ಬಾಗಲಕೋಟೆ: ಸೋನಿಯಾ ಗಾಂಧಿಗೂ ಈ ದೇಶಕ್ಕೂ ಏನು ಸಂಬಂಧ ಎಂದು ನಾನು ವಾಪಸ್ ಕೇಳುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ಗೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿರುಗೇಟು ನೀಡಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವೀರ ಸಾವರ್ಕರ್‌ಗೂ ಕರ್ನಾಟಕಕ್ಕೂ ಏನು ಸಂಬಂಧ ಎಂದ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದರು. ಸೋನಿಯಾ ಗಾಂಧಿಗೆ ಈ ದೇಶಕ್ಕೆ ಸಂಬಂಧವೇ ಇಲ್ಲ. ಸೋನಿಯಾಗಾಂಧಿ ವಿದೇಶದಿಂದ ಬಂದ ವ್ಯಕ್ತಿ. ನಾನು ವೈಯಕ್ತಿಕವಾಗಿ ಅವರನ್ನು ಟೀಕೆ ಮಾಡಲು ಇಷ್ಟ ಪಡುವುದಿಲ್ಲ. ಆದರೆ ಕಾಂಗ್ರೆಸ್ ಯಾವ ದಿಕ್ಕಲ್ಲಿ ಹೋಗುತ್ತಿದೆ ಎಂದು ಪ್ರಶ್ನಿಸಿದರು.
ಸೋನಿಯಾ ಗಾಂಧಿ ಜೈಲು ಶಿಕ್ಷೆ ಅನುಭವಿಸಿದ್ದಾರಾ? ರಾಹುಲ್ ಗಾಂಧಿ ಅನುಭವಿಸಿದ್ದಾರಾ? ತಿಹಾರ್ ಜೈಲಿಗೆ ಡಿಕೆಶಿ ಹೋಗಿದ್ದು ಇರಬಹುದು. ಆದರೆ ಡಿ.ಕೆ. ಶಿವಕುಮಾರ್ ಹಾಗೂ ಅವರ ಶಿಷ್ಯಂದಿರಿಗೆ ತಿಹಾರ್ ಜೈಲು ಪರಪ್ಪನ ಅಗ್ರಹಾರ ಸಂಬಂಧ ಮಾತ್ರ ಗೊತ್ತು. ಇದು ಅವರು ವೈಯಕ್ತಿಕವಾಗಿ ಮಾಡಿದಂತಹ ರಾಷ್ಟ್ರದ್ರೋಹಿ ಚಟುವಟಿಕೆಗಳಿಂದ ಜೈಲಿಗೆ ಹೋದರು. ಆದರೆ ವೀರ ಸಾವರ್ಕರ್ ಸ್ವಾತಂತ್ರ್ಯ ಹೋರಾಟಕ್ಕಾಗಿ ಹೋಗಿದ್ದರು. ವೀರ ಸಾವರ್ಕರ್ ಅವರು ಅಂಡಮಾನ್‍ನ ಜೈಲಲ್ಲಿ ಎಷ್ಟು ವರ್ಷ ಇದ್ದರು? ಅಲ್ಲಿನ ಕಠಿಣ ಶಿಕ್ಷೆ ಎಷ್ಟರ ಮಟ್ಟಿಗೆ ಅನುಭವಿಸಿದರು ಅನ್ನೊದು ಗೊತ್ತಿಲ್ಲ. ಇತಿಹಾಸ ನೋಡಿಕೊಂಡು ಡಿಕೆಶಿ ಮಾತಾಡಲಿ ಎಂದು ತಿರುಗೇಟು ನೀಡಿದರು.
ರಾಜಕಾರಣ ಮಾಡಲಿ ನಾವು ಮಾಡ್ತೇವೆ ಇಲ್ಲ ಅಂತಲ್ಲ. ಇಂದಿರಾ ಗಾಂಧಿಯವರನ್ನು ಪಾಕಿಸ್ತಾನ – ಭಾರತ ಯುದ್ಧದ ಸಮಯದಲ್ಲಿ ವಾಜಪೇಯಿಯವರು ದುರ್ಗೆ ಅಂತ ಕರೆದರು. ದೇಶದ ಸಂಕಷ್ಟದ ಸಮಯದಲ್ಲೂ ಇಂದಿರಾ ಗಾಂಧಿಯನ್ನು ಹೊಗಳಿದರು. ಅದೇ ಇಂದಿರಾ ಗಾಂಧಿ ವಾಜಪೇಯಿ, ಜಯಪ್ರಕಾಶ್ ನಾರಾಯಣ ಸೇರಿದಂತೆ ಅನೇಕ ನಾಯಕರನ್ನು ತುರ್ತು ಪರಿಸ್ಥಿತಿ ತಂದು ಜೈಲು ಸೇರಿಸಿದರು. ಅದನ್ನು ಬಿಜೆಪಿ ವಿರೋಧಿಸಿತು. ಯಾವ ಸಂದರ್ಭದಲ್ಲಿ ರಾಜಕಾರಣ ಮಾಡಬೇಕು ಎಂಬ ಕಲ್ಪನೆ ಕಾಂಗ್ರೆಸ್‍ಗೆ ಇಲ್ಲ. ಇಡೀ ರಾಜ್ಯ ದೇಶದ ಜನರಿಗೆ ಕಾಂಗ್ರೆಸ್ ಬಗ್ಗೆ ಅಸಹ್ಯ ಹುಟ್ಟುತ್ತದೆ. ಆ ರೀತಿ ಅವರು ನಡೆದುಕೊಳ್ಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಪ್ರಿಲ್ ಜಾತ್ರೆಯಲ್ಲಿ ಭ್ರಮರಾಂಬೆಗೆ ನೂತನ ರಥದಲ್ಲಿ ಉತ್ಸವ ಐವತ್ತು ಅಡಿ ಎತ್ತರದ ಆರು ಚಕ್ರಗಳ ಹೊಸ ರಥದ ನಿರ್ಮಾಣ ಕಟೀಲು…
ಮಕ್ಕಳಾಗಿಲ್ಲ ಹಾಗೂ ತವರಿನಿಂದ ಹಣ ತರುವ ವಿಚಾರಕ್ಕೆ ಗಲಾಟೆ : ಪತ್ನಿಯನ್ನು ಕತ್ತು ಹಿಸುಕಿ ಕೊಲೆಗೈದ ಪತಿ ಕಲಬುರಗಿ: ಮಕ್ಕಳಾಗಿಲ್ಲ…
ಸುಪ್ರೀಂ ಕೋರ್ಟ್‌ನಲ್ಲಿ ಉದ್ಯೋಗವಕಾಶ : 250 ಜೂನಿಯರ್ ಕೋರ್ಟ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ ಸುಪ್ರೀಂ ಕೋರ್ಟ್ ಮಹತ್ವದ ಅವಕಾಶವೊಂದನ್ನು…
ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ ನಟ ಪ್ರೇಮ್ ದಂಪತಿ ಉಡುಪಿ: ಚಿತ್ರನಟ ಹಾಗೂ ‘ನೆನಪಿರಲಿ’ ಖ್ಯಾತಿಯ ಪ್ರೇಮ್ ಅವರು…
ಸಚಿವರ ಮೇಲೆ ಖಾಸಗಿ ಸ್ಟಿಂಗ್ ಆಪರೇಷನ್ : ಎಚ್ಚರಿಕೆಯಿಂದ ಇರುವಂತೆ ಸಿಎಂ ಸೂಚನೆ ಬೆಂಗಳೂರು: ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ…
ಪ್ರಕಾಶ್‌ರಾಜ್‌ಗೆ ‘ಮಾನವ ರತ್ನ’, ಹಿದಾಯತುಲ್ಲಾ ಅಬ್ಬಾಸ್‌ಗೆ ‘ಸೇವಾ ರತ್ನ’, ಸುರೇಶ್ ಭಟ್ ಬಾಕ್ರಬೈಲ್‌ಗೆ ‘ಸೌಹಾರ್ದ ರತ್ನ’ ಪ್ರಶಸ್ತಿ ಉಡುಪಿ ಜಿಲ್ಲಾ…