Featured

ವಿನಯಕುಮಾರ್ ಸೊರಕೆ ವಿರುದ್ದ ಅಪಪ್ರಚಾರ, ಅಲ್ಪಸಂಖ್ಯಾತರ ದಿಕ್ಕು ತಪ್ಪಿಸುವ ಯತ್ನ : ಗುಲಾಂ ಮುಹಮ್ಮದ್ – Vishwanews24

ಕಾಪು :ಮಾಜಿ ಸಚಿವರಾದ ವಿನಯಕುಮಾರ್ ಸೊರಕೆಯವರು ಅಲ್ಪಸಂಖ್ಯಾತ ವಿರೋಧಿ ಎಂಬ ಮಂಗಳೂರಿನ ಮಾಜಿಮೇಯರ್ ರವರ, ಹೇಳಿಕೆ ಸತ್ಯಕ್ಕೆ ದೂರವಾದ ಹೇಳಿಕೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರೂ ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷರೂ ಆದ ಗುಲಾಂ ಮುಹಮ್ಮದ್ ಹೇಳಿದರು.

ಸರ್ವಧರ್ಮ ಪ್ರೇಮಿ ಶುದ್ಧಹಸ್ತ ರಾಜಕಾರಣಿ, ಹಸನ್ಮುಖಿ, ಎಲ್ಲರ ನೆಚ್ಚಿನ ಸೊರಕೆಯವರ ಬಗ್ಗೆ ಅಪಪ್ರಚಾರ ಮಾಡುವವರು ಕಾಪು ಉಡುಪಿ ಬಾಗದ ಮುಸ್ಲಿಂ ರಲ್ಲಿ ಬಂದು ಕೇಳಿದರೆ,ಅವರ ಜನಪ್ರಿಯತೆ , ಅಲ್ಪಸಂಖ್ಯಾತ ರ ಬಗ್ಗೆ ಎಷ್ಟು ಕಾಳಜಿ ವಹಸಿದ್ದಾರೆ ಎಂದು ತಿಳಿಯುತ್ತೆ.ಪುತ್ತೂರು ಶಾಸಕರಾಗಿದ್ದಾಲೂ, ಉಡುಪಿಯ ಸಂಸದರಾಗಿದ್ದಾಗಲೂ, ಕಾಪುವಿನ ಶಾಸಕರಾಗಿದ್ದ ವೇಳೆಯಲ್ಲೂ ಎಲ್ಲಾ ಧರ್ಮದ ಜನರಿಗೂ ಸಮಾನವಾಗಿ ನೋಡಿದ ಹೆಗ್ಗಳಿಕೆ ಅವರದು, ಅದೇ ರೀತಿ ಯಾವ ಕೋಮುವಾದಿ ಶಕ್ತಿಗಳಿಗೂ ತಲೆ ಎತ್ತದ ರೀತಿ ಅಭಿವೃದಿ ಎಂಬ ಮಂತ್ರದಲ್ಲಿಯೇ ಜನಮನ ಸೆಳೆದ ಅಪರೂಪದ ನಾಯಕ ಸೊರಕೆಯವರು ಎಂದು  ಹೇಳಿದರು.

ಅವರು ಕಾಪುವಿನ ಶಾಸಕರಾಗಿದ್ದ ಅವಧಿಯಲ್ಲಿಯೇ ಕಾಪು ಪುರಸಭೆಯಾಗಿ, ತಾಲೂಕಾಗಿ ರೂಪಿತವಾಗಿತ್ತು.ಕಾಪು ಪುರಸಭೆಯ ಸದಸ್ಯರಲ್ಲಿ, 5 ಮಂದಿ ಮುಸ್ಲಿಮರು ಎನ್ನುವುದು ಗಮನಾರ್ಹ.ಅದೇ ರೀತಿ ತಾಲೂಕು ಪಂಚಾಯತು ಚುನಾವಣೆಯಲ್ಲಿ ಎರಡು ಅಲ್ಪಸಂಖ್ಯಾತ ಅಭ್ಯರ್ಥಿಗಳು ಕಣಕ್ಕಿಳಿಸಿದ್ದರು.
ಅವರ ಅವಧಿಯಲ್ಲಿ ಅತೀ ಹೆಚ್ಚು ಮೊತ್ತದ ಅನುಧಾನ ಅಲ್ಪಸಂಖ್ಯಾತ ವಿಭಾಗಕ್ಕೆ ಸರ್ಕಾರದ ಮೂಲಕ ಹರಿದುಬಂದಿತ್ತು. ಮಂದಿರ ಮಸೀದಿ ಚರ್ಚುಗಳಿಗೆ ಅತೀ ಹೆಚ್ಚು ಅನುಧಾನ ಒದಗಿಸಿದ್ದು ಇಲ್ಲಿನ ಮುಸ್ಲಿಮರು ಮತ್ತು ಎಲ್ಲಾ ಧರ್ಮೀಯರು ಮರೆಯಲು ಸಾಧ್ಯವೇ ಇಲ್ಲ ಎಂದು ಗುಲಾಂ ಮುಹಮ್ಮದ್ ತಿಳಿಸಿದರು.

ಎಲ್ಲಾ ರೀತಿಯಲ್ಲೂ ಸರ್ವಧರ್ಮ ಪ್ರೇಮಿಯಾದ ವಿನಯಕುಮಾರ್ ಸೊರಕೆಯವರನ್ನು ತೇಜೋವಧೆ ಮಾಡಲು ತೆರೆಮರೆಯ ಮೂಲಕ ಷಡ್ಯಂತ್ರ ನಡೆಸುವ ಕೆಲವೊಂದು ಕೋಮುವಾದಿ ಶಕ್ತಿಗಳು, ಮುಸ್ಲಿಮರು ಸೊರಕೆಯ ವಿರುದ್ಧ ಎಂದು ಬಿಂಬಿಸಹೊರಟಿರುವುದು ಹಾಸ್ಯಾಸ್ಪದ. ಮಾಜಿ ಮೇಯರ್ ರವರು, ಯಾರದೋ ಆಮಿಷಕ್ಕೆ ಒಳಗಾಗಿ ಪ್ರಾಮಾಣಿಕ ರಾಜಕಾರಣಿ ಸೊರಕೆಯನ್ನು ಅಲ್ಪಸಂಖ್ಯಾತ ವಿರೋಧಿ ಎಂದು ಬಿಂಬಿಸಹೊರಟು, ಅವರ ಅಲ್ಪಜ್ಞಾನ ಏನೆಂದು ಜಗಜ್ಜಾಹೀರುಗೊಳಿಸಿದ್ದಾರೆ ಎಂದು  ಹೇಳಿದರು.

ಒಂದು ವೇಳೆ ಲೋಕಸಭಾ ಚುನಾವಣೆಗೆ ಸೊರಕೆಯವರು ಸ್ಪರ್ದಿಸುವುದಾದರೆ, ಸರ್ವ ಮುಸ್ಲಿಮರೂ, ಅಲ್ಪಸಂಖ್ಯಾತರೂ ಸೊರಕೆಯವರಿಗೆ ಬೆಂಬಲ ಸೂಚಿಸಲಿದ್ದಾರೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತ ವಿಭಾಗದ ಉಪಾಧ್ಯಕ್ಷರೂ ಉಡುಪಿ ಜಿಲ್ಲಾ ವಕ್ಫ್ ಮಂಡಳಿ ಉಪಾಧ್ಯಕ್ಷರೂ ಆದ ಗುಲಾಂ ಮುಹಮ್ಮದ್ ಹೆಜಮಾಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

3 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

3 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

3 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

3 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

3 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

3 days ago