Featured

ಸೆ. 07 ರಂದು ಭಾರತದಾದ್ಯಂತ ಚಂದ್ರಗ್ರಹಣ ಗೋಚರ : ಯಾವ ರಾಶಿಗೆ ಶುಭ, ಅಶುಭ? vishwanews24

ಸೆ. 07  ರಂದು ಭಾರತದಾದ್ಯಂತ ಚಂದ್ರ ಗ್ರಹಣ ಗೋಚರ : ಯಾವ ರಾಶಿಗೆ ಶುಭ, ಅಶುಭ?

ಬೆಂಗಳೂರು: ಸುದೀರ್ಘ ಅವಧಿಯ ಅಪರೂಪದ ಚಂದ್ರಗ್ರಹಣ ಭಾರತದಾದ್ಯಂತ ಗೋಚರಿಸಲಿದೆ. ಸೆ.7 ಮತ್ತು 8 ರಂದು ಚಂದ್ರಗ್ರಹಣ ಸಂಭವಿಸಲಿದೆ. ವಿಜ್ಞಾನಿಗಳು ಹಾಗೂ ಜ್ಯೋತಿಷ್ಯರು ಈ ಗ್ರಹಣದ ಬಗ್ಗೆ ಹೇಳೋದೇನು?

ಸೆ.7 ಮತ್ತು 8 ರಂದು ಗ್ರಹಣ ಸಂಭವಿಸಲಿದೆ. ಸೆ.7ರ ರಾತ್ರಿ 9:57ರ ರಾತ್ರಿ ಸ್ಪರ್ಶಕಾಲ ಹಾಗೂ ಸೆ.8ರ ಮಧ್ಯರಾತ್ರಿ 1:26ಕ್ಕೆ ಮೋಕ್ಷಕಾಲ ಸಂಭವಿಸಲಿದೆ. ಚಂದ್ರಗ್ರಹಣದ ಪೂರ್ಣ ಪ್ರಭಾವದ ಆರಂಭವು ಮಧ್ಯರಾತ್ರಿ 12:28 ರಿಂದ 1:56 ರ ವರೆಗೆ ಇರಲಿದೆ. ಸುದೀರ್ಘ ಅವಧಿ ಅಂದರೆ ಮೂರು ಗಂಟೆಗಳ ಕಾಲ ಸಂಭವಿಸಲಿದೆ. ಭಾರತದಲ್ಲಿ ಎಲ್ಲೆಡೆ ಗ್ರಹಣ ಗೋಚರವಾಗಲಿದೆ. ರಕ್ತವರ್ಣದಲ್ಲಿ ಚಂದಿರ ಗೋಚರಿಸಲಿದ್ದಾನೆ.

ಇದು ಪೂರ್ಣ ಚಂದ್ರಗ್ರಹಣ. ಇಡೀ ಚಂದ್ರ ಭೂಮಿಯ ದಟ್ಟವಾದ ನೆರಳನ್ನು ಪ್ರವೇಶಿಸುತ್ತದೆ. ಇದೊಂದು ಅಪರೂಪದ ವಿದ್ಯಮಾನ. ಖಗೋಳ ವಿಸ್ಮಯ ಎಂದು ನೆಹರೂ ತಾರಾಲಯದ ನಿರ್ದೇಶಕ ಗುರುಪ್ರಸಾದ್‌ ತಿಳಿಸಿದ್ದಾರೆ.

ಚಂದ್ರಗ್ರಹಣ ಅಂದರೆ ಸಾಮಾನ್ಯವಾಗಿ ಕೆಡುಕು ಎನ್ನುವ ಭಾವನೆಯೇ ಹೆಚ್ಚು. ರಾಜಕೀಯ ವಿಪ್ಲವ ಪ್ರಾಕೃತಿಕ ಅವಘಡ ಸಂಭವಿಸುತ್ತದೆ. ಸಂಬಂಧಗಳ ಮಧ್ಯೆಯೂ ಚಂದ್ರಗ್ರಹಣ ಬಿರುಕು ಮೂಡಿಸಬಹುದು. ಚಂದ್ರಗ್ರಹಣ 12 ರಾಶಿಯ ಮೇಲೂ ಪ್ರಭಾವ ಬೀರಲಿದೆ. ಕೆಲ ರಾಶಿಗೆ ಅದೃಷ್ಟ ಕೆಲ ರಾಶಿಗೆ ಸಂಕಷ್ಟ ಹಾಗೂ ಕೆಲ ರಾಶಿಗೆ ಮಿಶ್ರಫಲವನ್ನು ಈ ಗ್ರಹಣ ತರಲಿದೆ ಎನ್ನುತ್ತಾರೆ ಜ್ಯೋತಿಷಿಗಳು.

ಯಾವ ರಾಶಿಗೆ ಏನು ಫಲ?

ಶುಭಫಲ: ಧನು, ಕನ್ಯಾ, ಮೇಷ, ವೃಷಭ

ಮಿಶ್ರಫಲ: ಮಕರ, ಸಿಂಹ, ಮಿಥುನ, ತುಲಾ

ಅಶುಭ ಫಲ: ಕುಂಭ, ವೃಶ್ಚಿಕ, ಕರ್ಕ, ಮೀನ

ರಕ್ತ ಚಂದ್ರಗ್ರಹಣ ಆರಂಭ ಯಾವಾಗ?

ಸ್ಪರ್ಶಕಾಲ: 8.58 ನಿಮಿಷ
ಮಧ್ಯಮ: 9.57 (ಚಂದ್ರನ ಗೋಲದ ಒಂದು ಪಾರ್ಶ್ವ ನಿಧಾನವಾಗಿ ಬಣ್ಣ ಬದಲಾಯಿಸುವ ಪ್ರಕ್ರಿಯೆ ಆರಂಭ
ರಾತ್ರಿ 11 ಗಂಟೆಯಿಂದ 12:22 ನಿಮಿಷದ ವರೆಗೆ ಸಂಪೂರ್ಣ ಚಂದ್ರಗ್ರಹಣದ ದೃಶ್ಯ ಗೋಚರವಾಗಲಿದೆ.

ಗ್ರಹಣ ಮೋಕ್ಷ

ಸೆಪ್ಟೆಂಬರ್ 8 ರಂದು ಮಧ್ಯರಾತ್ರಿ 2:25 ನಿಮಿಷಕ್ಕೆ
5 ಗಂಟೆ 27 ನಿಮಿಷಗಳ ಕಾಲ ಸುದೀರ್ಘ ಗ್ರಹಣ ಇರಲಿದೆ. ಬರಿ ಕಣ್ಣಿನಿಂದಲೇ ಈ ವಿದ್ಯಮಾನ ನೋಡಬಹುದು. ಭಾರತದಾದ್ಯಂತ ಚಂದ್ರಗ್ರಹಣ ಗೋಚರಿಸಲಿದೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago