Featured

ಸೌದಿ ಅರೇಬಿಯಾದಲ್ಲಿ ವ್ಯಕ್ಯಿ ಬಂಧನ : ಬಿಡುಗಡೆಗೆ ಅಗತ್ಯ ಕ್ರಮ – ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ತುರ್ತು ಸ್ಪಂದನೆ -Vishwanews24

ಉಡುಪಿ : ಫೇಸ್‍ಬುಕ್ ನಲ್ಲಿ , ಸೌದಿ ದೊರೆಯ ವಿರುದ್ದ ಪೋಸ್ಟ್ ಮಾಡಿದ ಅರೋಪದಲ್ಲಿ ಸೌದಿ ಅರೇಬಿಯಾದಲ್ಲಿ ಬಂಧಿತನಾಗಿರುವ , ಉಡುಪಿ ಜಿಲ್ಲೆ ಗೋಪಾಡಿ ಗ್ರಾಮದ ಹರೀಶ್ ಬಂಗೇರಾ ಅವರ ಕುರಿತು ಸೋಮವಾರ ಪತ್ರಿಕೆಗಳಲ್ಲಿ ಪ್ರಕಟಗೊಂಡ ವರದಿ ವೀಕ್ಷಿಸಿದ, ಸರ್ಕಾರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು , ಕೂಡಲೇ ರಿಯಾದ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಪ್ರಕರಣದ ಮಾಹಿತಿ ಪಡೆದರು.

ಭಾರತೀಯ ದೂತವಾಸದ ಅಧಿಕಾರಿಗಳೊಂದಿಗೆ ಮಾತನಾಡಿದ ಕಾರ್ಯದರ್ಶಿಗಳು, ಆದಷ್ಟು ಶೀಘ್ರದಲ್ಲಿ ಹರೀಶ್ ಬಂಗೇರಾ ಅವರ ಬಿಡುಗಡೆಗೆ ಅಗತ್ಯ ಕ್ರಮ ವಹಿಸುವಂತೆ ಕೋರಿದರು. ಈ ಪ್ರಕರಣವು ಕಾನೂನು ಮೂಲಕ ಇತ್ಯರ್ಥವಾಗಬೇಕಿದ್ದು, ಸ್ವಲ್ಪ ವಿಳಂಬವಾಗಲಿದ್ದು, ಬಂಧನದಲ್ಲಿರುವ ಅವರು ಕ್ಷೇಮವಾಗಿದ್ದಾರೆ ಎಂದು ದೂತವಾಸದ ಅಧಿಕಾರಿಗಳು ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು.
ಮಂಗಳವಾರ, ಹರೀಶ್ ಬಂಗೇರಾ ಅವರ ಪತ್ನಿ ಶ್ರೀಮತಿ. ಸುಮನ ಬಂಗೇರಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದ ಕಾರ್ಯದರ್ಶಿಗಳು, ಪ್ರಕರಣದ ಪ್ರಗತಿ ಬಗ್ಗೆ ಮಾಹಿತಿ ನೀಡಿ, ಸರ್ಕಾರವು ತಮ್ಮ ಪರವಾಗಿ ನಿಂತಿದ್ದು ಆದಷ್ಟು ಶೀಘ್ರದಲ್ಲಿ ತಮ್ಮ ಪತಿಯ ಬಿಡುಗಡೆಗೆ ಪ್ರಯತ್ನಿಸಲಾಗುವುದು ಎಂದು ಅವರಲ್ಲಿ ಧೈರ್ಯ ತುಂಬಿದರು.

ನಂತರ ಉಡುಪಿ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ, ಗೋಪಾಡಿ ಗ್ರಾಮದಲ್ಲಿನ ಹರೀಶ್ ಬಂಗೇರಾ ಅವರ ಬೇಟಿ ನೀಡಿ, ಶ್ರೀಮತಿ ಸುಮನ ಬಂಗೇರಾ ಅವರನ್ನು ಬೇಟಿ ಮಾಡಿ, ಹರೀಶ್ ಬಂಗೇರ ಅವರ ಬಿಡುಗಡೆ ಕುರಿತಂತೆ ಇಲಾಖೆವತಿಯಿಂದ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಯಿತು.

 

ಈ ಸಂದರ್ಭದಲ್ಲಿ ಮಾತನಾಡಿದ ಸುಮನ ಬಂಗೇರಾ, ಬಂಧನವಾದ ಬಳಿಕ ತಮ್ಮ ಪತಿ ಹರೀಶ್ ಬಂಗೇರಾ , ಅವರು ಕೆಲಸ ಮಾಡುವ ಕಂಪನಿಯು ತಮ್ಮನ್ನು ಸಂಪರ್ಕಿಸಿ, ಒಂದು ಬಾರಿ ಮಾತನಾಡಿತ್ತು. ತದ ನಂತರ ಎಂಬೆಸ್ಸಿಯು ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಸೌದಿ ಪೋಲೀಸ್ ಮುಖಾಂತರವೆ ಅವರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ. ತಮ್ಮ ಪತಿಯನ್ನು ಆದಷ್ಟು ಬೇಗ ಬಿಡುಗಡೆ ಮಾಡಿಸಬೇಕಾಗಿ ಕೋರುತ್ತಾ, ಸಾಧ್ಯವಾದಲ್ಲಿ ತಮ್ಮ ಪತಿಯೊಂದಿಗೆ ಒಮ್ಮೆ ದೂರವಾಣಿಯಲ್ಲಿ ಮಾತನಾಡಿಸಲು ಅವಕಾಶ ಮಾಡಿಕೊಡುವಂತೆ ಅವರು ಕೋರಿದರು.

ಹರೀಶ್ ಬಂಗೇರ ಅವರು , ಕಳೆದ ಆರು ವರ್ಷಗಳಿಂದ ಅಲ್ಲೇ ಕೆಲಸ ಮಾಡುತ್ತಿದ್ದು, ಹಿಂದಿನ ವರ್ಷ ಜನವರಿಯಲ್ಲಿ ಊರಿಗೆ ಭೇಟಿ ನೀಡಿದ್ದರು. ಅವರು ಬಂಧನಕ್ಕೊಳಗಾದ ಸುದ್ದಿ ತಿಳಿಯುತ್ತಲೇ ಪ್ರಕ್ರಿಯೆಗನುಗುಣವಾಗಿ , ಉಡುಪಿ ಸೆನ್ ಪೋಲಿಸರಿಗೆ ಅರ್ಜಿ ನೀಡಿದ್ದು, ಪ್ರಕರಣವನ್ನು ಜಿಲ್ಲೆಯ ಮಾನವ ಹಕ್ಕು ಆಯೋಗದ ಗಮನಕ್ಕೂತರಲಾಗಿದೆ ಎಂದು ಹರೀಶ್ ಬಂಗೇರ ಅವರ ಮಾವ ಶ್ರೀನಿವಾಸ್ ಬಂಗೇರ ತಿಳಿಸಿದರು.

Vishwa News 24

Recent Posts

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು: ಯು.ಟಿ.ಖಾದರ್ – vishwanews24

ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು ,  ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…

2 days ago

ಉಚ್ಚಿಲ : ಮೊಗವೀರ ಕುಲಗುರು ಕೀರ್ತಿಶೇಷ ಶ್ರೀ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ – vishwanews24

ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…

2 days ago

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ : ಅ. 18-19ರಂದು ವಿಜಯ ದಶಮಿ ಕರೆಯಲ್ಲಿ ಜೋಡುಕರೆ ಕಂಬಳ – vishwanews24

ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…

2 days ago

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ – vishwanews24

2028ಕ್ಕೂ ಡಿಕೆ ಶಿವಕುಮಾರ್‌ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…

2 days ago

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ – vishwanews24

ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…

2 days ago

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ – vishwanews24

ಕುಂದಾಪುರ:  ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…

2 days ago