ಮೈಸೂರು: ನಾನು ಸದ್ಯಕ್ಕೆ ಪ್ರಜ್ವಲ್ ಭೇಟಿಗೆ ಹೋಗಲ್ಲ. ನಾನು ಭೇಟಿಗೆ ಹೋದರೆ ರೇವಣ್ಣ ಏನೋ ಹೇಳಿಕೋಟ್ಟ ಅಂತಾ ಹೇಳುತ್ತಾರೆ. ಹೀಗಾಗಿ ನಾನು ಹೋಗಲ್ಲ ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿ, ನಮಗೆ ಸದ್ಯಕ್ಕೆ ದೇವರು ಬಿಟ್ಟರೆ ಇನ್ಯಾರು ಎಂದು ಮಾತು ಆರಂಭಿಸಿದ ರೇವಣ್ಣ, ಸೋಮವಾರ ನನ್ನ ಪತ್ನಿ ಹೋಗಿದ್ದಾರೆ, ಮಗ ಅಲ್ವ ಹೀಗಾಗಿ ಹೋಗಿದ್ದಾರೆ ಅಷ್ಟೇ. ತಾಯಿ-ಮಗ ಏನು ಮಾತಾಡಿದ್ದಾರೆ ನನಗೆ ಗೊತ್ತಿಲ್ಲ, ಕೇಳಲೂ ಹೋಗಿಲ್ಲ ಎಂದರು.
ಸೂರಜ್ ರೇವಣ್ಣ ಮಹಾನ್ ದೈವ ಭಕ್ತ. ಅವನು ಬಹಳ ಬೇಗ ಇದರಿಂದ ಹೊರಬರುತ್ತಾನೆ ಅನ್ನೋ ನಂಬಿಕೆ ಇದೆ. ಉಳಿದ ಯಾವ ವಿಚಾರಗಳ ಬಗ್ಗೆಯೂ ನಾನು ಮಾತನಾಡಲ್ಲ. ಎಲ್ಲವೂ ನ್ಯಾಯಾಲಯದ ಮುಂದೆ ಇವೆ. ಎಲ್ಲವೂ ಮುಗಿಯಲಿ, ಆಮೇಲೆ ಎಲ್ಲವನ್ನೂ ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ ಎಂದು ರೇವಣ್ಣ ತಿಳಿಸಿದರು.
ಎಂಥೆಂತವರಿಗೋ ಕಷ್ಟ ಬರುತ್ತದೆ, ಅದ್ರಲ್ಲಿ ನಮ್ಮದು ಏನಿದೆ. ದೇವೇಗೌಡರು ಒಂದು ತಿಂಗಳಿನಿಂದ ಸಹಜವಾಗಿ ನೋವಿನಲ್ಲೇ ಇದ್ದಾರೆ. ಎಲ್ಲದಕ್ಕೂ ಕಾಲದಲ್ಲಿ ಉತ್ತರ ಸಿಗುತ್ತದೆ. ನಾನು ಯಾವತ್ತೂ ಯಾವುದಕ್ಕೂ ಎದೆಗುಂದುವುದಿಲ್ಲ. 30 ವರ್ಷದಿಂದ ರಾಜಕಾರಣ ಮಾಡಿದ್ದೇನೆ. ಇಂಥವನೆಲ್ಲ ಬಹಳ ನೋಡಿದ್ದೇನೆ ಎಂದರು.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…