Featured

ಸೌಜನ್ಯ ಪ್ರಕರಣ ತನಿಖೆ ನಡೆಸಿದ್ದ ಪೊಲೀಸ್‌ ಅಧಿಕಾರಿಗೆ ಎಸ್‌ಐಟಿ ಬುಲಾವ್‌ – vishwanews24

ಸೌಜನ್ಯ ಪ್ರಕರಣ ತನಿಖೆ ನಡೆಸಿದ್ದ ಪೊಲೀಸ್‌ ಅಧಿಕಾರಿಗೆ ಎಸ್‌ಐಟಿ ಬುಲಾವ್‌

ಮಂಗಳೂರು: ಧರ್ಮಸ್ಥಳ  ಸೌಜನ್ಯ ಪ್ರಕರಣದ  ಮರು ತನಿಖೆಯಲ್ಲಿ ಮಹತ್ವದ ಬೆಳವಣಿಗೆಯಾಗಿದೆ. 2012 ರಲ್ಲಿ ಪ್ರಕರಣದ ತನಿಖಾಧಿಕಾರಿಯಾಗಿದ್ದ ಯೋಗೇಶ್ ಅವರಿಗೆ ಎಸ್‌ಐಟಿ (SIT) ಬುಲಾವ್‌ ನೀಡಿದೆ.

ಯೋಗೇಶ್‌ ಅವರಿಗೆ ವಿಚಾರಣೆಗೆ ಹಾಜರಾಗಲು ಎಸ್‌ಐಟಿ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಯೋಗೇಶ್ ವಿರುದ್ಧ ಸೌಜನ್ಯ ಪೋಷಕರು ಗುರುತರ ಆರೋಪ ಹೊರಿಸಿದ್ದರು. ತನಿಖೆಯ ಪ್ರಾಥಮಿಕ ಹಂತದಲ್ಲೇ ಸಾಕ್ಷಿ ನಾಶದ ಆರೋಪ ಇವರ ವಿರುದ್ಧ ಕೇಳಿಬಂದಿತ್ತು.

ಇದೀಗ ಯೋಗೇಶ್‌ ಅವರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ಬುಲಾವ್‌ ನೀಡಿದ್ದು, ಈ ವಾರದೊಳಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ.

ಇತ್ತೀಚೆಗೆ ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಸಂಜಯ್ ಕುಮಾರ್ ಅವರಿದ್ದ ಪೀಠವು ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರುತನಿಖೆಗೆ ಆದೇಶಿಸಿತ್ತು. ಈ ಹಿಂದೆ ಪ್ರಕರಣದ ತನಿಖೆ ನಡೆಸಿದ್ದ ಯಾವುದೇ ಅಧಿಕಾರಿಯನ್ನು ಹೊಸ ತಂಡದಲ್ಲಿ ಸೇರಿಸಿಕೊಳ್ಳಬಾರದು ಎಂದು ಕಟ್ಟುನಿಟ್ಟಿನ ಸೂಚನೆ ಕೂಡಾ ನ್ಯಾಯಾಲಯ ನೀಡಿತ್ತು. ಮುಂದಿನ 3 ತಿಂಗಳ ಒಳಗಾಗಿ ಸಮಗ್ರ ತನಿಖೆ ಪೂರ್ಣಗೊಳಿಸಿ ವರದಿಯನ್ನು ಸಲ್ಲಿಸುವಂತೆ ಗಡುವು ವಿಧಿಸಿತ್ತು.

Vishwa News 24

Recent Posts

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ : ಹಲವರಿಗೆ ಗಾಯ – vishwanews24

ರಾಹುಲ್ ಗಾಂಧಿ ಬೆಂಗಾವಲು ವಾಹನಗಳ ಸರಣಿ ಅಪಘಾತ - 5 ಕಾರುಗಳು, ಆಂಬ್ಯುಲೆನ್ಸ್ ಜಖಂ ಸುಲ್ತಾನ್‌ಪುರ : ಲೋಕಸಭೆಯ ವಿರೋಧ…

2 hours ago

ಕುಂದಾಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು – vishwanews24

ಕುಂದಾಪುರ: ಬಟ್ಟೆ ತೊಳೆಯಲು ಹೋಗಿದ್ದ ಇಬ್ಬರು ಬಾಲಕಿಯರು ನೀರುಪಾಲು ಕುಂದಾಪುರ: ಬಟ್ಟೆ ತೊಳೆಯಲು ಕೆರೆಗೆ ತೆರಳಿದ್ದ ಇಬ್ಬರು 13 ವರ್ಷದ…

2 hours ago

ಉಡುಪಿ:  ಗೌಶಾಲೆಗಳ ಅಭಿವೃದ್ಧಿಗೆ CSR ನಿಧಿ ಬಳಕೆಗೆ ಒತ್ತಾಯ: ನಿರ್ಮಲಾ ಸೀತಾರಾಮನ್‌ ಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ – vishwanews24

ಉಡುಪಿ:  ಗೌಶಾಲೆಗಳ ಅಭಿವೃದ್ಧಿಗೆ CSR ನಿಧಿ ಬಳಕೆಗೆ ಒತ್ತಾಯ: ನಿರ್ಮಲಾ ಸೀತಾರಾಮನ್‌ಗೆ ಕೋಟ ಶ್ರೀನಿವಾಸ ಪೂಜಾರಿ ಮನವಿ ಉಡುಪಿ: ರಾಜ್ಯದ…

2 hours ago

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ , ಮಾರಾಟ – vishwanews24

ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಶಾಖೆಯಲ್ಲಿ ಆರ್ಟಿಸ್ಟ್ರಿ ಕಲಾತ್ಮಕ ಚಿನ್ನಾಭರಣಗಳ ಪ್ರದರ್ಶನ - ಮಾರಾಟ. ಉಡುಪಿ : ಮಲಬಾರ್…

3 hours ago

ಮಂಗಳೂರು: ಯಕ್ಷಗಾನದಲ್ಲಿ ಧಾರ್ಮಿಕ ಸೌಹಾರ್ದದ ಅನಾವರಣ; ಶ್ರೀದೇವಿಯ ವೇಷದಲ್ಲಿ ಕಂಗೊಳಿಸಿದ ಮುಸ್ಲಿಂ ಯುವತಿ -vishwanews24

ಮಂಗಳೂರು: ಯಕ್ಷಗಾನದಲ್ಲಿ ಧಾರ್ಮಿಕ ಸೌಹಾರ್ದದ ಅನಾವರಣ; ಶ್ರೀದೇವಿಯ ವೇಷದಲ್ಲಿ ಕಂಗೊಳಿಸಿದ ಮುಸ್ಲಿಂ ಯುವತಿ ಮಂಗಳೂರು: ಕರಾವಳಿಯ ಗಂಡುಕಲೆ ಯಕ್ಷಗಾನದಲ್ಲಿ ಧಾರ್ಮಿಕ…

5 days ago

ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ ಪ್ರಕರಣ : ಇಬ್ಬರು ಮಹಿಳೆಯರು ಸೇರಿ ಮತ್ತೆ ನಾಲ್ವರ ಬಂಧನ – vishwanews24

ಟೈಗರ್ ಶ್ರಾಫ್ ಕಾರಿನ ಮೇಲೆ ದಾಳಿ ಪ್ರಕರಣ : ಇಬ್ಬರು ಮಹಿಳೆಯರು ಸೇರಿ ಮತ್ತೆ ನಾಲ್ವರ ಬಂಧನ ಮುಂಬೈ: ಬಾಲಿವುಡ್…

5 days ago