Featured

ಸೈನಿಕರಿಗೆ ಅವಕಾಶ ಕೊಟ್ಟ ಯಜಮಾನ – ಇಬ್ಬರು ಯೋಧರಿಗೆ ವಿಲನ್ ರೋಲ್!

ಬೆಂಗಳೂರು: ಏನ್ನನಾದರೂ ಸಾಧಿಸಬೇಕೆಂಬ ನಿಜವಾದ ಹಸಿವು ಹೊಂದಿರುವವರಿಗೆ ಸದಾ ಸ್ಫೂರ್ತಿಯಾಗುತ್ತಲೇ ಸಾಥ್ ನೀಡುವ ವ್ಯಕ್ತಿತ್ವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು. ಹೊಸಬರಿಗೆ, ಹೊಸಬರ ಚಿತ್ರಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿರೋ ಅವರು ಕಷ್ಟದಲ್ಲಿರುವ ಕಲಾವಿದರಿಗೆ ನೆರವಾಗುವ ಮೂಲಕವೂ ಎಲ್ಲರ ಪ್ರೀತಿ ಪಾತ್ರರಾಗಿದ್ದಾರೆ. ಇದೀಗ ದರ್ಶನ್ ಅವರು ಯಜಮಾನ ಚಿತ್ರದಲ್ಲಿ ಮಾಜಿ ಸೈನಿಕರಿಬ್ಬರಿಗೆ ಅವಕಾಶ ಕಲ್ಪಿಸೋ ಮೂಲಕ ಸುದ್ದಿಯಲ್ಲಿದ್ದಾರೆ.

ಯಜಮಾನ ಚಿತ್ರದ ಎರಡು ವಿಲನ್ ಕ್ಯಾರೆಕ್ಟರುಗಳನ್ನು ಮಾಜಿ ಯೋಧರಿಬ್ಬರು ನಿರ್ವಹಿಸಿದ್ದಾರಂತೆ. ಮಾಜಿ ಯೋಧರಾದ ಅರುಣ್ ಮತ್ತು ಕಾಮರಾಜ್ ದರ್ಶನ್ ಅವರ ಕಾಳಜಿಯಿಂದಲೇ ಯಜಮಾನ ಚಿತ್ರದ ಭಾಗವಾಗಿದ್ದಾರೆ. ಇದರಲ್ಲಿ ಕಾಮರಾಜ್ ತಮಿಳುನಾಡಿನವರು. ಶಂಕರ್ ನಿರ್ದೇಶನದ ಐ ಚಿತ್ರದಲ್ಲಿ ಚಿಯಾನ್ ವಿಕ್ರಮ್ ಎದುರು ಈತ ವಿಲನ್ ಆಗಿ ಅಬ್ಬರಿಸಿದ್ದರು. ನೆಗೆಟಿವ್ ರೋಲಿಗೆ ಬೇಕಾದ ಕಟ್ಟುಮಸ್ತಾದ ದೇಹಸಿರಿ ಹೊಂದಿರೋ ಕಾಮರಾಜ್ ಈಗ ತಮಿಳುನಾಡಿನಲ್ಲಿ ಒಂದಷ್ಟು ಅವಕಾಶಗಳನ್ನು ಹೊಂದಿದ್ದಾರೆ.

ಯಜಮಾನ ಚಿತ್ರದ ವಿಲನ್ ಪಾತ್ರವೊಂದಕ್ಕೆ ನಿರ್ದೇಶಕರು ಕಾಮರಾಜ್ ಅವರನ್ನು ಸಜೆಸ್ಟ್ ಮಾಡಿದಾಗ ಆತ ಮಾಜಿ ಸೈನಿಕನೆಂಬ ಕಾರಣದಿಂದಲೇ ದರ್ಶನ್ ಖುಷಿಯಿಂದ ಒಪ್ಪಿಕೊಂಡಿದ್ದರಂತೆ. ಇನ್ನೋರ್ವ ಅರುಣ್ ಕೂಡಾ ಭಾರತ ಸೇನೆಯ ಹೆಮ್ಮೆಯ ಯೋಧರಾಗಿದ್ದವರು. ಸೇನೆಯ ಪ್ರಮುಖ ಕಾರ್ಯಚರಣೆಗಳಲ್ಲಿ ಕೆಚ್ಚೆದೆಯಿಂದ ತೊಡಗಿಸಿಕೊಂಡಿದ್ದ ಅರುಣ್ ನಂತರ ದೇಹದಾರ್ಢ್ಯದತ್ತ ಗಮನಹರಿಸಿ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ನಟನಾಗಿದ್ದಾರೆ. ಇವರೂ ಕೂಡಾ ಕನ್ನಡ ಚಿತ್ರದಲ್ಲಿ ನಟಿಸುವಂತಾದದ್ದು ದರ್ಶನ್ ಅವರ ಪ್ರೀತಿಯಿಂದಲೇ.

ಈ ಇಬ್ಬರೂ ಯೋಧರ ಪಾತ್ರಗಳು ಯಜಮಾನ ಚಿತ್ರದ ಪ್ರಮುಖ ಆಕರ್ಷಣೆಯಂತೆ ಮೂಡಿ ಬಂದಿವೆಯಂತೆ. ಯಜಮಾನ ಚಿತ್ರದ ನಂತರ ಇವರಿಬ್ಬರೂ ಕನ್ನಡ ಚಿತ್ರರಂಗದಲ್ಲಿ ಖಳನಟರಾಗಿ ನೆಲೆ ನಿಲ್ಲುವ ಭರವಸೆ ಚಿತ್ರ ತಂಡದ್ದು.

Vishwa News 24

Recent Posts

ಬೈಕಂಪಾಡಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ – vishwanews24

ಬೈಕಂಪಾಡಿಯಲ್ಲಿ ದರೋಡೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ ಸುರತ್ಕಲ್: ಬೈಕಂಪಾಡಿಯಲ್ಲಿ ನಡೆದಿದ್ದ ಕೇರಳದ ಜ್ಯುವೆಲ್ಲರಿ ಉದ್ಯಮಿ ವಿಕಾಸ್ ಅವರ…

3 hours ago

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  – vishwanews24

ಕರ್ನಾಟಕ ಬಂದ್‌ಗೆ ಉಡುಪಿಯಲ್ಲಿ ನೀರಸ ಪ್ರತಿಕ್ರಿಯೆ  ಉಡುಪಿ : ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಸಮಿತಿ…

3 hours ago

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ – vishwanews24

ವಿಧಾನ ಪರಿಷತ್ ಸಭಾ​​ ನಾಯಕರಾಗಿ ಯತೀಂದ್ರ ಸಿದ್ದರಾಮಯ್ಯ ಬೆಂಗಳೂರು: ವಿಧಾನಮಂಡಲದ ಮುಂಗಾರು ಅಧಿವೇಶನ ಇಂದಿನಿಂದ ಪ್ರಾರಂಭವಾಗಿದ್ದು, ವಿಧಾನ ಪರಿಷತ್​​ ಕಲಾಪ…

4 hours ago

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು – vishwanews24

ಬೆಂಗಳೂರು: ಸ್ಕೂಟರ್ ಸ್ಕಿಡ್ ಆಗಿ ಲಾರಿಗೆ ಡಿಕ್ಕಿ; ಮಹಿಳೆ ಸಾವು ಬೆಂಗಳೂರು : ಸಿಲಿಕಾನ್ ಸಿಟಿಯ ಎಲೆಕ್ಟ್ರಾನಿಕ್ ಸಿಟಿಯ ಜನನಿಬಿಡ…

4 hours ago

ಹಿಂದೂ ಸಂಘಟನೆಗಳ ಮುಖಂಡರಿಗೆ ಜಿಲ್ಲೆ ಪ್ರವೇಶ ನಿಷೇಧ: ಉಡುಪಿ ಜಿಲ್ಲಾ ವಿಹಿಂಪ–ಬಜರಂಗದಳ ತೀವ್ರ ಖಂಡನೆ – vishwanews24

ಹಿಂದೂ ಸಂಘಟನೆಗಳ ಮುಖಂಡರಿಗೆ ಉಡುಪಿ ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದು ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿ : ದಿನೇಶ್ ಮೆಂಡನ್ ಆರೋಪ…

5 hours ago

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರ ಪ್ರವೇಶ ನಿರ್ಬಂಧ: ವಿಹಿಂಪ ಖಂಡನೆ – vishwanews24

ಉಡುಪಿ ಜಿಲ್ಲೆಗೆ ಹಿಂದೂ ಸಂಘಟನೆಗಳ ಮುಖಂಡರನ್ನು ನಿರ್ಬಂಧಿಸಿರುವುದು ಖಂಡನೀಯ : ಸುನಿಲ್ ಕೆ.ಆರ್ ಉಡುಪಿ: ಕಾಪು ಪ್ರಖಂಡದ ಬಜರಂಗದಳದ ವತಿಯಿಂದ…

5 hours ago