, ಅಶೋಕ್ ಕೀರ್ತಾನಿಯಾ ಮತ್ತು ಕ್ಷುದಿರಾಮ್ ತುಡು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದರು. ಇಂದು 2ನೇ ಹಂತದಲ್ಲಿ 35 ಶಾಸಕರು ಪ್ರಮಾಣ ಸ್ವೀಕರಿಸಿದ್ದಾರೆ.

35 ಶಾಸಕರಲ್ಲಿ ಅರ್ಜುನ್ ಸಿಂಗ್, ತಪಸ್ ರಾಯ್, ಸಾರದ್ವತ್ ಮುಖರ್ಜಿ, ಜಗನ್ನಾಥ್ ಚಟ್ಟೋಪಾಧ್ಯಾಯ ಮತ್ತು ಶಂಕರ್ ಘೋಷ್ ಸೇರಿದ್ದಾರೆ. ಜೊತೆಗೆ ಸ್ವಪನ್ ದಾಸ್‌ಗುಪ್ತಾ, ದೂಧ್ ಕುಮಾರ್ ಮೊಂಡಲ್, ದೀಪಕ್ ಬರ್ಮನ್, ಮನೋಜ್ ಒರಾನ್ ಮತ್ತು ಗೌರಿ ಶಂಕರ್ ಘೋಷ್ ಕೂಡ ನೂತನ ಸಚಿವ ಸಂಪುಟಕ್ಕೆ ಸೇರ್ಪಡೆಯಾಗಿದ್ದಾರೆ.

ಬಿಜೆಪಿ ಶಾಸಕರಾದ ರಾಜೇಶ್ ಮಹಾತ, ಇಂದ್ರಾನಿಲ್ ಖಾನ್ ಮತ್ತು ಮಾಲತಿ ರಾವ ರಾಯ್ ಅವರು ಸುವೇಂಧು ಸರ್ಕಾರದಲ್ಲಿ ರಾಜ್ಯ ಸಚಿವರಾಗಿ (ಸ್ವತಂತ್ರ ಉಸ್ತುವಾರಿ) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಜೊತೆಗೆ ಸಂತಾನು ಪ್ರಮಾಣಿಕ್, ಪೂರ್ಣಿಮಾ ಚಕ್ರವರ್ತಿ, ಉಮೇಶ್ ರೈ, ಜೋಯೆಲ್ ಮುರ್ಮು, ಅಶೋಕ್ ದಿಂಡಾ, ಆನಂದಮೋಯ್ ಬರ್ಮನ್, ಕೌಶಿಕ್ ಚೌಧರಿ, ಗಾರ್ಗಿ ದಾಸ್ ಘೋಷ್, ಭಾಸ್ಕರ್ ಭಟ್ಟಾಚಾರ್ಯ, ದಿಬಾಕರ್ ಘರಾಮಿ ಮತ್ತು ಸುಮನಾ ಸರ್ಕಾರ್ ರಾಜ್ಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಮೂಲಕ ಒಟ್ಟು ಬಲ 41ಕ್ಕೆ ಏರಿಕೆಯಾಗಿದೆ.

Vishwa News 24

Recent Posts

ಉಡುಪಿ: ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ಉಪ ಮುಖ್ಯಮಂತ್ರಿ, ಐವನ್ ಗೆ ಸಚಿವ ಸ್ಥಾನ ನೀಡಲು ಕಥೊಲಿಕ್ ಸಭಾ ಆಗ್ರಹ – vishwanews24

ಉಡುಪಿ: ಡಿಕೆಶಿ ಸಂಪುಟದಲ್ಲಿ ಜಾರ್ಜ್ ಗೆ ಉಪ ಮುಖ್ಯಮಂತ್ರಿ, ಐವನ್ ಗೆ ಸಚಿವ ಸ್ಥಾನ ನೀಡಲು ಕಥೊಲಿಕ್ ಸಭಾ ಆಗ್ರಹ…

2 hours ago

ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ – vishwanews24

ಮಲೇಷ್ಯಾದಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ಬಳಕೆ ನಿಷೇಧ.. ನಿಯಮ ಉಲ್ಲಂಘಸಿದ್ರೆ 23.95 ಕೋಟಿ ರೂ. ದಂಡ ಕೌಲಾಲಂಪುರ್: 16…

2 hours ago

ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು – vishwanews24

ಬೆಂಗಳೂರು – ಮಂಗಳೂರು ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರ ರದ್ದು ಮಂಗಳೂರು : ಜೂನ್ 3ರಂದು ನಿಗದಿಯಾಗಿದ್ದ ಬಹು…

4 hours ago

ಕಾಪು: ರಸ್ತೆ ಬದಿಯ ಮೈಲುಗಲ್ಲು ಹಾಗೂ ಸ್ಕೂಟರ್‌ಗೆ ಕಾರು ಢಿಕ್ಕಿ: ಚಾಲಕನಿಗೆ ಗಾಯ – vishwanews24

ಕಾಪು: ರಸ್ತೆ ಬದಿಯ ಮೈಲುಗಲ್ಲು ಹಾಗೂ ಸ್ಕೂಟರ್‌ಗೆ ಕಾರು ಢಿಕ್ಕಿ: ಚಾಲಕನಿಗೆ ಗಾಯ ಕಾಪು : ಕಾರೊಂದು ರಸ್ತೆ ಬದಿಯ…

4 hours ago

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 42 ರೂ. ಏರಿಕೆ  – vishwanews24

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ 42 ರೂ. ಏರಿಕೆ  ನವದೆಹಲಿ : ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆ ದೇಶದ…

4 hours ago

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ – vishwanews24

ಮೃತ ಮಹಿಳೆಯರ ಬೆತ್ತಲೆ ಫೋಟೋ ತೆಗೆದು ವಿಕೃತಿ : ವರದಿ ಕೇಳಿದ ರಾಜ್ಯ ಮಹಿಳಾ ಆಯೋಗ ಬೆಂಗಳೂರು: ಬೀದರ್‌ನ ಬ್ರಿಮ್ಸ್ ಆಸ್ಪತ್ರೆಯಲ್ಲಿ…

2 days ago