Featured

ಸೊರಕೆಗೆ ಸತ್ಯಾದರ್ಶನ ಇವತ್ತು ನಾನು ಮಾಡುತ್ತೇನೆ‌ ಶಾಸಕ ಗುರ್ಮೆ ಸುರೇಶ್ ಶೆಟ್ಟಿ.vishwanews24

ಸೊರಕೆಗೆ ಸತ್ಯಾದರ್ಶನ ಇವತ್ತು ನಾನು ಮಾಡುತ್ತೇನೆ‌ ಶಾಸಕ ಗುರ್ಮೆ ಸುರೇಶ್ ಶೆಟ್ಟಿ.vishwanews24

ಎಲ್ಲೂರು,ನಂದಿಕೂರು,ಕಾಪು ಮಾರಿಗುಡಿಯಲ್ಲಿ ಪ್ರಮಾಣ ಮಾಡಲು ನಾನು ಸಿದ್ಧ ನೀವು ಬನ್ನಿ !!

ಸೊರಕೆಗೆ ಬಹಿರಂಗ ಬುಲಾವ್ ನೀಡಿದ ಕಾಪು ಶಾಸಕ ಗುರ್ಮೆ!!

ಕಾಪು : ಶಾಸಕನಾಗಿ ಎರಡು ವರ್ಷ ಆಗುತ್ತಾ ಬರುತ್ತಿದೆ ಸರ್ಕಾರದ ಮಟ್ಟದಲ್ಲಿ ಪ್ರಬಲವಾಗಿ ಒಬ್ಬ ಶಾಸಕನಾಗಿ ವಿಧಾನಸಭೆಯಲ್ಲಿ ಪ್ರಶ್ನೆಗಳನ್ನು ಮಾಡುತ್ತಾ ಬಂದಿದ್ದೇನೆ. ನಾನು ಒಬ್ಬ ಶಾಸಕನಾಗಿ ಮಾತ್ರ ಅಲ್ಲ 2010ರಿಂದಲೂ ಜನಸೇವೆಯನ್ನೇ ಮಾಡುತ್ತಾ ಬಂದವನು, ಸರ್ಕಾರದಿಂದ ಅನುದಾನ ಬರ್ತಾ ಇಲ್ಲ ಆದರೆ ನಾನು ನನ್ನ ಸ್ನೇಹಿತ ವರ್ಗವನ್ನು ಸೇರಿಕೊಂಡು ಒಂದಷ್ಟು ಸಿಎಸ್ಆರ್ ಅನುದಾನವನ್ನ ನನ್ನ ಕ್ಷೇತ್ರಕ್ಕೆ ತಂದು ಅಭಿವೃದ್ಧಿಯನ್ನು ಮಾಡುವಂತಹ ಕೆಲಸವನ್ನು ಪ್ರಯತ್ನವನ್ನು ಮಾಡುತ್ತಿದ್ದೇನೆ.
ಮಾನ್ಯ ವಿನಯ್ ಕುಮಾರ್ ಸೊರಕೆ ಅವರು ಬೇರೆ ಬೇರೆ ಸಭೆಯಲ್ಲಿ ನನ್ನ ಮೇಲೆ ವಿವಿಧ ಆಪಾದನೆಯನ್ನು ಮಾಡುತ್ತಿದ್ದಾರೆ ಆದರೆ ಅವರಿಗೂ ಗೊತ್ತಿದೆ ಸರ್ಕಾರ ಮಟ್ಟದಲ್ಲಿ ಯಾವ ಯಾವ ಕೆಲಸಗಳು ಆಗುತ್ತಿದೆ ಎಷ್ಟೆಷ್ಟು ಅನುದಾನಗಳು ಬರುತ್ತಿದೆ ಹೇಗೆ ಚಟುವಟಿಕೆಯು ನಡೆಯುತ್ತಿದೆ ಎಂಬ ವಿಚಾರ ಅವರ ಬುಡದಲ್ಲಿಯೂ ಇದೆ.

ಅವರದೇ ಪಕ್ಷದ ಹಿರಿಯ ಶಾಸಕರು ಕಾಂಗ್ರೆಸ್ನ ಶಾಸಕರು ಬೇರೆ ಬೇರೆ ಸಭೆಯಲ್ಲಿ ಅನುದಾನ ವಿಚಾರವಾಗಿ ತಮ್ಮ ಅಸಮಾಧಾನವನ್ನು ಹೊರಹಾಕಿದ್ದು ಗೊತ್ತಿದೆ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರು ಹೇಳಿದಂತೆ ರಸ್ತೆ ಬೇಕು ಗ್ಯಾರಂಟಿ ಬೇಕು ಎಂಬ ವಿಚಾರವನ್ನು ಉಲ್ಲೇಖ ಮಾಡುತ್ತ ಈ ಸರ್ಕಾರ ದಿವಾಳಿಯಾಗಿದೆ ಎಂಬುದನ್ನ ಪರೋಕ್ಷವಾಗಿ ಹೇಳಿಕೆ ನೀಡಿದ್ದಾರೆ.ಈ ಸತ್ಯದರ್ಶನ ಸನ್ಮಾನ್ಯ ವಿನಯ್ ಕುಮಾರ್ ಸೊರಕೆ ಅವರಿಗೆ ಗೊತ್ತಾಗಬೇಕಿತ್ತು ಇವತ್ತು ನಾನು ಗೊತ್ತು ಪ್ರಯತ್ನ ಮಾಡುತ್ತಿದ್ದೇನೆ ಎಂದರು.

ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರ ಬಿದ್ದಾಗ ಪ್ರಾಕೃತಿಕ ವಿಕೋಪಗಳಿಂದ ಉಂಟಾಗುವ ಹಾನಿಗಳಿಗೆ ಎಬಿಸಿಡಿ ವರ್ಗವಾರು ವಿಂಗಡಿಸಿ ಗರಿಷ್ಠ ರೂಪಾಯಿ 5 ಲಕ್ಷದವರೆಗೆ ಪರಿಹಾರದ ನೀಡಲಾಗಿರುತ್ತದೆ ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪ್ರಾಕೃತಿಕ ವಿಕೋಪದಿಂದ ಹಾನಿಗೊಳಗಾದ ಮನೆಗಳ ಪುನರ್ ನಿರ್ಮಾಣ ಅಥವಾ ದುರಸ್ತಿ ಕಾರ್ಯಕ್ಕೆ ಶೇಖರ್ 15 ಕಿಂತ ಮೇಲ್ಪಟ್ಟು ಹಾಗೂ 20 ಕ್ಕಿಂತ ಕಡಿಮೆ ಇರುವ ಮನೆ ಹಾನಿ ಪ್ರಮಾಣಕ್ಕೆ 6500 ಹಾಗೂ 20ಕ್ಕಿಂತ ಕಡಿಮೆ ಇರುವ ಮನೆ ಹಾನಿ ಪ್ರಕರಣಕ್ಕೆ 30 ಸಾವಿರ ರೂಪಾಯಿ ಹಾಗೂ 50 ಕ್ಕಿಂತ ಮೇಲ್ಪಟ್ಟು ಹಾಗೂ 70ಕ್ಕಿಂತ ಕಡಿಮೆ ಇರುವ ಮನೆ ಹಾನಿ ಪ್ರಕರಣಕ್ಕೆ 50 ಸಾವಿರ ನೀಡುತ್ತಿದ್ದಾರೆ, ಬೆಲೆ ಏರಿಕೆಯ ಮತ್ತು ಪ್ರಸ್ತುತ ಆರ್ಥಿಕ ವ್ಯವಸ್ಥೆಯಲ್ಲಿನ ಕಾಲಘಟ್ಟದಲ್ಲಿ ಇದರಿಂದ ಮನೆ ನಿರ್ಮಾಣ ಮಾಡಲು ಸಾಧ್ಯವಿದೆಯೇ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ವಸತಿ ಮನೆಗಳ ಮಂಜೂರಾತಿಯಲ್ಲಿ ಸರ್ಕಾರ ಅತ್ಯಂತ ದಿವ್ಯ ನಿರ್ಲಕ್ಷ ತೋರುತ್ತಿದ್ದು ತಮ್ಮದೇ ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ ಆರ್ ಪಾಟೀಲ್ ರವರು ವಸತಿ ಇಲಾಖೆಯಲ್ಲಿ ಆದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮದ ಮುಂದೆ ಹೇಳಿಕೆ ನೀಡಿರುವುದು ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಅವರಿಗೆ ಇದು ತಿಳಿದಿಲ್ಲವೇ, ಕಾಂಗ್ರೆಸ್ ಚುನಾವಣಾ ಪ್ರಣಾಳಿಕೆಯಲ್ಲಿ ಪಂಚಗ್ಯಾರಂಟಿ ನೀಡುವುದಾಗಿ ಜನರಿಗೆ ಭರವಸೆ ನೀಡಿ ಸರಕಾರ ರಚನೆಯಾದ ನಂತರ ಪ್ರಾರಂಭಿಕ ಹಂತದಲ್ಲಿ ಕಠಿಣ ಮಾರ್ಗಸೂಚಿಗಳೊಂದಿಗೆ ತರಾತುರಿಯಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನಕ್ಕೆ ತಂದು ಜನರ ಮುಂಗೈಗೆ ತುಪ್ಪ ಸವರುವ ಕೆಲಸ ಮಾಡಿದೆ ಎಂದು ಗುರ್ಮೆ ಟೀಕೆ ಮಾಡಿದರು. ರಾಜ್ಯದಲ್ಲಿ ಅಭಿವೃದ್ಧಿ ವಿಚಾರವನ್ನು ಮಾತನಾಡುವುದಾದರೆ ಸರ್ಕಾರ ಸಂಪೂರ್ಣವಾಗಿ ದಿವಾಲಿಯಾಗಿದ್ದು ಖಜಾನೆ ಖಾಲಿ ಮಾಡಿ ಕುಳಿತುಕೊಂಡಿದೆ ಆದರೆ ಇಲ್ಲಿ ಮಾಜಿ ಸಚಿವರು ವಿನಯ್ ಕುಮಾರ್ ಸೊರಕೆ ಅವರು ಮಾತ್ರ ನಮ್ಮ ಮೇಲೆ ಗೂಬೆಕೂರಿಸುವ ಪ್ರಯತ್ನವನ್ನು ಸುಳ್ಳು ಸುಳ್ಳು ಹೇಳಿ ಮಾಡುತ್ತಿದ್ದಾರೆ, ಸತತ ಸೋಲಿನ ಹತಾಶ ಮನೋಭಾವ ದ್ವೇಷ ರಾಜಕಾರಣ ಸ್ವಪ್ರತಿಷ್ಠ ರಾಜಕಾರಣ ಮಾಡುತ್ತಿರುವ ಇವರ ವಿರುದ್ಧ ಮುಂದಿನ ದಿನಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರು ಉಗ್ರ ಹೋರಾಟವನ್ನು ಕೈಗೆತ್ತಿಕೊಂಡು ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಗೊಳಿಸುವುದರೊಂದಿಗೆ ಕ್ಷೇತ್ರದ ಅಭಿವೃದ್ಧಿಗೆ ವೇಗವನ್ನ ನೀಡಿ ಮಾಜಿ ಶಾಸಕರ ಸಚಿವರಾದ ವಿನಯ್ ಕುಮಾರ್ ಸೊರಕೆ ಆರೋಪಗಳಿಗೆ ಉತ್ತರ ನೀಡಲಿದ್ದೇವೆ ಅವರು ತಿಳಿಸಿದರು.

ಪ್ರಾಧಿಕಾರ ಎಂಬ ಗುಮ್ಮ ಸೊರಕೆ ಕೊಡುಗೆ
ಕಾಪುವಿನ ಇಂತಹ ಸುಂದರ ಊರಿಗೆ ನಗರಾಭಿವೃದ್ಧಿ ಪ್ರಾಧಿಕಾರದ ಅಗತ್ಯ ಇದ್ದಿಲ್ಲ ಆದರೆ ತಮ್ಮ ಪಕ್ಷದ ನಾಯಕರಿಗೆ ಚಯರ್ ಕೊಡಬೇಕೆಂಬ ಕಾರಣಕ್ಕಾಗಿ ಪ್ರಾಧಿಕಾರವನ್ನು ತಂದು ಬಡಜನರ ಮೇಲೆ ಹೇರಲಾಗಿದೆ. ಪ್ರಾಧಿಕಾರ ತಂಡ ದಿನದಿಂದ ಇವತ್ತಿನವರೆಗೂ ಅಲ್ಲಿ ಸರಿಯಾದ ಅಧಿಕಾರಿಗಳು ಇಲ್ಲ ,ಅಧಿಕಾರಿಗಳು ಬಂದರೆ ಇಲ್ಲಿ ನಿಂತು ಕೆಲಸ ಮಾಡಲ್ಲ ಸುಮಾರು 498 ಕಡತಗಳು ಬಾಕಿ ಉಳಿದಿದೆ ಕಾಪುವಿನಲ್ಲಿ ಶೇಕಡ 90ರಷ್ಟು ಮತ್ತು ಉಡುಪಿಯಲ್ಲಿ ಶೇಕಡಾ 70ರಷ್ಟು ಸಿಬ್ಬಂದಿ ಕೊರತೆ ಇದೆ ಕೆಲಸ ಮಾಡುವುದಾದರೂ ಹೇಗೆ ಎಲ್ಲಾ ವಿಚಾರ ವಿನಯ್ ಕುಮಾರ್ ಸೊರಕೆ ಅವರಿಗೆ ಗೊತ್ತಿದೆ ಆದರೂ ಅವರು ಜನರಿಗೆ ತಪ್ಪು ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ ಖುದ್ದಾಗಿ ಇವರೇ ತಹಶೀಲ್ದಾರ್ ಕಚೇರಿಗೆ ಹೋಗಿ ಅರ್ಜಿ ವಿಲೇವಾರಿ ಮಾಡುವುದು ಸಂವಿಧಾನ ವಿರೋಧವಾಗಿದೆ ಈ ಬಗ್ಗೆ ಜಿಲ್ಲೆಯ ಐದು ಮಂದಿ ಶಾಸಕರು ಹಾಗೂ ಸಂಸದರು ಜಿಲ್ಲಾಧಿಕಾರಿಗೆ ಮನವಿ ಮಾಡಿ ಪ್ರತಿಭಟನೆ ಮಾಡುವುದಾಗಿ ತಿಳಿಸಿಬಂದಿದ್ದೇವೆ,ಇವರು ಬಡ ಜನರ ಕೆಲಸ ಮಾಡುವುದಕ್ಕೆ ನಮ್ಮ ಅಭ್ಯಂತರಯಿಲ್ಲ ಆದರೇ ಇವರೇ ಸರ್ಕಾರಿ ಕಚೇರಿಯ ಒಳಗೆ ಹೋಗಿ ಅರ್ಜಿ ವಿಲೇವಾರಿ ಮಾಡುವುದು ತಪ್ಪೆಂದು ಅವರಿಗೆ ಗೊತ್ತಿಲ್ಲವೆ?, ಅಧಿಕಾರಿಗಳ ಮಟ್ಟದಲ್ಲಿ ಹಸ್ತಕ್ಷೇಪ,ತಹಶೀಲ್ದಾರ್ ಕಚೇರಿಯಲ್ಲಿ ಹಸ್ತಕ್ಷೇಪ ,ಜಿಲ್ಲಾಧಿಕಾರಿ ಮಟ್ಟದಲ್ಲಿ ಹಸ್ತಕ್ಷೇಪ ಮಾಡುತ್ತಿರುವುದರ ಬಗ್ಗೆ ಖಂಡನೆ ವ್ಯಕ್ತಪಡಿಸಿದರು.

ಪಡುಬಿದ್ರಿ ಗೋಮಾಳ ಜಾಗದ ವಿಚಾರವಾಗಿ ಇವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಅದು ನಲ್ವತ್ತು ವರ್ಷಗಳ ಸಮಸ್ಯೆ ಇವತ್ತಿನ ಸಮಸ್ಯೆ ಅಲ್ಲ ಇವರು ಮಂತ್ರಿಯಿರುವ ಸಮಯದಲ್ಲಿ ಕಿರುಬೆರಳಿನಲ್ಲಿ ಪರಿಹಾರ ಮಾಡಬಹುದಾದ ಸಮಸ್ಯೆ ಆದರೆ ಮಾಡಿಲ್ಲ ನಾನು ಅಧಿಕಾರಿಗಳ,ಸಚಿವರ ಬೆನ್ನು ಬಿದ್ದು ಒಂದು ಹಂತಕ್ಕೆ ಪರಿಹಾರ ಮಾಡುವ ಕಾರ್ಯ ನಡೆಯುತ್ತಿದೆ ಅಲ್ಲಿ ಹೋಗಿ ಹಸ್ತಕ್ಷೇಪ ಮಾಡಿ ಲಾಭಗಿಟ್ಟಿಸುವ ಪ್ರಯತ್ನ ಮಾಜಿ ಸಚಿವರು ಮಾಡುತ್ತಿದ್ದಾರೆ ಎಂದು ಆರೋಪಿಸದರು.

ನನ್ನ ಮಗನ ಬಳಿ ಗುತ್ತಿಗೆಪರವಾನಿಗೆ ಇಲ್ಲವೇ ಇಲ್ಲ ,ಪ್ರಮಾಣಕ್ಕೆ ಬನ್ನಿ !!

ಇನ್ನು ನನ್ನ ಮಗ ಕಾಂಟ್ಯ್ರಾಕ್ಟ್ ಕೆಲಸ ಮಾಡುತ್ತಿದ್ದಾನೆಂಬ ಆರೋಪ ತುಂಬಾ ಕಡೆ ಮಾಡಿದ್ದಾರೆ ಈಗಿನ ಕಾಲಘಟ್ಟದಲ್ಲಿ ಮಾಹಿತಿಗಳು ಬೆರಳತುದಿಯಲ್ಲಿದೆ ಮಾಹಿತಿ ಅರ್ಜಿ ಹಾಕಿ ಮಾಹಿತಿ ಪಡೆಯಬಹುದು,ನನ್ನ ಮಗನ ಬಳಿ ಕನ್ಸ್ಟ್ರಕ್ಷನ್ ಲೈಸನ್ಸ್ ಇಲ್ಲ,ನಾನು ಶಾಸಕನಾದ ಮೇಲೆ ಅವ ಈ ಊರಿಗೆ ಬಂದಿದ್ದೆ ಇಲ್ಲ ಸುಮ್ಮನೆ ಆಪಾದನೆ ಮಾಡುವ ಇವರು ನನ್ನ ಸಂಬಂಧಿಕರು ಗುತ್ತಿಗೆ ಮಾಡುತ್ತಿದ್ದಾರೆಂದು ಆರೋಪ ಮಾಡುವ ಇವರು ದಾಖಲೆ ಕೊಟ್ಟು ಚರ್ಚೆಗೆ ಬರಲಿ ,ನಾನು ಕೂಡ ಯಾವುದಾದರೂ ಒಳ್ಳೆಯ ಧಾರ್ಮಿಕ ಜಾಗಕ್ಕೆ ಬರ್ಲಿ ನಾನು ಬರುತ್ತೇನೆ ,ಅವತ್ತೂ ಎಮ್ 11 ಕಂಪೆನಿಯ ಕಾಮಗಾರಿ ನನ್ನ ಮಗ ಮಾಡಿದ್ದ ಎಂಬ ಆರೋಪ ಮಾಡಿದಾಗ ನಾನು ನಿಮ್ಮನ್ನು ಎಲ್ಲೂರು,ನಂದಿಕೂರು,ಮಾರಿಗುಡಿ ದೇಗುಲಕ್ಕೆ ಬನ್ನಿ ಪ್ರಮಾಣ ಮಾಡುವ ಎಂದಿದ್ದೆ ಅದಕ್ಕೆ ನಾನು ಇವತ್ತಿಗೂ ಬದ್ಧನಾಗಿದ್ದೇನೆ ,ನಾನು ಸಮಾಜ ಒಂದು ಗ್ಲಾಸ್ ನೀರು ಕುಡಿದಿಲ್ಲ ಶುದ್ಧ ಹಸ್ತನಾಗಿಯೇ ಇದ್ದೇನೆ ಪ್ರಮಾಣಕ್ಕೆ ಬರುವುದಾದರೇ ನಿಮಗೆ ಇವತ್ತು ಮತ್ತೊಮ್ಮೆ ಆಹ್ವಾನ ಕೊಡುತ್ತೇನೆಂದರು.ಡಬ್ಬಲ್ ಗೇಮ್ ರಾಜಕೀಯ ನನಗೆ ಅಗತ್ಯವಿಲ್ಲ ,ರಾಜಕೀಯ ನನಗೆ ಗಂಜಿ ಕೇಂದ್ರ ಯಾವತ್ತಿಗೂ ಅಲ್ಲ ,ರಾಜಕೀಯ ಅಧಿಕಾರ ಇವತ್ತು ಬರುತ್ತೆ ನಾಳೆ ಹೋಗುತ್ತೆ ಆದ್ರೆ ಸತ್ಯ ಮಾತಾಡಬೇಕೆ ಹೊರತು ವಿನಾಕಾರಣ ಆಪಾದನೆ ಮಾಡಬಾರದೆಂದರು.

ನಾನು ವರ್ಗಾವಣೆ ದಂಧೆ ಮಾಡಿಲ್ಲ,ಗುತ್ತಿಗೆದಾರನಿಂದ ಒಂದು ಪೈಸೆಯು ಪಡೆದಿಲ್ಲ ಪ್ರಚಾರದ ಹಂಗು ಎನಗಿಲ್ಲ ಇವತ್ತಿನ ಪತ್ರಿಕಾಗೋಷ್ಠಿ ನನ್ನ ಮನಸ್ಸಿನ ನೋವಿನ ಬಗ್ಗೆ ಮತ್ತು ಕ್ಷೇತ್ರದ ಜನರಿಗೆ ಸತ್ಯ ಗೊತ್ತಾಗಬೇಕೆಂದು ಮಾತ್ರ ಎಂದರು.

ಇವತ್ತು ಪಂಚಾಯತ್ ಮುಂದೆ ನಮ್ಮ ಕಾರ್ಯಕರ್ತರು ಹೋರಾಟ ಮಾಡಿದ್ದಾರೆ ಸರ್ಕಾರದ ವಿರುದ್ದ ಆದರೆ ಇವರ ಹೋರಾಟ ಯಾರ ವಿರುದ್ಧ ಇದಕ್ಕೆ ಅರ್ಥ ಬೇಕಲ್ವಾ ನಾನು ನಡೆದಂತೆ ನುಡಿದಿದ್ದೇನೆ ನುಡಿದಂತೆ ನಡೆದಿದ್ದೇನೆ ಆದರೆ ಇವತ್ತಿಗೂ ಸೊರಕೆಯರ ಮಂತ್ರಿಗಿರಿ ಯಾಕೆ ಅರ್ಧದಲ್ಲಿ ಕೈತಪ್ಪಿ ಹೋಗಿದೆಂಬುದು ಯಕ್ಷ ಪ್ರಶ್ನೆಯಾಗಿಯೇ ಉಳಿದಿದೆಂದರು.

ಕಾಪು ಹೊಸಮಾರಿಗುಡಿ ವಿಚಾರದಲ್ಲಿ ಮೊಗವೀರ ಸಮಾಜಕ್ಕೆ ಅನ್ಯಾಯವಾಗಿದೆ ಅನ್ಯಾಯ ಮಾಡಿದ್ದು ಕಾಂಗ್ರೆಸ್ ಪಕ್ಷದ ಎರಡು ನಾಯಕರ ಗೊಂದಲದಿಂದಾಗಿ ಈ ಘಟನೆ ನಡೆದಿದೆ ಸುಮ್ಮನೆ ನನ್ನ ಮೇಲೆ ಅವರ ಕಾರ್ಯಕರ್ತರ ಮುಖೇನ ಆರೋಪ ಮಾಡಿದ್ದಾರೆ ಇದೆಲ್ಲ ಒಳ್ಳೆಯ ಬೆಳವಣಿಗೆ ಅಲ್ಲ ವಾಸ್ತವಿಕತೆ ಸೊರಕೆಗೆ ಗೊತ್ತಿದೆಂದರು.

ನನ್ನ ವಚನ ಸಾಹಿತ್ಯದ ಬಗ್ಗೆ ಗೇಲಿ ಮಾಡುವ ಸಚಿವರಿಗೆ ಅದರ ಬಗ್ಗೆ ಒಲವಿಲ್ಲ ಹಾಗಾಗಿ ಕ್ಷುಲ್ಲಕ ವಿಚಾರ ಮಾತನಾಡುತ್ತಾರೆ ನನಗೂ ಅವರಿಗೂ ವಚನ ಸಾಹಿತ್ಯದ ಕುರಿತಾಗಿ ಬಹಿರಂಗ ಚರ್ಚೆಗೆ ವೇದಿಕೆ ಸಿದ್ದಮಾಡಲಿ ನಾನು ಬರ್ತೆನೆ ಅವರೂ ಕೂಡ ಬರಲಿ ಎಂದರು.ಅವರ ಹಿರಿತನಕ್ಕೆ ಗೌರವ ಹೊರತು ಅವರಿಗಿರುವ ಮೌಢ್ಯತನಕ್ಕೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಅಧ್ಯಕ್ಷ ಜಿತೇಂದ್ರ ಶೆಟ್ಟಿ,ಪ್ರಮುಖರಾದ ಲಾಲಾಜಿ ಮೆಂಡನ್,ಗೀತಾಂಜಲಿ ಸುವರ್ಣ,ಸೋನು ಪೂಜಾರಿ ಪಾಂಗಾಳ,ಅನಿಲ್ ಕಾಪು ಮೊದಲಾದವರು ಉಪಸ್ಥಿತರಿದ್ದರು.

Vishwa News 24

Recent Posts

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ – vishwanews24

ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…

5 hours ago

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ – vishwanews24

ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ  ಶಿಳ್ಳೆ  ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್‌ ಭಟ್‌ ಗರಂ ಮಂಗಳೂರು: ಯಕ್ಷಗಾನ…

1 day ago

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ – vishwanews24

ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…

1 day ago

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ – vishwanews24

SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…

1 day ago

ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಮಂಗಳೂರು ವಿವಿ ಗೌರವ ಡಾಕ್ಟರೇಟ್ – vishwanews24

ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ  :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ  ಗೌರವ ಡಾಕ್ಟರೇಟ್ ಮಂಗಳೂರು…

1 day ago

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ – vishwanews24

ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…

1 day ago