ಕತಾರ್ ನಿಂದ ಮದೀನಾಕ್ಕೆ ಉಮ್ರಾ ನಿರ್ವಹಿಸಲು ತೆರಳುತ್ತುದ್ದ ವೇಳೆ ಕಾರು ಅಪಘಾತಕ್ಕೀಡಾಗಿ 3 ತಿಂಗಳ ಹಸುಗೂಸು ಸೇರಿ ಒಂದೇ ಮನೆಯ ನಾಲ್ಕು ಮಂದಿ ಮೃತಪಟ್ಟಿರುವ ಘಟನೆ ರಿಯಾದ್ ಹೊರವಲಯದ ಝಲ್ಫಾ ಎಂಬಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.
ಮೃತರನ್ನು ಹಳೆಯಂಗಡಿ ತೋಕೂರು ನಿವಾಸಿ ಶಮೀಮ್ ಮತ್ತು ಝರೀನಾ ದಂಪತಿಯ ಪುತ್ರಿ ಹಿಬಾ ( 29) ಆಕೆಯ ಪತಿ ಮುಹಮ್ಮದ್ ರಮೀಝ್ (34) ಮಕ್ಕಳಾದ ಆರೂಶ್ (3) ಮತ್ತು ರಾಹ ( 3 ತಿಂಗಳು) ಎಂದು ಗುರುತಿಸಲಾಗಿದ್ದು, ಅದೇ ಕಾರಿನಲ್ಲಿದ್ದ ಹಿಬಾ ಅವರ ಸಹೋದರಿ ಶಬ್ನಮ್ ಎಂಬವರ ಮಗಳು ಫಾತಿಮಾ (19) ಗಂಭೀಯ ಗಾಯಗೊಂಡಿದ್ದು, ಆಕೆಯನ್ನು ರಿಯಾದ್ ನ ಆಸ್ಪತ್ರೆಯಲ್ಲಿ ಚಿಕಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಈ ಪೈಕಿ ಅಪಘಾತಕ್ಕೀಡಾಗಿದ್ದ ಕಾರಿನಲ್ಲಿದ್ದ ಹಿಬಾ ಅವರ ಇನ್ನೋರ್ವ ಸಹೋದರಿ ಲುಬ್ನಾ ಅವರ ಮಗ ಈಸ (4) ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ಕುಟುಂಬಸ್ಥರು ಸದಸ್ಯರು ಮಾಹಿತಿ ನೀಡಿದ್ದಾರೆ.
ಮೃತ ಹಿಬಾ ಅವರ ತಂದೆ ಶಮೀಮ್ ತಾಯಿ ಝರೀನ ಮತ್ತು ಮೊಮ್ಮಕ್ಕಳು ಒಂದು ಕಾರಿನಲ್ಲಿ ಮತ್ತು ಹಿಬಾ ತನ್ನ ಕುಟುಂಬದೊಂದಿಗೆ ಇನ್ನೊಂದು ಕಾರಿನಲ್ಲಿ ಮಂಗಳವಾರ ಫಜರ್ ನಮಾಝ್ ಮುಗಿಸಿಕೊಂಡು ಉಮ್ರಾ ಯಾತ್ರೆ ಆರಂಭಿಸಿದ್ದರು. ಮಂಗಳವಾರ ರಾತ್ರಿ ರಿಯಾದ್ ತಲುಪಿದ್ದ ಅವರು ಅಲ್ಲೇ ತನ್ನ ಕುಟುಂಸ್ಥರ ಮನೆಯಲ್ಲಿ ಉಳಿದುಕೊಂಡು ಬುಧವಾರ ಬೆಳಗ್ಗೆ ರಿಯಾದ್ ನಿಂದ ಮತ್ತೆ ಉಮ್ರಾ ಯಾತ್ರೆ ಆರಂಭಿಸಿದ್ದರು.
ರಮೀಝ್ ತನ್ನ ಪತ್ನಿ ಹಿಬಾ, ಮಕ್ಕಳಾದ ಆರೂಶ್, ರಾಹ ಮತ್ತು ಹಿಬಾ ಅವರ ಸಹೋದರಿಯರ ಮಕ್ಕಳಾದ ಫಾತಿಮಾ ಮತ್ತು ಈಸ ಜೊತೆ ಒಂದು ಕಾರಿನಲ್ಲಿ ಪ್ರಯಾಣ ಬೆಳೆಸಿದ್ದರು. ಇನ್ನೊಂದು ಕಾರಿನಲ್ಲಿ ಹಿಬಾ ಅವರ ತಂದೆ ಶಮೀಮ್, ತಾಯಿ ಝರೀನಾ ಮೊದಲಾದವರು ಪ್ರಯಾಣಿಸುತ್ತಿದ್ದರು. ರಮೀಝ್ ಅವರು ಚಲಾಯಿಸುತ್ತಿದ್ದ ಕಾರು ರಿಯಾದ್ ನಿಂದ ತಾಯೀಫ್ ಗೆ ಹೋಗುವ ಮಾರ್ಗ ಮಧ್ಯದ ಸುಮಾರು 250 ಕಿ.ಮೀ. ದೂರದದಲ್ಲಿರುವ ಝುಲ್ಫಾ ಎಂಬಲ್ಲಿ ರಸ್ತೆ ವಿಭಾಜಕಕ್ಕೆ ಡಿಕ್ಕಿ ಹೊಡೆದು ರಸ್ತೆಯಿಂದ ಹಲವು ಮೀಟರ್ ಗಳಷ್ಟು ದೂರಕ್ಕೆ ಹಾರಿ ಪಲ್ಟಿಯಾಗಿದೆ ಎಂದು ತಿಳಿದು ಬಂದಿದೆ.
ಘಟನೆಯಿಂದ ರಮೀಝ್, ಹಿಬಾ ಮತ್ತು ಒಂದು ಮಗು ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಂದು ಮಗು ಆಸ್ಪತ್ರೆಯಲ್ಲಿ ಮೃತಪಟ್ಟಿತು ಎಂದು ತಿಳಿದು ಬಂದಿದೆ. ಹಿಬಾ ಅವರ ಸಹೋದರಿಯ ಮಗಳು ಫಾತಿಮಾ ಗಂಭೀರ ಗಾಯಗೊಂಡಿದ್ದರೆ, ಮತ್ತೋರ್ವ ಸಹೋದರಿಯ ಮಗ ಪ್ರಾಣಾಪಾಯವಿಲ್ಲದೆ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.
ಉಡುಪಿ ಮಲಬಾರ್ ಗೋಲ್ಡ್ನಲ್ಲಿ ಹಫೀಝ್ ರೆಹಮಾನ್ಗೆ ಬೀಳ್ಕೊಡುಗೆ ಉಡುಪಿ : ಉಡುಪಿ ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ಸ್ ಶಾಖೆಯಲ್ಲಿ ಕಳೆದ…
ಫಲ್ಗುಣಿ ನದಿಯಲ್ಲಿ ಮಗುಚಿ ಬಿದ್ದ ದೋಣಿ: ಇಬ್ಬರು ಯುವಕರು ನೀರುಪಾಲು ಮೀನುಗಾರಿಕೆಗೆ ತೆರಳಿದ್ದಾಗ ಆಕಸ್ಮಿಕವಾಗಿ ದೋಣಿ ಮುಗುಚಿ ಇಬ್ಬರು ಯುವಕರು…
ನಮ್ಮದು ಪಕ್ಷಾತೀತ ಅಭಿವೃದ್ಧಿಪರ ಸರ್ಕಾರ.. ದಲಿತರಿಗೆ ಮೀಸಲಾತಿ ತಂದವರು ನಾವು .. ರಾಜ್ಯದಲ್ಲಿ ಬಿಜೆಪಿ ಸ್ವಂತ ಬಲದಿಂದ ಯಾವತ್ತೂ ಅಧಿಕಾರಕ್ಕೆ…
ಕಾಪು : 94/ಸಿಯಡಿ ಹಕ್ಕುಪತ್ರ ; ಉಚಿತ ಉಪಕರಣಗಳ ವಿತರಣೆ ಕಾಪು : ವಿಧಾನಸಭಾ ಕ್ಷೇತ್ರದ ಕಾಪು ತಾಲ್ಲೂಕು ವ್ಯಾಪ್ತಿಯ…
ರೈಲ್ವೆ ಇಲಾಖೆಯ 5 ಹೊಸ ನಿಯಮ ಜಾರಿ: ತತ್ಕಾಲ್ ಬುಕಿಂಗ್ಗೆ ಆಧಾರ್ ಕಡ್ಡಾಯ; ರೀಫಂಡ್ ನಿಯಮ ಹೇಗಿದೆ? ರೈಲ್ವೆ ಇಲಾಖೆಯ…
ಉಡುಪಿ: ಯುವ ಪತ್ರಕರ್ತ ಪ್ರಶಾಂತ ಪಾದೆಗೆ ‘ಮಂಡಿಬೆಲೆ ಶಾಮಣ್ಣ ಸ್ಮಾರಕ ಪ್ರಶಸ್ತಿ’ ಉಡುಪಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ)ದ 2024ನೇ…