Featured

ಸೇನಾ ಹೆಲಿಕಾಪ್ಟರ್​ ಪತನ ;​ ಬಿಪಿನ್ ರಾವತ್ ಪತ್ನಿ ದುರ್ಮರಣ; ರಾವತ್ ಸ್ಥಿತಿ ಗಂಭೀರ – Vishwanews24

ಸೇನಾ ಹೆಲಿಕಾಪ್ಟರ್​ ಪತನ ;​ ಬಿಪಿನ್ ರಾವತ್ ಪತ್ನಿ ದುರ್ಮರಣ; ರಾವತ್ ಸ್ಥಿತಿ ಗಂಭೀರ – Vishwanews24

ಇಂದು ತಮಿಳುನಾಡಿನ ಕುನೂರ್​ ಬಳಿ Mi-17V5 ಸೇನಾ ಹೆಲಿಕಾಪ್ಟರ್​ ಭೀಕರ ಅಪಘಾತಕ್ಕೀಡಾಗಿದ್ದು, ಘಟನೆಯಲ್ಲಿ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​ ಪತ್ನಿ ಮಧುಲಿಕಾ ರಾವತ್ ಸೇರಿ 11 ಮಂದಿ ದುರ್ಮರಣಕ್ಕೀಡಾಗಿದ್ದಾರೆ. ಇನ್ನು ಬಿಪಿನ್ ರಾವತ್ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಇದರಲ್ಲಿ 14 ಜನ ಇದ್ದರು ಎಂದು ಮೂಲಗಳು ತಿಳಿಸಿವೆ. ಅದರಲ್ಲೀಗ 11 ಮಂದಿಯ ಮೃತದೇಹ ಪತ್ತೆಯಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ.

ಅದರಲ್ಲೂ ಈಗ ಸಿಡಿಎಸ್​ ಜನರಲ್​ ಬಿಪಿನ್​ ರಾವತ್​​ರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಹೊರಬೀಳಬೇಕಿದೆ. ಸದ್ಯ ಮೂಲಗಳ ಪ್ರಕಾರ ಬಿಪಿನ್​ ರಾವತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ಇನ್ನು ಸೇನಾ ವಿಮಾನ ಪತನವಾಗಿದ್ದು ನೀಲಗಿರಿ ಬೆಟ್ಟ ಪ್ರದೇಶದಲ್ಲಿ ಆಗಿದ್ದರಿಂದ ರಕ್ಷಣಾ ಕಾರ್ಯಾಚರಣೆಯೂ ತುಸು ತೊಡಕಾಗಿದೆ. ಸ್ಥಳೀಯರ ಸಹಾಯದಿಂದ ಸೇನಾ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಮತ್ತು ಮೃತರನ್ನು ಸ್ಥಳೀಯ ಮಿಲಿಟರಿ ಆಸ್ಪತ್ರೆಗೆ ಕಳಿಸಲಾಗಿದೆ. ತಮಿಳುನಾಡು ಸರ್ಕಾರದ ಉನ್ನತ ಅಧಿಕಾರಿಗಳು, ರಕ್ಷಣಾ ಸಿಬ್ಬಂದಿ ಕೂಡ ಅಪಘಾತವಾದ ಸ್ಥಳಕ್ಕೆ ಧಾವಿಸಿದ್ದಾರೆ.  ಅಂದಹಾಗೆ ಈ ಹೆಲಿಕಾಪ್ಟರ್​ ದೆಹಲಿಯಿಂದ ಸುಲುರ್​ಗೆ ಹೊರಟಿತ್ತು ಎಂದು ಮಾಹಿತಿ ಲಭ್ಯವಾಗಿದೆ.

Vishwa News 24

Recent Posts

ಪಾಸ್‌ಪೋರ್ಟ್ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಜು.1 ರಿಂದ ಹೊಸ ದರ ಜಾರಿಗೆ – vishwanews24

ಪಾಸ್‌ಪೋರ್ಟ್ ಶುಲ್ಕ ಹೆಚ್ಚಿಸಿದ ಕೇಂದ್ರ ಸರ್ಕಾರ; ಜು.1 ರಿಂದ ಹೊಸ ದರ ಜಾರಿಗೆ ನವದೆಹಲಿ: 14 ವರ್ಷಗಳಲ್ಲಿ ಇದೇ ಮೊದಲ…

2 minutes ago

ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; ಪ್ರಯಾಣಿಕರು ಅಪಾಯದಿಂದ ಪಾರು – vishwanews24

ಬೆಳ್ತಂಗಡಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ; ಪ್ರಯಾಣಿಕರು ಅಪಾಯದಿಂದ ಪಾರು ಬೆಳ್ತಂಗಡಿ: ತಾಲೂಕಿನ ಸುಲ್ಕೇರಿ ಗ್ರಾಮದಲ್ಲಿ ಶುಕ್ರವಾರ ಬೆಳಗ್ಗೆ ಸಂಭವಿಸಿದ ಭೀಕರ…

12 minutes ago

ನನ್ನ ಮಗಳು ತಪ್ಪಿತಸ್ಥೆ ಎಂದು ಸಾಬೀತಾದರೆ ಅವಳನ್ನು ಗಲ್ಲಿಗೇರಿಸಿ : ಸಿಯಾ ಪೋಷಕರ ಆಕ್ರೋಶ – vishwanews24

ನನ್ನ ಮಗಳು ತಪ್ಪಿತಸ್ಥೆ ಎಂದು ಸಾಬೀತಾದರೆ ಅವಳನ್ನು ಗಲ್ಲಿಗೇರಿಸಿ : ಸಿಯಾ ಪೋಷಕರ ಆಕ್ರೋಶ ಮುಂಬೈ: ನನ್ನ ಮಗಳು ತಪ್ಪು…

22 minutes ago

ದರ್ಶನ್‌ ಪುತ್ರನಿದ್ದ ಕಾರು ಅಪಘಾತ : ವಿಜಯಲಕ್ಷ್ಮಿ ಸ್ಪಷ್ಟನೆ – vishwanews24

ದರ್ಶನ್‌ ಪುತ್ರನಿದ್ದ ಕಾರು ಅಪಘಾತ : ವಿನೀಶ್‌ ವಾಹನ ಚಲಾಯಿಸಿಲ್ಲ: ವಿಜಯಲಕ್ಷ್ಮಿ ಸ್ಪಷ್ಟನೆ ಬೆಂಗಳೂರು: ನಟ ದರ್ಶನ್ ಅವರ ಪುತ್ರ…

1 hour ago

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ – vishwanews24

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಧರ್ಮಸ್ಥಳ: ದೆಹಲಿ ಪ್ರವಾಸ ಮುಗಿಸಿ ನೇರವಾಗಿ ಧರ್ಮಸ್ಥಳಕ್ಕೆ…

1 hour ago

ಆಗುಂಬೆ ಘಾಟಿ : ಸೆ. 30 ರವರೆಗೆ ಭಾರಿ ವಾಹನಗಳ ಸಂಚಾರ ನಿಷೇಧ – vishwanews24

ಆಗುಂಬೆ ಘಾಟಿ : ಭಾರಿ ವಾಹನಗಳ ಸಂಚಾರ ನಿಷೇಧ   ಉಡುಪಿ  : ರಾಷ್ಟ್ರೀಯ  ಹೆದ್ದಾರಿ 169ಎ ರ ತೀರ್ಥಹಳ್ಳಿ –…

1 hour ago