ಸೊರಕೆ ಹುಟ್ಟುಹಬ್ಬ-ಕೊರೋನಾ ವಾರಿಯರ್ಸ್ ಗೆ ಸನ್ಮಾನ.
ಕಾಪು: ಕರ್ನಾಟಕ ಸರ್ಕಾರದ ಮಾಜಿ ಸಚಿವ ಹಾಗೂ ಕಾಪು ಕ್ಷೇತ್ರದ ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆಯರ ಹುಟ್ಟುಹಬ್ಬದ ಪ್ರಯುಕ್ತ ಕಾಪು ರಾಜೀವ ಭವನದಲ್ಲಿ ಕೊರೋನಾ ವಾರಿಯರ್ಸ್ ಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತಾಡಿದ ಕಾಪುವಿನ ವೈದ್ಯಧಿಕಾರಿ ಡಾ.ಸುಬ್ರಾಯ ಕಾಮತ್” ದೇಶದಲ್ಲಿ ಕೊರೋನಾ ಮೀತಿ ಮೀರಿ ತನ್ನ ರಾಕ್ಷಸ ವರ್ತನೆ ತೋರಿದಾಗ ಅದರ ವಿರುದ್ಧ ಕೆಲಸ ಮಾಡಿ ಜನರ ಜೀವ ಉಳಿಸುವ ಪ್ರಯತ್ನ ಮಾಡಿದ ಕೊರೋನಾ ವಾರಿಯರ್ಸ್ ಗೆ ಅಭಿನಂದನೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.
ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತಾಡಿದ ಸೊರಕೆ “ಜೀವನದಲ್ಲಿ ಹುಟ್ಟು ಹಬ್ಬ ಆಚರಣೆ ಮಾಡಿರುವ ಇತಿಹಾಸ ಇಲ್ಲ ಆದರೇ ಕಾರ್ಯಕರ್ತರ ಭಾವನೆಗಳಿಗೆ ದಕ್ಕೆಯಾಗಬಾರದೆಂಬ ಹಿತದೃಷ್ಟಿಯಿಂದ ಸಮಾಜಮುಖಿ ಕಾರ್ಯಕ್ರಮಗಳ ಮುಖಾಂತರ ಆಚರಣೆ ಮಾಡುವುರಿಂದ ಸಂತಸ ನೀಡುತ್ತದೆ ,ಇವತ್ತು ಕೊರೋನಾ ವಾರಿಯರ್ಸ್ ಅಭಿನಂದನೆ ಮಾಡುತ್ತಿರುವುದು ಕೂಡ ನಿಜವಾಗಿಯೂ ಅತ್ಯಂತ ಸಂತಸ ತಂದಿದೆ.ಕೊರೋನಾವನ್ನು ನಿಯಂತ್ರಣಕ್ಕೆ ತರುವಲ್ಲಿ ವಿಶೇಷ ಪ್ರಯತ್ನ ಮಾಡಿದ ವೈದ್ಯರ ತಂಡ ಹಾಗೂ ಆಶಾ ಕಾರ್ಯಕರ್ತೆಯರಿಗೆ ಗೌರವಿಸುವುದು ನನ್ನ ಸೌಭಾಗ್ಯ ಎಂದರು.
ಕೆಪಿಸಿಸಿ ಸಂಯೋಜ ನವೀನ್ಚಂದ್ರ ಶೆಟ್ಟಿ ಮಾತಾಡಿ “ಕೊರೋನೊದಿಂದ ಜನ ಜೀವನ ಅಸ್ತವ್ಯಸ್ತತೆ ಕಂಡಾಗ ಅದರ ವಿರುದ್ಧ ಹೋರಾಡಿ ಜನ ಜೀವನವನ್ನು ಸುಗಮಗೊಳಿಸಲು ಹೋರಾಡಿದ ಕೊರೋನಾ ವಾರಿಯರ್ಸ್ ಗೆ ಅಭಿನಂದಿಸುತ್ತಿರುವ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.
ಈ ಸಂಧರ್ಭದಲ್ಲಿ ಕಾಪು ಕ್ಷೇತ್ರದ ಅಧ್ಯಕ್ಷ ನವೀನ್ಚಂದ್ರ ಸುವರ್ಣ,ಅಖೀಲೇಶ್,ಕುಮಾರಿ ಮಾಲಿನಿ,ಪ್ರಭಾ ಶೆಟ್ಟಿ,ಸಾದೀಕ್ ,ದೀಪಕ್ ಕುಮಾರ್ ಎರ್ಮಾಳು ಮೊದಲಾದವರು ಉಪಸ್ಥಿತರಿದ್ದರು.
ವರದಿ: ಪುರುಷೋತ್ತಮ ಮೂಳೂರು
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…