ಕಾಪು :ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರು ಅಲ್ಪಸಂಖ್ಯಾತ ವಿರೋಧಿ ಎಂಬ ಮಂಗಳೂರಿನ ಮಾಜಿಮೇಯರ್ ರವರ, ಹೇಳಿಕೆ ಸತ್ಯಕ್ಕೆ ದೂರವಾದ ಹೇಳಿಕೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರೂ ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷರೂ ಆದ ಗುಲಾಂ ಮುಹಮ್ಮದ್ ಹೇಳಿದರು.
ಸರ್ವಧರ್ಮ ಪ್ರೇಮಿ ಶುದ್ಧಹಸ್ತ ರಾಜಕಾರಣಿ, ಹಸನ್ಮುಖಿ, ಎಲ್ಲರ ನೆಚ್ಚಿನ ಸೊರಕೆಯವರ ಬಗ್ಗೆ ಅಪಪ್ರಚಾರ ಮಾಡುವವರು ಕಾಪು ಉಡುಪಿ ಬಾಗದ ಮುಸ್ಲಿಂ ರಲ್ಲಿ ಬಂದು ಕೇಳಿದರೆ,ಅವರ ಜನಪ್ರಿಯತೆ , ಅಲ್ಪಸಂಖ್ಯಾತ ರ ಬಗ್ಗೆ ಎಷ್ಟು ಕಾಳಜಿ ವಹಸಿದ್ದಾರೆ ಎಂದು ತಿಳಿಯುತ್ತೆ.ಪುತ್ತೂರು ಶಾಸಕರಾಗಿದ್ದಾಲೂ, ಉಡುಪಿಯ ಸಂಸದರಾಗಿದ್ದಾಗಲೂ, ಕಾಪುವಿನ ಶಾಸಕರಾಗಿದ್ದ ವೇಳೆಯಲ್ಲೂ ಎಲ್ಲಾ ಧರ್ಮದ ಜನರಿಗೂ ಸಮಾನವಾಗಿ ನೋಡಿದ ಹೆಗ್ಗಳಿಕೆ ಅವರದು, ಅದೇ ರೀತಿ ಯಾವ ಕೋಮುವಾದಿ ಶಕ್ತಿಗಳಿಗೂ ತಲೆ ಎತ್ತದ ರೀತಿ ಅಭಿವೃದಿ ಎಂಬ ಮಂತ್ರದಲ್ಲಿಯೇ ಜನಮನ ಸೆಳೆದ ಅಪರೂಪದ ನಾಯಕ ಸೊರಕೆಯವರು ಎಂದು ಹೇಳಿದರು.
ಅವರು ಕಾಪುವಿನ ಶಾಸಕರಾಗಿದ್ದ ಅವಧಿಯಲ್ಲಿಯೇ ಕಾಪು ಪುರಸಭೆಯಾಗಿ, ತಾಲೂಕಾಗಿ ರೂಪಿತವಾಗಿತ್ತು.ಕಾಪು ಪುರಸಭೆಯ ಸದಸ್ಯರಲ್ಲಿ, 5 ಮಂದಿ ಮುಸ್ಲಿಮರು ಎನ್ನುವುದು ಗಮನಾರ್ಹ.ಅದೇ ರೀತಿ ತಾಲೂಕು ಪಂಚಾಯತು ಚುನಾವಣೆಯಲ್ಲಿ ಎರಡು ಅಲ್ಪಸಂಖ್ಯಾತ ಅಭ್ಯರ್ಥಿಗಳು ಕಣಕ್ಕಿಳಿಸಿದ್ದರು.
ಅವರ ಅವಧಿಯಲ್ಲಿ ಅತೀ ಹೆಚ್ಚು ಮೊತ್ತದ ಅನುಧಾನ ಅಲ್ಪಸಂಖ್ಯಾತ ವಿಭಾಗಕ್ಕೆ ಸರ್ಕಾರದ ಮೂಲಕ ಹರಿದುಬಂದಿತ್ತು. ಮಂದಿರ ಮಸೀದಿ ಚರ್ಚುಗಳಿಗೆ ಅತೀ ಹೆಚ್ಚು ಅನುಧಾನ ಒದಗಿಸಿದ್ದು ಇಲ್ಲಿನ ಮುಸ್ಲಿಮರು ಮತ್ತು ಎಲ್ಲಾ ಧರ್ಮೀಯರು ಮರೆಯಲು ಸಾಧ್ಯವೇ ಇಲ್ಲ ಎಂದು ಗುಲಾಂ ಮುಹಮ್ಮದ್ ತಿಳಿಸಿದರು.
ಎಲ್ಲಾ ರೀತಿಯಲ್ಲೂ ಸರ್ವಧರ್ಮ ಪ್ರೇಮಿಯಾದ ವಿನಯಕುಮಾರ್ ಸೊರಕೆಯವರನ್ನು ತೇಜೋವಧೆ ಮಾಡಲು ತೆರೆಮರೆಯ ಮೂಲಕ ಷಡ್ಯಂತ್ರ ನಡೆಸುವ ಕೆಲವೊಂದು ಕೋಮುವಾದಿ ಶಕ್ತಿಗಳು, ಮುಸ್ಲಿಮರು ಸೊರಕೆಯ ವಿರುದ್ಧ ಎಂದು ಬಿಂಬಿಸಹೊರಟಿರುವುದು ಹಾಸ್ಯಾಸ್ಪದ. ಮಾಜಿ ಮೇಯರ್ ರವರು, ಯಾರದೋ ಆಮಿಷಕ್ಕೆ ಒಳಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಹೊರಟು, ಅವರ ಅಲ್ಪಜ್ಞಾನ ಏನೆಂದು ಜಗಜ್ಜಾಹೀರುಗೊಳಿಸಿದ್ದಾರೆ ಎಂದು ಹೇಳಿದರು.
ಒಂದು ವೇಳೆ ಲೋಕಸಭಾ ಚುನಾವಣೆಗೆ ಸೊರಕೆಯವರು ಸ್ಪರ್ದಿಸುವುದಾದರೆ, ಸರ್ವ ಮುಸ್ಲಿಮರೂ, ಅಲ್ಪಸಂಖ್ಯಾತರೂ ಸೊರಕೆಯವರಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರೂ ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷರೂ ಆದ ಗುಲಾಂ ಮುಹಮ್ಮದ್ ಹೆಜಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಶಿಳ್ಳೆ ಹಾಕಿದ ಪ್ರೇಕ್ಷಕನಿಗೆ ರಂಗಸ್ಥಳದಲ್ಲೇ ತರಾಟೆ: ಉಜಿರೆ ಅಶೋಕ್ ಭಟ್ ಸಮರ್ಥನೆ ಬೆಳ್ತಂಗಡಿ: ಕಲೆಯ ಪ್ರದರ್ಶನದಲ್ಲಿ ಕೆಲವೊಮ್ಮೆ ಪ್ರೇಕ್ಷಕರ ವರ್ತನೆ…
ಮಂಗಳೂರು: ಯಕ್ಷಗಾನ ಪ್ರದರ್ಶನ ನಡೆಯುತ್ತಿದ್ದಾಗ ಶಿಳ್ಳೆ ಹಾಕಿದ್ದಕ್ಕೆ ಪ್ರೇಕ್ಷಕರ ವಿರುದ್ಧ ಕಲಾವಿದ ಉಜಿರೆ ಅಶೋಕ್ ಭಟ್ ಗರಂ ಮಂಗಳೂರು: ಯಕ್ಷಗಾನ…
ನೇಪಾಳದ ನೂತನ ಪ್ರಧಾನಿಯಾಗಿ ಬಾಲೇಂದ್ರ ಶಾ ಪ್ರಮಾಣ ವಚನ ಸ್ವೀಕಾರ ಕಠ್ಮಂಡು: ಬಾಲೇಂದ್ರ ಶಾ ಅವರು ಶುಕ್ರವಾರ ನೇಪಾಳದ ನೂತನ…
SSLC ಪರೀಕ್ಷೆ 625 ಅಂಕದಿಂದ 525ಕ್ಕೆ ಇಳಿಕೆ : ಈ ವರ್ಷದಿಂದ ತೃತೀಯ ಭಾಷೆ ಕಡ್ಡಾಯವಲ್ಲ ಬೆಂಗಳೂರು: ಇನ್ನು ಮುಂದೆ…
ಮಾ.28ರಂದು ಮಂಗಳೂರು ವಿವಿ 44ನೇ ಘಟಿಕೋತ್ಸವ :ಹರೇಕಳ ಹಾಜಬ್ಬ, ಸೂರಿಕುಮೇರು ಗೋವಿಂದ ಭಟ್, ರವೀಶ್ ಪಡುಮಲೆಗೆ ಗೌರವ ಡಾಕ್ಟರೇಟ್ ಮಂಗಳೂರು…
ದ.ಕ ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಹೆಚ್ಚಿನ ಒತ್ತು : ಅಕ್ಷಿತ್ ಸುವರ್ಣ ಮಂಗಳೂರು: ಯುವ ಜನತಾದಳ (ಜಾ) ದಕ್ಷಿಣ…